ನವದೆಹಲಿ: ಕುಸಿಯುತ್ತಿರುವ ಆರ್ಥಿಕ ಬೆಳವಣಿಗೆ, ಬೆಲೆ ಏರಿಕೆ, ಉದ್ಯೋಗ ಅಲಭ್ಯತೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆರ್ಥಿಕತೆಗೆ ಉತ್ತೇಜನ ನೀಡೋದಕ್ಕೆ ವಯಾಗ್ರ ನೀಡುವಂತೆಯೂ ವ್ಯಂಗ್ಯವಾಡಿದೆ. ಮೋದಿ ಸರ್ಕಾರ ಆರ್ಥಿಕ ಬೆಳವಣಿಗೆ ಹೆಚ್ಚಾಗಿದೆ ಅಂತಾ ಹೇಳ್ತಿತ್ತು. ಆದ್ರೆ ಏರಿಕೆ ಆಗಿರೋದು ಪೆಟ್ರೋಲ್, ಗ್ಯಾಸ್ ಬೆಲೆಯಲ್ಲಿ. ನಿರುದ್ಯೋಗ ಹೆಚ್ಚಾಗಿದೆ. ಮೂರುವರೆ ವರ್ಷ ಅಧಿಕಾರ ನಡೆಸಿದ ಬಳಿಕವೂ ಹೀಗಾದ್ರೆ ದೇಶ ಎತ್ತ ಸಾಗಲಿದೆ..? ಆರ್ಥಿಕತೆಯ ಸುಧಾರಣೆಗೆ ವಯಾಗ್ರ ನೀಡೋದು ಒಳ್ಳೆದು ಅಂತಾ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
Advertisement
ನೋಟು ನಿಷೇಧ ಅನ್ನೋದೇ ಬೇಡವಾಗಿತ್ತು. ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ನೋಟು ನಿಷೇಧದಂತಹ ದುಸ್ಸಾಹಸ ಬೇಡವಾಗಿತ್ತು. ಯಾವ ನಾಗರಿಕ ಅರ್ಥವ್ಯವಸ್ಥೆಯಲ್ಲೂ ಅದು ಸಫಲವಾಗಿಲ್ಲ ಅಂತಾ ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
Advertisement
ಇನ್ನು ಪ್ರಧಾನಿ ಮೋದಿ ಸರ್ಕಾರ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ಕೊಟ್ಟರೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ತಮಗೆ ತಿಳಿದಿರುವ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 15 ಲಕ್ಷದಿಂದ 1 ಕೋಟಿ ರೂಪಾಯಿ ಗೆಲ್ಲಬಹುದು ಅಂತ ನೇರ ತೆರಿಗೆಗೆಳ ಕೇಂದ್ರೀಯ ಮಂಡಳಿ ಹೇಳಿದೆ. ಬೇನಾಮಿ ಮಾಹಿತಿ ಕೊಟ್ಟವರ ಮಾಹಿತಿಯನ್ನು ಸುರಕ್ಷತೆಯ ಕಾರಣಕ್ಕಾಗಿ ಗೌಪ್ಯವಾಗಿ ಇಡಲಾಗುತ್ತದೆ ಎನ್ನಲಾಗಿದೆ.