ಬೆಂಗಳೂರು: ಗುರುಗ್ರಾಮದ ಪಂಚತಾರಾ ಹೋಟೆಲ್‍ನಲ್ಲಿರುವ ಬಿಜೆಪಿ ಶಾಸಕರಿಗೆ ಕರ್ನಾಟಕ ಕಾಂಗ್ರೆಸ್ ಮಂಗಳವಾರ ರಾತ್ರಿ ವಿಶೇಷವಾಗಿ ಶುಭಾಶಯ ತಿಳಿಸಿದೆ.
ಕರ್ನಾಟಕ ಕಾಂಗ್ರೆಸ್‍ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ, ರೆಸಾರ್ಟ್ ಬಂಧನದಲ್ಲಿರುವ ಬಿಜೆಪಿಯ 104 ಶಾಸಕರಿಗೆ ಸಂಕ್ರಾಂತಿಯ ಶುಭಾಶಯಗಳು. ಗೋಮಾತೆ ಬಗ್ಗೆ ಅತಿ ಹೆಚ್ಚು ಮಾತನಾಡುವವರು ಇಂದು ಗೋವುಗಳನ್ನು ಕಿಚ್ಚು ಹಾಯಿಸದೆ, ಅವುಗಳ ಪೂಜೆ ಮಾಡದೇ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿದ್ದಾರೆ. ಕುಟುಂಬದವರೊಂದಿಗೆ ಸಂಕ್ರಾಂತಿ ಆಚರಣೆಯನ್ನೂ ಮಾಡಲಾಗದ ಹಕ್ಕುಗಳ ಹರಣ ಬಿಜೆಪಿಯಿಂದ ತಮ್ಮ ಶಾಸಕರ ಮೇಲೆಯೇ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ರೆಸಾರ್ಟ್ ಬಂಧನದಲ್ಲಿರುವ @BJP4Karnataka ಶಾಸಕರಿಗೆ ಸಂಕ್ರಾಂತಿಯ ಶುಭಾಶಯಗಳು
ಗೋಮಾತೆ ಬಗ್ಗೆ ಅತಿ ಹೆಚ್ಚು ಮಾತನಾಡುವವರು ಇಂದು ಗೋವುಗಳನ್ನು ಕಿಚ್ಚು ಹಾಯಿಸದೆ ಅದರ ಪೂಜೆ ಮಾಡದೆ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿದ್ದಾರೆ
ಕುಟುಂಬದವರೊಂದಿಗೆ ಸಂಕ್ರಾಂತಿ ಆಚರಣೆಯನ್ನೂ ಮಾಡಲಾಗದ ಹಕ್ಕುಗಳ ಹರಣ ಬಿಜೆಪಿಯಿಂದ ತಮ್ಮ ಶಾಸಕರ ಮೇಲೆಯೇ ಆಗಿದೆ.
— Karnataka Congress (@INCKarnataka) January 15, 2019
ಈ ಟ್ವೀಟ್ ನೋಡಿದ ಕೆಲ ನೆಟ್ಟಿಗರು ಕಾಂಗ್ರೆಸ್ ಕಾಲೆಳೆದಿದ್ದಾರೆ. ರೆಸಾರ್ಟ್ ಹೊರಗಡೆ ಇದ್ದೂ ಕೂಡ ಹಬ್ಬ ಸೆಲೆಬ್ರೇಟ್ ಮಾಡದೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿರುವ ತಮಗೂ ಹಬ್ಬದ ಶುಭಾಶಯಗಳು. ವಿಧಾನಸಭಾ ಚುನಾವಣೆ ಮುಗಿದ ಮೇಲೆ ನಿಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿ, ಅವರಿಗೆ ಹೆಚ್ಚು ಹಕ್ಕುಗಳನ್ನು ಕೊಟ್ಟಿದ್ರಿ ಅಲ್ವಾ ಎಂದು ಸೋಮು ಸಜ್ಜನ್ ಎಂಬವರು ಟಾಂಗ್ ಕೊಟ್ಟಿದ್ದಾರೆ.
ಮೈತ್ರಿ ಸರ್ಕಾರ ರಚಿಸುವ ಮೊದಲು ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಿದ್ದೀರಿ ಅಲ್ಲವೇ? ಗುಜರಾತಿನಿಂದ ಕೆಲ ಶಾಸಕರನ್ನು ರಾಜ್ಯಕ್ಕೆ ಕರೆತಂದು ಬಿಡದಿಯಲ್ಲಿ ಇಟ್ಟವರು ನೀವಲ್ಲವೇ? ಬೆರಳು ತೋರಿಸಲು ನಾಚಿಕೆ ಇಲ್ಲವೇ ಎಂದು ಸಂತೋಷ್ ಪ್ರಭು ಎಂಬವರು ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv