ಕೋಲಾರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಇವರು ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವಂತಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಕ್ಕೆ ಸಾವಿರ ಶಾ ಮತ್ತು ಮೋದಿ ಬಂದರೂ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಬಿಜೆಪಿ ಸರ್ಕಾರದ್ದು ಮನ್ ಕೀ ಬಾತ್, ನಮ್ಮದು ಕಮ್ ಕೀ ಬಾತ್. ದೇಶದಲ್ಲಿ ಕಪ್ಪು ಹಣ ತಂದು ಬಡವರ ಖಾತೆಗೆ ಹಾಕುತ್ತೇನೆ ಎಂದ ಬಿಜೆಪಿ ಸರ್ಕಾರ ಹದಿನೈದು ರೂಪಾಯಿ ನೀಡಿಲ್ಲ ಎಂದು ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಅವರನ್ನು ಟೀಕಿಸಿದರು.
Advertisement
2018ರ ಚುನಾವಣೆ ಪ್ರಚಾರ ಕಾರ್ಯ ಕೋಲಾರದ ಮೂಡಣ ಬಾಗಲಿನಿಂದ ಚುನಾವಣೆ ಕಾರ್ಯ ಪ್ರಾರಂಭ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ 6 ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ. ಕುಡಿಯುವ ನೀರಿನ ಯೋಜನೆಯನ್ನು ಯಾವುದೇ ಸರ್ಕಾರ ನೀಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಕೋಲಾರಕ್ಕೆ ಎರಡು ಯೋಜನೆ ನೀಡಿದೆ ಎಂದು ತಿಳಿಸಿದರು.
Advertisement
ಜನವರಿ 1 ರಿಂದ ಜಿಲ್ಲೆಯಾದಂತ್ಯ ಆಸ್ಪತ್ರೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಎಲ್ಲಾ ತಾಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ ಎಂದು ತಿಳಿಸಿದರು. ಇದು ನಮ್ಮ ಸರ್ಕಾರದ ಸಾಧನೆ ಯಡಿಯೂರಪ್ಪ ಮಾತ್ರ ಯಾವಾಗಲೂ ಸೈಕಲ್ ಕೊಟ್ಟಿದೀವಿ, ಸೀರೆ ಕೊಟ್ಟಿದ್ದೀವಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿ ಮಿಷನ್ 150 ಎಂದು ಓಡಿಕೊಂಡಿದ್ದವರಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಿದ್ದೇವೆ. ಅಮಿತ್ ಶಾ ಬಂದ ನಂತರ ಅದು 150 ಪ್ಲಸ್ ಅಂತಾರೆ ಎಂದು ಲೇವಡಿ ಮಾಡಿದರು.
Advertisement
ಇವತ್ತು ಕೋಲಾರದಲ್ಲಿ ಆಯೋಜನೆ ಮಾಡಲಾಗಿದ್ದ ಕಾಂಗ್ರೆಸ್ ಸಮಾವೇಶ 3 ಗಂಟೆಗಳ ಕಾಲ ನಡೆಯಿತು. 1 ಗಂಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ಮೊದಲಿಗೆ ಮುಳಬಾಗಿಲು ಕುರುಡುಮಲೆ ವಿನಾಯಕನಿಗೆ, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು. ನಂತರ ಮುಳಬಾಗಿಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹೈದರಾಲಿ ದರ್ಗಾಕ್ಕೆ ಬೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ಗೆ ಮಳೆ ಅಡ್ಡಿಪಡಿಸಿತು. ಆದರೂ ಎಲ್ಲರೂ ಮಳೆಯಲ್ಲಿ ನೆನೆಯುತ್ತಲೇ ತಮ್ಮ ಸಂಚಾರ ಮುಂದುವರೆಸಿದರು. ನಂತರ ಮೂರು ಗಂಟೆಗಳ ಕಾಲ ತಡವಾಗಿ ಆರಂಭವಾದ ಸಮಾವೇಶದಲ್ಲಿ ಜನರೆಲ್ಲ ಮನೆಯತ್ತ ಮುಖ ಮಾಡಿದ್ದರು. ಅಲ್ಲದೆ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭವಾಗುವಷ್ಟರಲ್ಲಿ ಜನರೆಲ್ಲ ಖಾಲಿಯಾಗಿದ್ದರು.
Advertisement