ಧಾರವಾಡ: ಮೇಯರ್ ಬೆನ್ನ ಮೇಲೆಯೂ ಕಾರ್ಯಕರ್ತರು ಪೋಸ್ಟರ್ ಅಂಟಿಸ್ತಾರೆ ಎಂದು ಮೇಯರ್‌ಗೆ ಕಾಂಗ್ರೆಸ್ (Congress) ಮುಖಂಡ ರಜತ್ ಉಳ್ಳಾಗಡ್ಡಿಮಠ ತಿರುಗೇಟು ನೀಡಿದರು.
ಹುಬ್ಬಳ್ಳಿ (Hubballi) -ಧಾರವಾಡದಲ್ಲಿ ಪೇ ಮೇಯರ್ ಅಭಿಯಾನ (Pay Mayor) ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಮೇಯರ್ ದೂರು ನೀಡಿದ ವಿಚಾರವಾಗಿ ಮಾತನಾಡಿದ ಅವರು, ನಾನಂತೂ ಆ ಅಭಿಯಾನ ಆರಂಭಿಸಿರಲಿಲ್ಲ. ಅದು ಸಾರ್ವಜನಿಕರು ಶುರು ಮಾಡಿದ ಅಭಿಯಾನವಾಗಿದೆ. ಆದರೆ ಹುಬ್ಬಳ್ಳಿ ಧಾರವಾಡದ ಮೇಯರ್ ಅವರು, ನಾನು ಮತ್ತು ನಮ್ಮ ಕಾರ್ಯಕರ್ತರು ಆರಂಭಿಸಿದ್ದಾರೆಂದು ದೂರು ಕೊಟ್ಟಿದ್ದಾರೆ. ನಾವು ಕಾಂಗ್ರೆಸ್‌ನವರು ಬ್ರಿಟಿಷರ ಲಾಠಿಗೆ ಹೆದರಿಲ್ಲ, ಇನ್ನು ಆರ್‌ಎಸ್‌ಎಸ್ ಲಾಠಿಗೆ ಹೆದರುವ ಪರಿಸ್ಥಿತಿ ನಮಗೆ ಬಂದಿಲ್ಲ ಎಂದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲೀಗ `PAY MAYOR’ ಅಭಿಯಾನ
ಪೊಲೀಸರ ಬಲ ಪ್ರಯೋಗ ಮಾಡಿದರೆ ಮೇಯರ್ ಕಚೇರಿಗೂ ಬಂದು ಸ್ಟಿಕರ್ ಹಚ್ಚುತ್ತಾರೆ, ನಮ್ಮ ಕಾರ್ಯಕರ್ತರು ನಿಮ್ಮ ಕಚೇರಿಗೂ ಬಂದು 40 ಪರ್ಸೆಂಟ್ ಮೇಯರ್ ಸ್ಟಿಕರ್ ಅಂಟಿಸುತ್ತಾರೆ. ನಿಮ್ಮ ಕಾರು ಮೇಲೆಯೂ ಸ್ಟಿಕರ್ ಅಂಟಿಸುತ್ತಾರೆ. ಅಷ್ಟೇ ಅಲ್ಲದೇ ನಿಮ್ಮ ಬೆನ್ನ ಮೇಲೆಯೂ ಸ್ಟಿಕರ್ ಅಂಟಿಸಿದರೆ ಆಶ್ಚರ್ಯವಿಲ್ಲ, ದಯಮಾಡಿ ರಾಷ್ಟ್ರಪತಿ ಕಾರ್ಯಕ್ರಮದ ಲೆಕ್ಕ ಕೊಡಿ. ಮೈದಾನ, ಅಡುಗೆ ಉಚಿತವಾಗಿ ಸಿಕ್ಕಿದೆ. ಅದಕ್ಕಾಗಿ ತೆರಿಗೆದಾರರ ಹಣ ಹಾಳು ಮಾಡಬೇಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: RSSನ ಕೂದಲನ್ನು ಸಹ ಮುಟ್ಟಲು ಸಾಧ್ಯವಿಲ್ಲ – ಸಿದ್ದರಾಮಯ್ಯಗೆ ಬಿ.ವೈ.ರಾಘವೇಂದ್ರ ತಿರುಗೇಟು