ನವದೆಹಲಿ : ಅದಾನಿ ಕಂಪನಿಗಳ ಬಗ್ಗೆ ಹಿಂಡೆನ್‌ಬರ್ಗ್ ನೀಡಿದ ವರದಿ ಆಧರಿಸಿ ಸಂಸತ್ತಿನ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ದೇಶದ್ಯಾಂತ ಪ್ರತಿಭಟನೆ ಆರಂಭಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಗೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಮನವಿ ಮಾಡಿದ್ದು, ಅವಕಾಶ ಸಿಗದ ಹಿನ್ನೆಲೆಯಲ್ಲಿ ದೇಶದ್ಯಾಂತ ಎಸ್‌ಬಿಐ ಮತ್ತು ಎಲ್‌ಐಸಿ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕರೆ ನೀಡಿತ್ತು.
Advertisement
Advertisement
ಪಕ್ಷದ ಮುಖಂಡರ ಸೂಚನೆ ಮೇರೆಗೆ ಜಮ್ಮು ಕಾಶ್ಮೀರ (Jammu Kashmir), ದೆಹಲಿ (New Delhi), ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು ಪ್ರತಿಭಟನೆ (Protest) ಆರಂಭಿಸಿದ್ದಾರೆ. ಚೆನ್ನೈನ (Chennai) ಜಿ.ಪಿ ರಸ್ತೆಯಲ್ಲಿರುವ ಎಲ್‌ಐಸಿ ದಕ್ಷಿಣ ವಲಯ ಕಚೇರಿಯ ಮುಂದೆ, ಮುಂಬೈನ (Mumbai) ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಇದನ್ನೂ ಓದಿ: ಸ್ವಕ್ಷೇತ್ರದ ಗ್ರಾಮಸ್ಥರಿಂದ ಸಚಿವರಿಗೆ ತರಾಟೆ – ಕಕ್ಕಾಬಿಕ್ಕಿಯಾದ ಹಾಲಪ್ಪ ಆಚಾರ್
Advertisement
ಜಮ್ಮುದಲ್ಲೂ ಪ್ರತಿಭಟನೆ ತೀವ್ರಗೊಂಡಿದ್ದು, ಬ್ಯಾರಿಕೇಡ್‌ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇನ್ನು ದೆಹಲಿಯಲ್ಲೂ ಎನ್‌ಎಸ್‌ಯುಐ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ (Karnataka) ಪ್ರತಿಭಟನೆ ಬಿಸಿ ಮುಟ್ಟಿದ್ದು ಕೈ ನಾಯಕರು ಬೆಂಗಳೂರಿನಲ್ಲಿ (Bengaluru) ಪ್ರತಿಭಟನೆ ನಡೆಸಿದ್ದಾರೆ.
Advertisement
ಅದಾನಿ (Gautam Adani) ದೊಡ್ಡ ಮಟ್ಟದ ಅಕ್ರಮ ನಡೆಸಿದ್ದಾರೆ. ಎಸ್‌ಬಿಐ ಮತ್ತು ಎಲ್‌ಐಸಿಯಂತಹ ಸಾರ್ವಜನಿಕ ಸಂಸ್ಥೆಗಳು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಜನರು ದೊಡ್ಡ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಯಬೇಕು ಎಂದು ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾವು ಅಡುಗೆ ಮಾಡುತ್ತಿದ್ದೇವೆ, ಅವರು ಬಡಿಸೋಕೆ ಬರುತ್ತಿದ್ದಾರೆ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k