ನವದೆಹಲಿ: 22 ವರ್ಷಗಳ ಬಳಿಕ ಎಐಸಿಸಿ (AICC) ಅಧ್ಯಕ್ಷ ಗಾದಿಗೆ ಚುನಾವಣೆ ನಡೆದಿದೆ. ಬೆಳಗ್ಗೆ 10ರಿಂದ ಸಂಜೆ 4ರವರೆಗೂ ಮತದಾನ ನಡೆದಿದ್ದು, ಶೇಕಡಾ 96 ರಷ್ಟು ವೋಟಿಂಗ್ ಆಗಿದೆ. ರಾಜ್ಯದಲ್ಲಿ ಶೇಕಡಾ 100ರಷ್ಟು ಮತದಾನ ಆಗಿದೆ.
Advertisement
ಕಣದಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಶಶಿ ತರೂರ್ (Shashi Tharur) ಇದ್ದು, ನಾಡಿದ್ದು ಫಲಿತಾಂಶ ಹೊರಬೀಳಲಿದೆ. ಸೋನಿಯಾ ಗಾಂಧಿ (Sonia Gandhi) ಅತ್ಯಾಪ್ತರಲ್ಲಿ ಒಬ್ಬರಾಗಿರುವ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗೋದು ಬಹುತೇಕ ಪಕ್ಕಾ ಆಗಿದೆ. ಅಧಿಕೃತ ಪ್ರಕಟಣೆಯಷ್ಟೇ ಹೊರಬೀಳಬೇಕಿದೆ. ಈಗಾಗಲೇ ಖರ್ಗೆಯನ್ನು ಸಿದ್ದರಾಮಯ್ಯ, ಡಿಕೆಶಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್
Advertisement
Advertisement
ಬೆಂಗಳೂರಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (D K Shivakumar), ಬಳ್ಳಾರಿಯಲ್ಲಿ ರಾಹುಲ್ ಗಾಂಧಿ (Rahul Gandhi), ದೆಹಲಿಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ (Priyank Gandhi), ಮನಮೋಹನ್ ಸಿಂಗ್ (Manmohan Singh), ತಿರುವನಂತಪುರದಲ್ಲಿ ಶಶಿ ತರೂರ್, ಕೊಲ್ಕೊತಾದಲ್ಲಿ ಅಧೀರ್ ರಂಜನ್ ಚೌಧರಿ ಸೇರಿ ದೇಶದ ವಿವಿಧೆಡೆ 9000 ಕಾಂಗ್ರೆಸ್ ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ರು. ಈ ಕ್ಷಣಕ್ಕಾಗಿ ಬಹಳದಿನಗಳಿಂದ ಎದಿರು ನೋಡ್ತಿದ್ದೆ ಎಂದು ಸೋನಿಯಾ ಗಾಂಧಿ ಹೇಳಿದ್ರು.
Advertisement
ನಮ್ಮ ನಡ್ವೆ ಯಾವುದೇ ಶತ್ರುತ್ವವಿಲ್ಲ, ಇಬ್ಬರೂ ಮಿತ್ರರು ಅಂತ ಖರ್ಗೆ ಹಾಗೂ ತರೂರ್ ಹೇಳಿಕೊಂಡಿದ್ದಾರೆ. ನಾಳೆ ಆಂಧ್ರದಲ್ಲಿ ರಾಹುಲ್ ಪಾದಯಾತ್ರೆ ಮುಂದುವರಿಯಲಿದೆ. ಭಾರತ್ ಜೋಡೋ ಯಾತ್ರೆ ಬಳಿಕ ಕರಾವಳಿ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಯಾತ್ರೆ ಮೂಲಕ ಪಕ್ಷ ಸಂಘಟಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.