ಬೆಂಗಳೂರು: ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ದರ್ಪ ಮೆರೆದಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ಕಾರ್ಯಕ್ರಮ ನಿಗಧಿಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಇದು ಕೆಪಿಸಿಸಿ ಕಾರ್ಯಕ್ರಮ ಅಲ್ಲ ಎಐಸಿಸಿ ಕಾರ್ಯಕ್ರಮ ನೆನಪಿರಲಿ ಎಂದು, ಪೊಲೀಸರ ಮೂಲಕ ಮಾಧ್ಯಮದವರು ಒಳ ಪ್ರವೇಶಿಲು ತಡೆ ನೀಡಲಾಗಿದೆ. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದ ವೇಳೆಯಲ್ಲಿ ರಮ್ಯಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
Advertisement
Advertisement
ಕನ್ನಡದ ಮಹಿಳಾ ಸಾಧಕಿಯರ ಜೊತೆ ರಾಹುಲ್ ಅವರ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಜವಾಬ್ದಾರಿಯನ್ನು ರಮ್ಯಾ ಅವರಿಗೆ ವಹಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಆಹ್ವಾನ ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರರು ಹೇಳಿದ್ದಾರೆ.
Advertisement
ಇದಕ್ಕೂ ಮುನ್ನ ರಾಹುಲ್ ಅವರು ಸತತವಾಗಿ ಎರಡು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಮಹಿಳಾ ಸಾಧಕರೊಂದಿಗಿನ ರಾಹುಲ್ ಸಂವಾದ ಕಾರ್ಯಕ್ರಮಕ್ಕೆ ಮಾತ್ರ ಮಾಧ್ಯಮಗಳ ಪ್ರವೇಶ ನಿರಾಕರಿಸಲಾಗಿದೆ.
Advertisement
https://www.youtube.com/watch?v=bkjsKKPuk24