ಚಾಮರಾಜನಗರ: ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸವನ್ನು ಮಾಡಿದ್ದೇವೆ ಎನ್ನುವ ಮೂಲಕ ಶಿಕ್ಷಣ ಸಚಿವ ಎನ್.ಮಹೇಶ್ ಕಾಂಗ್ರೆಸ್ ಪಕ್ಷದ ವಿರುದ್ಧ ವಿಡಂಬನಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಗಿಡ ತುಂಬಾ ಅಪಾಯಕಾರಿ, ಹೀಗಾಗಿ ಅದನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಲೇ ಕಾರ್ಯಕರ್ತರು ಸಾರ್ ಅದು ಪಾರ್ತೇನಿಯಂ ಗಿಡ ಎಂದರು. ಆದರೂ ಸಹ ಅದು ಕಾಂಗ್ರೆಸ್ ಗಿಡ ಅದಕ್ಕೆ ಕಿತ್ತಿ ಹಾಕಿದ್ದೀವಿ ಎನ್ನುವ ಹೇಳಿಕೆ ನೀಡಿದರು.
ಕೊಳ್ಳೆಗಾಲ ನಗರಸಭೆಯಲ್ಲಿ ಬಿಎಸ್‍ಪಿ ಜೊತೆ ಕಾಂಗ್ರೆಸ್ ಸೇರಿ ಮೈತ್ರಿಗೆ ಮುಂದಾದರೆ ನಿರ್ಲಕ್ಷ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯೊಂದಿಗೆ ಬಿಎಸ್‍ಪಿಯವರು ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಹೀಗಾಗಿ ಪರೋಕ್ಷವಾಗಿ ನಾವು ಕಾಂಗ್ರೆಸ್‍ನನ್ನು ಕೊಳ್ಳೆಗಾಲದಲ್ಲಿ ನಿರ್ಮೂಲನೆ ಮಾಡಿದ್ದೇವೆ ಎನ್ನುವ ಅರ್ಥದಲ್ಲಿ ಸಚಿವರ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ದೋಸ್ತಿ ಸರ್ಕಾರದ ಪ್ರಭಾವಿ ಸಚಿವರೇ ಕಾಂಗ್ರೆಸ್ ನಿರ್ಮೂಲನೆ ಹೇಳಿಕೆ ಸಾಕಷ್ಟು ಕುತೂಹಲ ಕೆರೆಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv