ಬೆಂಗಳೂರು: ಲೋಕಸಭಾ ಚುನಾವಣೆ (Loksabha Election) ವೇಳೆ ಬಿಜೆಪಿ ಅಯೋಧ್ಯೆಗೆ (Ayodhya) ರಾಮಭಕ್ತರನ್ನು ಕರೆದುಕೊಂಡು ಹೋಗುವ ಪ್ಲ್ಯಾನ್ ರೂಪಿಸಿದೆ. ಇದಕ್ಕೆ ಠಕ್ಕರ್ ಕೊಡಲು ಈಗ ಕಾಂಗ್ರೆಸ್ ಸರ್ಕಾರವೂ ಸಜ್ಜಾಗಿದೆ.
ಈಗಾಗಲೇ ಮುಜರಾಯಿ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ಕಾಶಿ ರೈಲು ಯಾತ್ರೆ ಇದೆ. ರಿಯಾಯಿತಿ ದರದಲ್ಲಿ ಕಾಶಿ ಸೇರಿದಂತೆ ಅನೇಕ ಪುಣ್ಯ ಕ್ಷೇತ್ರಗಳಿಗೆ ಜನರು ಬುಕ್ ಮಾಡಿ ಹೋಗಬಹುದಾಗಿದೆ. ಈಗ ಈ ಪ್ಲ್ಯಾನ್‍ನಲ್ಲಿ ಮುಜರಾಯಿ ಇಲಾಖೆಯು ಅಯೋಧ್ಯೆಯನ್ನು ಕೂಡ ಸೇರಿಸಿಕೊಳ್ಳಲಿದೆ.
Advertisement
Advertisement
ಮಾರ್ಚ್‍ನಲ್ಲೇ ಯಾತ್ರೆ ಭಾಗ್ಯ: ಸದ್ಯ ಈಗ ವಿಪರೀತ ಚಳಿ ಇರೋದ್ರಿಂದ ಮಾರ್ಚ್‍ನಲ್ಲಿ ಮುಜರಾಯಿಯಿಂದ ಅಯೋಧ್ಯೆ ಯಾತ್ರೆ ಭಾಗ್ಯ ಸಿಗಲಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಮುಜರಾಯಿ ಇಲಾಖೆ ಸಚಿವ ಸ್ಪಷ್ಟಪಡಿಸಿದ್ದು, ಜನರ ಬೇಡಿಕೆಗೆ ತಕ್ಕಂತೆ ಕಡಿಮೆ ದರದಲ್ಲಿ ಯಾತ್ರೆಯನ್ನು ಕಲ್ಪಿಸಲಿದ್ದೇವೆ. ಹೊಸ ಆಯೋಧ್ಯೆಯ ಯಾತ್ರೆಯೂ ಇದ್ರಲ್ಲಿದೆ ಅಂತೇಳಿದ್ದಾರೆ.
Advertisement
Advertisement
ಒಟ್ಟಾರೆ ರಾಜಕೀಯ ಕಾರಣಕ್ಕೆ ಪರಸ್ಪರ ಠಕ್ಕರ್ ಕೊಡೋದಕ್ಕೆ ಆಯೋಧ್ಯೆ ಯಾತ್ರೆ ಜಾರಿಗೆ ತಂದ್ರೋ ಗೊತ್ತಿಲ್ಲ. ಆದರೆ ರಾಜ್ಯದ ಜನರಿಗಂತೂ ನಿಜಕ್ಕೂ ಇದು ಗುಡ್‍ನ್ಯೂಸ್ ಆಗಿದೆ. ಇದನ್ನೂ ಓದಿ: ಧನ್ಯವಾದಗಳು ಅಯೋಧ್ಯೆ – ಧರ್ಮಭೂಮಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ ಮೈಸೂರಿನ ಶಿಲ್ಪಿ