ಲಕ್ನೋ: ಭಯೋತ್ಪಾದಕರನ್ನು ಬೆಳೆಸಿದ ಕಾಂಗ್ರೆಸ್, ಹಿಂದೂ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಮ್ಮ ವಿರುದ್ಧ ಪ್ರತಿಪಕ್ಷಗಳು ಸುಳ್ಳು ಆರೋಪವನ್ನು ಮಾಡುತ್ತಿದೆ ಎಂಬ ಹಿನ್ನೆಲೆ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮುಖಂಡರ ವಿರುದ್ಧ ಕಾಂಗ್ರೆಸ್ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ. ಆದರೆ ಅವರು ಭಯೋತ್ಪಾದಕರನ್ನು ಬೆಳಸುತ್ತಿದ್ದಾರೆ. ಹಿಂದೆಯೂ ಮಹಾರಾಷ್ಟ್ರದ ಎಟಿಎಸ್ ಅವರು ಬಿಜೆಪಿ, ಆರ್‍ಎಸ್‍ಎಸ್ ನಾಯಕರು ಮತ್ತು ಹಿಂದೂ ಮುಖಂಡರ ಮೇಲೆ ಸುಳ್ಳು ಕೇಸ್ ಹಾಕುತ್ತಿದ್ದರು ಎಂಬುದನ್ನು ನೀವು ನೋಡಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ
Advertisement
Advertisement
2008ರಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು. ಈ ಪ್ರಕರಣವನ್ನು ನಮ್ಮ ತಪ್ಪು ಎಂದು ಬಿಂಬಿಸಲು ಎಟಿಎಸ್ ಕುತಂತ್ರ ಮಾಡಿತ್ತು. ಇದು ಅವರ ತಪ್ಪು ಎಂದು ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ಭಯೋತ್ಪಾದಕರಿಗೆ ಸ್ಫೂರ್ತಿಯನ್ನು ನೀಡುತ್ತಿದ್ದರು. ಅವರನ್ನು ಪೋಷಣೆ ಮಾಡುತ್ತಿದ್ದರು. ಈಗ ಅವರು ವಿರೋಧ ಪಕ್ಷದಲ್ಲಿದ್ದಾರೆ. ಅದಕ್ಕೆ ಅವರು ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸಿ ಪ್ರತಿಭಟಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ: ಡಾ.ಭುಜಂಗ ಶೆಟ್ಟಿ