DistrictsHassanKarnatakaLatestMain Post

ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ

Advertisements

ಹಾಸನ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು? ನಾನು ಪ್ರಧಾನಿಯಾಗಿದ್ದೆ, ಮುಖ್ಯಮಂತ್ರಿಯಾಗಿದ್ದೆ. ಈ ದೇಶದಲ್ಲಿ ನನ್ನ ಕಾಲದಲ್ಲಿ ಮತಾಂತರ ಆಗುವ ಒಂದು ಘಟನೆ ನಡೀತಾ? ನನ್ನ ಆಡಳಿತದಲ್ಲಿ ಹಿಂದೂಸ್ಥಾನದಲ್ಲಿ, ಕರ್ನಾಟಕದಲ್ಲಿ ಮತಾಂತರ ಆಗಿದಿಯಾ? ಈಗ ಯಾಕೇ ಅದು ಶುರುವಾಯ್ತು ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ದೆಹಲಿ, ಮುಂಬೈನಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ?

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಕಾಂಗ್ರೆಸ್ ಕಾಲದಲ್ಲಿ ಬಿಲ್ ತಂದರೂ ಪಾಸಾಗಲಿಲ್ಲ. ಇವರು ಪಾಸ್ ಮಾಡಲು ಹೊರಟಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ತೀವ್ರವಾಗಿ ವಿರೋಧಿಸಿದ್ದಾರೆ. ರೇವಣ್ಣ, ತಿಪ್ಪೇಸ್ವಾಮಿ ವಿರೋಧಿಸಿದ್ದಾರೆ. ಯಾರೂ ಅಧಿಕಾರ ನಡೆಸುತ್ತಾರೋ ಅವರು ಎಲ್ಲರ ವಿಶ್ವಾಸ ಗಳಿಸಿಕೊಂಡರೆ ಇವೆಲ್ಲಾ ಬರಲ್ಲ ಎಂದು ಕಿಡಿಕಾರಿದರು.

ಆಶೋಕನ ಕಾಲದಲ್ಲಿ ಬುದ್ಧಿಸಂಗೆ ಹೋದರು. ಅದಕ್ಕೆ ಕಾರಣ ಅವರ ಸಂಸಾರದಲ್ಲಿ ನಡೆದ ಅಪಾರ ಘಟನೆಗಳು. ಅದರ ಬಗ್ಗೆ ನಾನು ಓದಿದ್ದೀನೆ. ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಯೂಟ್ಯೂಬ್ ನಲ್ಲಿ ಬರುತ್ತೆ ಎಂದರು. ಇದನ್ನೂ ಓದಿ: ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ: ಡಾ.ಭುಜಂಗ ಶೆಟ್ಟಿ

ನಾನು ಲಘುವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅದರಿಂದ ಸಮಸ್ಯೆ ಬಗೆಹರಿದರೆ ಸಂತೋಷ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದರು.

Leave a Reply

Your email address will not be published.

Back to top button