ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನಡೆದಾಗ ಬರಲಿಲ್ಲ, ಇದೀಗ ಅಧಿಕಾರಕ್ಕಾಗಿ ಇಷ್ಟೊಂದು ನಾಟಕವೇ?: ಸುಧಾಕರ್

Public TV
2 Min Read
CONGRESS

ಬೆಂಗಳೂರು: ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮ ನಡೆದಾಗ ಭಾರತ್ ಜೋಡೋ ಯಾತ್ರೆ (Bharat Jodo Yatra) ನೆನಪಾಗಲಿಲ್ಲ. ಮುಂಬಯಿ ಮೇಲೆ ಉಗ್ರರ ದಾಳಿ, ಬೋಧ ಗಯಾದಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಸಹಬಾಳ್ವೆಯ ನೆನಪಾಗಲಿಲ್ಲ. ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನಡೆದಾಗ ಶಾಂತಿ ಮಂತ್ರದ ಸ್ಮರಣೆ ಬರಲಿಲ್ಲ. ಈಗ ಮರಳಿ ಅಧಿಕಾರ ಗಳಿಸುವುದಕ್ಕಾಗಿ ಇಷ್ಟೊಂದು ನಾಟಕವೇ ಎಂದು ಸಚಿವ ಡಾ.ಕೆ ಸುಧಾಕರ್ (Dr.K Sudhakar) ಸರಣಿ ಟ್ವೀಟ್ ಮೂಲಕ ಭಾರತ್ ಜೋಡೋ ಯಾತ್ರೆ ಕುರಿತಾಗಿ ಟೀಕಿಸಿದ್ದಾರೆ.

sudhakar 1

ಟ್ವೀಟ್‍ನಲ್ಲಿ ಏನಿದೆ?
ರಾಹುಲ್ ಗಾಂಧಿ (RahulGandhi)  ನೇತೃತ್ವದ ಭಾರತ್ ಜೋಡೋ ಯಾತ್ರೆ ಸೂತ್ರ ಹರಿದ ಗಾಳಿಪಟದಂತ ಒಂದು ವ್ಯರ್ಥ ಹಾರಾಟ. ಗೊತ್ತು- ಗುರಿ ಎರಡೂ ಇಲ್ಲದ ಈ ನಡಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಂದಿಸುವ ಏಕಮಾತ್ರ ಉದ್ದೇಶ ಹೊಂದಿರುವುದು ವಿಪರ್ಯಾಸ. ಕಾಂಗ್ರೆಸ್ ಈ ದೇಶವನ್ನು ಅರ್ಧ ಶತಮಾನಗಳ ಕಾಲ ಆಳಿದೆ. ಈ ಅವಧಿಯಲ್ಲಿ ರಾಹುಲ್ ಗಾಂಧಿಯವರ ಪೂರ್ವಜರು ಎಲ್ಲೆಲ್ಲಿ ದೇಶವನ್ನು ಒಡೆದರೋ ಅದೆಲ್ಲವನ್ನೂ ಜತನದಿಂದ ಕಟ್ಟುವ ಕಾರ್ಯವನ್ನು ಆರ್‌ಎಸ್‌ಎಸ್‌ ಮಾಡಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ಸಿಗರ ಭಾರತ ಬಿಟ್ಟು ಓಡೋ ಯಾತ್ರೆ: ನಳೀನ್ ಕುಮಾರ್ ಕಟೀಲ್

CONGRESS 1

ಈಗ ರಾಹುಲ್ ಗಾಂಧಿ ಕೂಡಿಸಿದ್ದನ್ನು ಕಳೆಯಲು ಹೊರಟಿದ್ದಾರೆ ಎಂಬುದೇ ಹೆಚ್ಚು ಸಮರ್ಪಕ ವ್ಯಾಖ್ಯಾನವಾದೀತು. ರಾಹುಲ್ ಗಾಂಧಿಯವರ ಪಾದಯಾತ್ರೆಯ ಸದುದ್ದೇಶವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಇದೊಂದು ಶುದ್ಧ ರಾಜಕೀಯ ಅಜೆಂಡಾದ ವಿಭಜಕ ಮನಸುಗಳ ವಿಜೃಂಭಣೆಯ ನಡಿಗೆ! ದೇಶ ವಿಭಜನೆ, ಕಾಶ್ಮೀರ ವಿಭಜನೆ, ಎಮರ್ಜೆನ್ಸಿ ಹೇರಿಕೆ, ಬೋಫೋರ್ಸ್ ಹಗರಣ (Bofors Scam), 2ಜಿ ಸ್ಯಾಮ್ (2G Spectrum case) ಇದೆಲ್ಲವೂ ಕಾಂಗ್ರೆಸ್ ನಡೆಸಿದ ವಿಭಜಕ ಆಡಳಿತದ ಫಲಶೃತಿ. ಇದೆಲ್ಲದರ ಸಾಕ್ಷಿ ಪ್ರಜ್ಞೆಯೇ ರಾಹುಲ್ ಗಾಂಧಿ. ಇನ್ನೇನು ಉಳಿಸಿದ್ದೀರಿ ಜೋಡಿಸುವುದಕ್ಕೆ? ನಿಮ್ಮ ಯಾತ್ರೆಯ ಕಾಲದಲ್ಲಿ ಒಮ್ಮೆಯಾದರೂ ಆತ್ಮವಿಮರ್ಶೆ ಮಾಡಿಕೊಂಡು ಈ ಪ್ರಶ್ನೆಗಳಿಗೆ ಉತ್ತರಿಸಿ. ಇದನ್ನೂ ಓದಿ: ಭಾರತ್ ರಾಷ್ಟ್ರ ಸಮಿತಿ – ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ KCR

ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮ ನಡೆದಾಗ ಭಾರತ್ ಜೋಡೋ ಯಾತ್ರೆ ನೆನಪಾಗಲಿಲ್ಲ, ಮುಂಬಯಿ ಮೇಲೆ ಉಗ್ರರ ದಾಳಿ, ಬೋಧ ಗಯಾದಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಸಹಬಾಳ್ವೆಯ ನೆನಪಾಗಲಿಲ್ಲ, ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ನಡೆದಾಗ ಶಾಂತಿ ಮಂತ್ರದ ಸ್ಮರಣೆ ಬರಲಿಲ್ಲ. ಈಗ ಮರಳಿ ಅಧಿಕಾರ ಗಳಿಸುವುದಕ್ಕಾಗಿ ಇಷ್ಟೊಂದು ನಾಟಕವೇ?

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *