ತಿರುವನಂತಪುರಂ: ಕೇರಳದ (Kerala) ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ (Vande Bharat Express) ಚಾಲನೆ ನೀಡಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ (Congress) ಕಾರ್ಯರ್ತರು ಸಂಸದರ ಪೋಸ್ಟರ್‌ನ್ನು ರೈಲಿಗೆ ಅಂಟಿಸಿ ರೈಲನ್ನು ವಿರೂಪಗೊಳಿಸಿದ ಘಟನೆ ನಡೆದಿದೆ.
ಮಂಗಳವಾರ ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದರು. ಆದರೆ ಚಾಲನೆ ನೀಡಿದ ಕೆಲವೇ ಗಂಟೆಗಳಲ್ಲಿ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಕಾಂಗ್ರೆಸ್ ಸಂಸದ ವಿಕೆ ಶ್ರೀಕಂದನ್ ಹೊಗಳಿರುವ ಪೋಸ್ಟರ್‌ಗಳನ್ನು ಪಕ್ಷದ ಕಾರ್ಯಕರ್ತರು ಅಂಟಿಸಿದ್ದಾರೆ. ಕೇರಳದ ಪಾಲಕ್ಕಾಡ್‍ನ ಶೋರನೂರ್ ಜಂಕ್ಷನ್‍ಗೆ ರೈಲು ಬಂದಾಗ ಈ ಘಟನೆ ನಡೆದಿದ್ದು, ಅಲ್ಲಿ ಕೆಲವರು ರೈಲಿನ ಕಿಟಕಿಗಳ ಮೇಲೆ ಸಂಸದರ ಪೋಸ್ಟರ್‌ಗಳನ್ನು ಅಂಟಿಸಿರುವ ವೀಡಿಯೋ ವೈರಲ್ ಆಗಿದೆ.
Advertisement
#WATCH | Congress workers pasted posters of Palakkad MP VK Sreekandan on the windows of a wagon of Vande Bharat Express when the train reached Shoranur in Kerala’s Palakkad yesterday. Railway Protection Force has registered a case, investigation underway pic.twitter.com/rgqocYIqid
— ANI (@ANI) April 26, 2023
Advertisement
ಕೇರಳದ (Kerala) ಬಿಜೆಪಿ (BJP) ನಾಯಕ ಕೆ. ಸುರೇಂದ್ರನ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕಿಟಕಿಗಳಲ್ಲಿ ಕಾಂಗ್ರೆಸ್ ಸಂಸದರ ಪೋಸ್ಟರ್‌ಗಳಿಂದ ತುಂಬಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾಲಕ್ಕಾಡ್‍ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ವಿರೂಪಗೊಳಿಸುವುದು ಕೇರಳ ಕಾಂಗ್ರೆಸ್ ಕಾರ್ಯಕರ್ತರ ನೀಚ ಕೆಲಸವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ
Advertisement
Advertisement
ಈ ಬಗ್ಗೆ ಕಾಂಗ್ರೆಸ್ ಸಂಸದ ಶ್ರೀಕಂದನ್ ಮಾತನಾಡಿ, ರೈಲಿನಲ್ಲಿ ತನ್ನ ಪೋಸ್ಟರ್‌ಗಳನ್ನು ಅಂಟಿಸಲು ಯಾರಿಗೂ ಹೇಳಿಲ್ಲ. ಬಿಜೆಪಿ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಘಟನೆಯ ನಂತರ ರೈಲ್ವೇ ರಕ್ಷಣಾ ಪಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಸೋಮಣ್ಣ ವೈರಲ್ ಆಡಿಯೋ – ಚುನಾವಣಾ ಆಯೋಗದಿಂದ ತನಿಖೆ