ಮೈಸೂರು: ಮುಡಾದಲ್ಲಿ (MUDA Case) ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರಿಯಾಗಿ ತನಿಖೆ ಮಾಡಿದರೆ ಎಲ್ಲರ ಹೆಸರು ಹೊರಬರುತ್ತದೆ. ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದಿಂದ 48 ಜನರಿಗೆ ನಿವೇಶನ ನೀಡಲಾಗಿದೆ. ಇದರಲ್ಲಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಬಿಲ್ಡರ್‌ಗಳಿಗೆ ನಿವೇಶನ ಕೊಟ್ಟಿದ್ದಾರೆ. ರಾಜಕಾರಣಿಗಳ ಹೆಸರನ್ನು ನಾನು ಹೇಳುವುದಿಲ್ಲ. ತನಿಖಾ ಸಂಸ್ಥೆಗಳು ಸರಿಯಾಗಿ ತನಿಖೆ ಮಾಡಿದ್ರೆ ರಾಜಕಾರಣಿಗಳ ಹೆಸರು ಹೊರಬರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್ – ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ಇವರೆಲ್ಲರೂ ಸೇರಿ ಮಾಡಿದ ಹಗರಣವನ್ನು ನಿವಾರಣೆ ಮಾಡುವ ಕೆಲಸ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಆಗುತ್ತಿದೆ. ಮುಡಾ ಬೋರ್ಡ್ ಹಾಕಿಸಿ ಆಸ್ತಿಯನ್ನು ರಕ್ಷಣೆ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಮುಡಾದಲ್ಲಿ ಏನೇನು ಹಗರಣ ಆಗಿದೆಯೋ ಅದೆಲ್ಲವನ್ನೂ ಶುದ್ಧೀಕರಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅವರ ಇಚ್ಛೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಸವಣ್ಣನವರು ಹೊಳೆಗೆ ಹಾರಿದರು ಎನ್ನುವ ನಿಮ್ಮನ್ನೇ ಹೊಳೆಗೆ ಹಾರಿಸಬೇಕಾಗುತ್ತದೆ: ಯತ್ನಾಳ್‍ಗೆ ಶಾಮನೂರು ಎಚ್ಚರಿಕೆ
14 ನಿವೇಶನಗಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಯವರ ಪಾತ್ರ ಇಲ್ಲ. ಸಹೋದರ ಕೊಟ್ಟಿದ್ದ ಜಮೀನಿಗೆ ಸಿಗಬೇಕಿದ್ದ ಪರಿಹಾರವನ್ನು 50:50 ಅನುಪಾತದಲ್ಲಿ ಪಡೆದುಕೊಂಡಿದ್ದಾರೆ. ಅದು ಬಿಟ್ಟು ಯಾವುದೇ ರೀತಿಯ ಪ್ರಭಾವವನ್ನು ಅವರು ಬೀರಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.