Bengaluru City
ಕಾಂಗ್ರೆಸ್ ಶಾಸಕರ ಜೀವಕ್ಕೆ ಅಪಾಯವಿದೆ- ರಮ್ಯಾ

ಬೆಂಗಳೂರು: ಕಾಂಗ್ರೆಸ್ ಶಾಸಕರ ಜೀವಕ್ಕೆ ಅಪಾಯವಿದೆ ಎಂದು ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ.
ನಾನು ಕಾಂಗ್ರೆಸ್ ಶಾಸಕರೊಬ್ಬರ ಪತ್ನಿ ಹಾಗೂ ಮಗಳ ಜೊತೆ ಮಾತನಾಡಿದೆ. ಶಾಸಕರ ಮಗಳು ಅಳುತ್ತಾ ನನ್ನ ತಂದೆ ಜೀವದ ಬಗ್ಗೆ ಭಯವಾಗುತ್ತಿದೆ ಅಂದ್ರು ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಿಳಿಸಿದ್ದಾರೆ.
ರಾಜ್ಯದ ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ರು. ಆದ್ರೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡಿದ್ರು. ಅದರಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಬೆಳಗ್ಗೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕರುನಾಡಿನ ನೂತನ ಮುಖ್ಯಮಂತ್ರಿ ಆದ್ರು.
https://twitter.com/divyaspandana/status/997150126517964800
ರಾಜ್ಯಪಾಲರು 15 ದಿನಗಳಲ್ಲಿ ಬಹುಮತ ಸಾಧಿಸಲು ಕಾಲಾವಕಾಶ ನೀಡಿದ್ದಾರೆ. ಆದ್ರೆ ನೂತನ ಸಿಎಂ ಮಂಗಳವಾರದೊಳಗೆ ಬಹುಮತ ಸಾಬೀತು ಮಾಡಲಿದ್ದೇವೆ ಅಂತಾ ಹೇಳಿದ್ದಾರೆ. ಇತ್ತ ಮೈತ್ರಿ ಸರ್ಕಾರಕ್ಕೆ ಮುಂದಾಗಿದ್ದ ಕಾಂಗ್ರೆಸ್-ಜೆಡಿಎಸ್ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆಪರೇಷನ್ ಕಮಲದ ಬೀತಿಯಿಂದಾಗಿ ರಾತ್ರೋ ರಾತ್ರಿ ಕಾಂಗ್ರೆಸ್-ಜೆಡಿಎಸ್ ಶಾಸಕರೆಲ್ಲರನ್ನು ಪಕ್ಷದ ನಾಯಕರು ಹೈದರಾಬಾದ್‍ಗೆ ಕಳುಹಿಸಿದ್ದಾರೆ.
ರಮ್ಯಾ ಕರ್ನಾಟಕ ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಿಲಿಲ್ಲ. ಇದರಿಂದಾಗಿ ಸಾರ್ವಜನಿಕರು ರಮ್ಯಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ರಮ್ಯಾ ತರಾಟೆಗೆ ತೆಗೆದುಕೊಂಡಿದ್ದರು. ನಂಬರ್ ಒನ್ ಸಿಟಿಜನ್ ಅಂತ ಲೇವಡಿ ಮಾಡಿದ್ದರು. ರಮ್ಯಾ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ಅವರು ಪೃಧಾನಿ ಮೋದಿ ಬಗ್ಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ ಅಂತಾ ಜನರು ಕಿಡಿ ಕಾರಿದ್ದು, ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ ರಮ್ಯಾ ಅವರಿಗೆ ಅಂತಾ ಟಾಂಗ್ ಕೊಟ್ಟಿದ್ದರು. ಆದರೆ ರಮ್ಯಾ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
