– ಮತ್ತೆ ಶುರುವಾಯ್ತಾ ಆಪರೇಷನ್ ಕಮಲ?
ಬೆಂಗಳೂರು: ಒಂದು ವಾರದ ಹಿಂದೆ ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದ ಆಪರೇಷನ್ ಕಮಲ ಕೊನೆ ಹಂತದಲ್ಲಿ ವಿಫಲವಾಗಿತ್ತು. ಗುರುಗ್ರಾಮದ ರೆಸಾರ್ಟ್ ಸೇರಿಕೊಂಡಿದ್ದ ಬಿಜೆಪಿ ಶಾಸಕರು ತಮ್ಮ ಕ್ಷೇತ್ರದತ್ತ ಮರಳಿ ಬರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ರೆಸಾರ್ಟ್ ಸೇರಿಕೊಂಡಿದ್ದ ಕೈ ನಾಯಕರು ತಮ್ಮ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಇದೀಗ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ಯಲ್ಲಾಪುರ ಸರ್ಕಾರಿ ವಸತಿಗೃಹದಲ್ಲಿ ಇಬ್ಬರು ನಾಯಕರು ತಮ್ಮ ಬೆಂಬಲಿಗರನ್ನು ಹೊರ ಕಳುಹಿಸಿ ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಬಹುದು ಅನ್ನೊ ಪಟ್ಟಿಯಲ್ಲಿ ಶಿವರಾಮ್ ಹೆಬ್ಬಾರ್ ಅವರ ಹೆಸರು ಕೇಳಿ ಬಂದಿತ್ತು. ಕೈ ಅತೃಪ್ತ ಶಾಸಕರು ಮುಂಬೈ ಸೇರಿಕೊಂಡಾಗ ಶಿವರಾಮ್ ಹೆಬ್ಬಾರ್ ಸಹ ಕೆಲ ದಿನ ಅಜ್ಞಾತಸ್ಥಳದಲ್ಲಿದ್ದರು. ಈ ವೇಳೆ ಆಪರೇಷನ್ ಕಮಲದಡಿ ಶಿವರಾಮ್ ಹೆಬ್ಬಾರ್ ಹೆಸರು ಕೇಳಿ ಬಂದಿತ್ತು.
ಆಪರೇಷನ್ ಕಮಲ ವಿಫಲ ಬಳಿಕ ಕಾಣಿಸಿಕೊಂಡಿದ್ದ ಶಾಸಕರು, ನಾನು ಕುಟುಂಬದ ಜೊತೆ ಅಂಡಮಾನ್ ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದೆ. ಅಭಿಮಾನಿಗಳು ಬಿಜೆಪಿಗೆ ಹೋಗಿ ಎಂದು ಹೇಳುತ್ತಾರೆ. ಅದು ಅವರ ಅಭಿಮಾನ. ಆದರೆ ಈ ಕ್ಷಣದವರೆಗೆ ಯಾವುದೇ ನಿರ್ಧಾರ ಮಾಡಿಲ್ಲ ಊಹಾಪೋಹದ ಸುದ್ದಿಗಳಿಗೆ ನಾವು ಬೆಲೆ ಕೊಡುವುದಿಲ್ಲ. ಮಾಧ್ಯಮಗಳಲ್ಲಿ ಕಪೋಲಕಲ್ಪಿತ ಸುದ್ದಿಗಳು ಬರುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.
https://www.youtube.com/watch?v=t8hUU62B-gc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv