– ಜಮೀರ್ ಬೀದಿ ದಾಸಯ್ಯ ಹೇಳಿಕೆಗೆ ಶಿವಗಂಗಾ ಗರಂ
ದಾವಣಗೆರೆ: ಪದೇ ಪದೇ ಅಧಿಕಾರ ಹಸ್ತಾಂತರದ ವಿಚಾರ ಚರ್ಚೆ ಆಗ್ತಿದೆ. ಅಧಿಕಾರ ಹಸ್ತಾಂತರ ವಿಚಾರವನ್ನು ಆದಷ್ಟು ಬೇಗ ವರಿಷ್ಠರು ಸ್ಪಷ್ಟಪಡಿಸಬೇಕು. ತಾಳಿದವನು ಬಾಳಿಯಾನು ಎಂದು ಹೇಳಿದ್ದೆ. ಅದರ ಜೊತೆಗೆ ತಾಳ್ಮೆಗೂ ಒಂದು ಮಿತಿ ಇದೆ ಎಂದು ಕೂಡಾ ಹೇಳಬೇಕಾಗಿದೆ ಎಂದ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಹೇಳಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್ (D.K Shivakumar) ಅವರ ನಡುವೆ ಒಪ್ಪಂದ ಆಗಿದೆಯೇ? ಇಲ್ಲವೇ ಎಂಬುದು ಸ್ಪಷ್ಟವಾಗಬೇಕು. ಇದೇ ಅವಧಿಗೆ ಅಧಿಕಾರ ಬಿಟ್ಟು ಕೊಡುತ್ತಾರಾ ಅಥವಾ ಮುಂದಿನ ಅವಧಿಗೆ ಬಿಟ್ಟು ಕೊಡುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ. ಹೈಕಮಾಂಡ್ ಈ ವಿಚಾರವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 2028ರ ತನಕ ಸಿದ್ದರಾಮಯ್ಯ ಸಿಎಂ ಅಂತ ಹೇಳೋಕೆ ರಾಯರೆಡ್ಡಿ ಯಾರು? – ಶಿವಗಂಗಾ ಬಸವರಾಜ ಕಿಡಿ
ಈಗಾಗಲೇ ಡಿ.ಕೆ ಸುರೇಶ್ ಅವರು ಹೇಳಿದ್ದಾರೆ. ತಾಳ್ಮೆಗೂ ಒಂದು ಮಿತಿ ಇದೆ ಎಂಬುದು ಸತ್ಯ. ಪದೇ ಪದೇ ಅಧಿಕಾರ ಹಂಚಿಕೆ ಚರ್ಚೆ ಆಗುತ್ತಲೇ ಇದೆ. ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಪ್ರಕಟಿಸಿದರೆ ಒಳ್ಳೆಯದು ಎಂದಿದ್ದಾರೆ.
ಇದೇ ವೇಳೆ ಹೈಕಮಾಂಡ್ ನಿರ್ಧರಿಸಿದ್ರೆ ಬೀದಿ ದಾಸಯ್ಯ ಕೂಡ ಸಿಎಂ ಆಗ್ತಾರೆ ಎಂಬ ಜಮೀರ್ ಅಹಮದ್ ಅವರ ಹೇಳಿಕೆ ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈಗಿನ ಕಾಲದಲ್ಲಿ ಓರ್ವ ಗ್ರಾಪಂ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದು ಕಷ್ಟ. ಆದರೆ ಸಿಎಂ ಸ್ಥಾನ ಬಿಟ್ಟು ಕೊಡುವುದು ಅಂದ್ರೆ ಸಣ್ಣ ವಿಚಾರ ಅಲ್ಲ. ಸಿಎಂ ಸ್ಥಾನ ನಿಜಕ್ಕೂ ಶ್ರೇಷ್ಠವಾದದ್ದು. ಸಚಿವ ಜಮೀರ್ ಅವರು ಬೀದಿ ದಾಸಯ್ಯಗೂ ಸಿಎಂ ಸ್ಥಾನ ನೀಡಿದ್ರು ಓಕೆ ಎಂದಿದ್ದಾರೆ. ಜಮೀರ್ ಹೇಳಿದ್ದು ಸರಿಯಲ್ಲ, ಸಿಎಂ ಸ್ಥಾನಕ್ಕೆ ಒಂದು ರೀತಿಯಲ್ಲಿ ಅಗೌರವ ಸೂಚಿಸಿದಂತೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಧಿಕಾರ ಯಾರಿಗೂ ಸುಲಭವಾಗಿ ಬರಲ್ಲ, ಡಿಕೆಶಿ ಪಕ್ಷದ ಶಿಸ್ತಿನ ಸಿಪಾಯಿ: ಡಿಕೆ ಸುರೇಶ್

