ಕಂದಾಯ ಇಲಾಖೆಯ ವಿರುದ್ಧವೇ ಗುಡುಗಿದ ಕೈ ಶಾಸಕ ರಾಜು ಕಾಗೆ

Public TV
1 Min Read
Raju Kage

– ನಮ್ಮ ಸರ್ಕಾರದಲ್ಲಿ ಸಚಿವರಿಗೆ ಮತ್ತು ಕಾರ್ಯದರ್ಶಿಗೆ ತಾಳ ಮೇಳ ಇಲ್ಲ

ಬೆಳಗಾವಿ: ಕಂದಾಯ ಇಲಾಖೆಯ ಕಾರ್ಯದರ್ಶಿ ವಿರುದ್ಧವೇ ಕಾಂಗ್ರೆಸ್‌ ಶಾಸಕ ರಾಜು ಕಾಗೆ (Raju Kage) ಆಕ್ರೋಶ ಹೊರಹಾಕಿದ್ದಾರೆ.

ಕಾಗವಾಡ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾ ಸೌಧ (Praja Soudha) ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿ ಎಂದು ಕೇಳಿದಾಗ ನನಗೆ ಅಪಮಾನ ಮಾಡಿದ್ದಾನೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ (Revenue Department Secretary) ರಾಜೇಂದ್ರ ಕಠಾರಿಯಾ ವಿರುದ್ಧ ಏಕವಚನದಲ್ಲೇ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತದ ಜೊತೆ ಪರೋಕ್ಷ ಯುದ್ಧ ಮಾಡ್ತಿದೆ – ಉಗ್ರರನ್ನು ರಫ್ತು ಮಾಡುವ ದೇಶ ಪಾಕಿಸ್ತಾನ ಎಂದ ಮೋದಿ

 

ಅಲ್ಲಿ ಕೆರೆ ಇತ್ತು ನಿಮಗೆ ಬುದ್ಧಿ ಇದೆಯೋ ಇಲ್ಲವೋ ಹೋಗಿ ಅಂತ ಹೇಳಿ ನನಗೆ ಅಪಮಾನ ಮಾಡಿದ್ದಾರೆ. ನನಗೆ ಅಪಮಾನ ಮಾಡಿದ ಕಾರ್ಯದರ್ಶಿ ವಿರುದ್ಧ ನಾಳೆ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಗುಡುಗಿದ್ದಾರೆ.  ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ

ನಮ್ಮ ಸರ್ಕಾರದಲ್ಲಿ ಸಚಿವರಿಗೆ ಮತ್ತು ಕಾರ್ಯದರ್ಶಿಗೂ ತಾಳ ಮೇಳ ಇಲ್ಲ. ಇದೇ ರೀತಿ ಮುಂದುವರೆದರೆ ಶಾಸಕರು ಬೇರೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕಾಗವಾಡ ಪಟ್ಟಣದಲ್ಲಿ ಸುಮಾರು 8.60 ಕೋಟಿ ರೂ. ವೆಚ್ಚದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ನೀಡುವಂತೆ ರಾಜು ಕಾಗೆ ರಾಜೇಂದ್ರ ಕಠಾರಿಯಾ ಅವರ ಕಚೇರಿಗೆ ತೆರಳಿದ್ದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Share This Article