ಹಾಸನ: ನನ್ನನ್ನು ಸೋಲಿಸೋಕೆ ದೇವೇಗೌಡ್ರು (H.D Devegowda) ವೀಲ್‍ಚೇರ್‌ನಲ್ಲಿ ಹಳ್ಳಿ ಹಳ್ಳಿಗೆ ಹೋಗಿದ್ರು. ಅಂತಹ ಪ್ರಬಲ ದೇವೇಗೌಡ್ರು, ಕುಮಾರಸ್ವಾಮಿ ವಿರುದ್ಧ ಸೆಟೆದು ಗೆದ್ದು ಬಂದೆ. ಗಂಡಸಿ ಬಂದು ಓಂ, ಬೂಂ ಸ್ವಾಹ ಅಂದ್ರು ಏನಾಯ್ತು? ಜನ ಸೋಲಿಸಿದ್ರಾ? ಎಂದು ಶಾಸಕ ಶಿವಲಿಂಗೇಗೌಡ (K.M Shivalinge Gowda) ವ್ಯಂಗ್ಯವಾಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ನಡೆದ ಹಾಸನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ನನ್ನ ಕೆಲಸ, ನನ್ನ ಹೋರಾಟ, ಜನರ ಭಾವನೆ ನನ್ನ ಮೇಲೆ ಇತ್ತು ಅದಕ್ಕೆ ಗೆದ್ದೆ. ಒಬ್ಬನೇ ಒಬ್ಬ ಈ ಜಿಲ್ಲೆಯಲ್ಲಿ ಕಾಂಗ್ರೆಸ್ (Congress) ಶಾಸಕ ಗೆದ್ದಿರೋದು. ಮಂತ್ರಿ ಸ್ಥಾನ ಕೊಡಿಸಿ, ಗೂಟದ ಕಾರಿನಲ್ಲಿ ಬರ್ತಿನಿ. ಆಮೇಲೆ ಈ ಜಿಲ್ಲೆ ರಾಜಕಾರಣ ನೋಡಿ ಎಂದಿದ್ದಾರೆ. ಈ ಮೂಲಕ ಬಹಿರಂಗವಾಗಿ ಸಚಿವ ಸ್ಥಾನದ ಆಸೆಯನ್ನು ಕೆ.ಎಂ.ಶಿವಲಿಂಗೇಗೌಡ ಬಿಚ್ಚಿಟ್ಟಿದ್ದಾರೆ.
Advertisement
ಇನ್ನೂ ಇಂತಹ ಸಾವಿರಾರು ಸಮಾವೇಶಗಳನ್ನು ಮಾಡೋಣ. ಏನು ಬೇಕಾದರೂ ಈ ಜಿಲ್ಲೆಗೆ ತರೋಣ. ನಮ್ಮ ಸರ್ಕಾರ ಇದೆ, ನಾವ್ಯಾಕೆ ಹೆದರಬೇಕು. ಶ್ರೇಯಸ್‍ಪಟೇಲ್ ಸೆಂಟ್ರಲ್‍ನಲ್ಲಿ ಹಾಸನಕ್ಕೆ ನಾಯಕತ್ವ ಕೊಡಿ ಎಂದು ಕೇಳಬೇಕು ಎಂದಿದ್ದಾರೆ.
Advertisement
Advertisement
ನಾನು ಯಾವುದೋ ಊರಿನಲ್ಲಿ ದನ ಕಾದುಕೊಂಡಿದ್ದೆ. ಈಗ ಈ ಹಂತಕ್ಕೆ ಬೆಳೆದಿದ್ದೇನೆ. ಅದು ನಮ್ಮ ಸ್ವಂತ ಶಕ್ತಿ, ಇದರ ಮೇಲೆ ನಾನು ಬೆಳೆದಿದ್ದೇನೆ. ಯಾರ ಆಶೀರ್ವಾದದಿಂದಲೂ ಬೆಳೆದಿಲ್ಲ. ಯಾರಿಗೂ ನಾನು ಕೇರ್ ಮಾಡಿ ರಾಜಕಾರಣ ಮಾಡಲ್ಲ. ತಮಟೆ ಹೊಡೆಯೋದು ನನಗೆ ಗೊತ್ತಿದೆ. ಈ ಜಿಲ್ಲೆಯಲ್ಲಿ ತಮಟೆ ಹೊಡೆಸೋದು ನನಗೆ ಗೊತ್ತಿದೆ. ಅವನು ಚೆನ್ನಾಗಿ ತಮಟೆ ಹೊಡೆಯುತ್ತೇನೆ ಅವನಿಗೆ ಮಂತ್ರಿ ಸ್ಥಾನ ಕೊಡಿ ಎಂದು ಗೋಪಾಲಸ್ವಾಮಿ ಹಾಗೂ ಪುಟ್ಟೇಗೌಡರು ಹೇಳಬೇಕು ಎಂದಿದ್ದಾರೆ.
Advertisement
ಸಭೆಯಲ್ಲಿ ಸಂಸದ ಶ್ರೇಯಸ್‍ಪಟೇಲ್, ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ ಹಾಗೂ ಸಿ.ಎಸ್.ಪುಟ್ಟೇಗೌಡ ಹಾಜರಿದ್ದರು.