ನವದೆಹಲಿ: 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೇ ಮೇ ತಿಂಗಳಲ್ಲಿ ಮದುವೆಯ ದಿನಾಂಕವನ್ನು ಘೋಷಿಸಲಾಗಿದೆ ಎಂದು ಅದಿತಿ ಸಿಂಗ್ ಜೊತೆಗಿನ ರಾಹುಲ್ ಗಾಂಧಿಯ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು. ಮೊದಲು ರಾಯ್ ಬರೇಲಿನಲ್ಲಿರುವ ವಾಟ್ಸಪ್ ಗುಂಪುಗಳಲ್ಲಿ ಈ ರೀತಿಯ ಸುಳ್ಳು ವದಂತಿ ಹಬ್ಬಿದೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಫೋಟೋಗಳು ವೈರಲ್ ಆದ ಬಳಿಕ ಅದಿತಿ ಅವರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹರಿದಾಡುತ್ತಿರುವ ಮಾಹಿತಿಯೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ. “ರಾಹುಲ್ ತನ್ನ `ರಾಖಿ’ ಸಹೋದರ. ಇಂತಹ ವದಂತಿಗಳಿಂದ ನನಗೆ ಬೇಸರವಾಗಿದೆ. ರಾಹುಲ್ ಜಿಗೆ ನಾನು ರಾಖಿ ಕಟ್ಟಿದ್ದೇನೆ. ಆದ್ದರಿಂದ ಅವರು ನನಗೆ ಸಹೋದರನೆಂದು ನಾನು ಸ್ಪಷ್ಟಪಡಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಇಂತಹ ವದಂತಿಗಳಿಂದ ನಾನು ದುಃಖಿತಳಾಗಿದ್ದೇನೆ” ಎಂದು ಸಿಂಗ್ ಹೇಳಿದ್ದಾರೆ.
Advertisement
ಶನಿವಾರ ಫೇಸ್ ಬುಕ್, ಟ್ವಿಟ್ಟರ್ ಮತ್ತು ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅದಿತಿ ಸಿಂಗ್ ಅವರ ನಕಲಿ ಫೋಟೋವನ್ನು ಸೃಷ್ಟಿಸಿ ಅದನ್ನು ರಾಹುಲ್ ಗಾಂಧಿ ತಾಯಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ರೀತಿ ಎಡಿಟ್ ಮಾಡಲಾಗಿತ್ತು.
Advertisement
ಅದಿತಿ ಸಿಂಗ್ ಯಾರು?: ಯುವ ರಾಯ್ ಬರೇಲಿ ಶಾಸಕಿ ಪ್ರಿಯಾಂಕಾ ಗಾಂಧಿಯವರ ಹತ್ತಿರದವರು ಎಂದು ಹೇಳಲಾಗಿದೆ. ಇವರು ಯುಎಸ್‍ಎ ಯ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಸ್ಟಡೀಸ್ ವ್ಯಾಸಂಗ ಮಾಡಿದ್ದಾರೆ. 29 ವರ್ಷದ ಅದಿತಿ ಅವರು ಅಖಿಲೇಶ್ ಸಿಂಗ್ ಅವರ ಮಗಳಾಗಿದ್ದಾರೆ. ಅಖಿಲೇಶ್ ಅವರು ರಾಯ್ ಬರೇಲಿಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, 90,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಜಯಗಳಿಸಿದ್ದರು.