ಚಿಕ್ಕಬಳ್ಳಾಪುರ: ಬ್ಲಾಕ್‍ಮೇಲ್ ಮಾಡುವುದು ಬಹಳ ದಿನ ನಡೆಯುವುದಿಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ, ಶಾಸಕ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
ಗೌರಿಬಿದನೂರು ನಗರದಲ್ಲಿ ಮಾತನಾಡಿದ ಸಚಿವರು, ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳಿರಬೇಕು. ಪಕ್ಷದ ಬಗ್ಗೆ ಬದ್ಧತೆ ಇರಬೇಕು. ವೈಯುಕ್ತಿಕ ಹಾಗೂ ಸ್ವಾರ್ಥಕ್ಕಾಗಿ ಪಕ್ಷವನ್ನು ಬ್ಲಾಕ್ ಮೇಲ್ ಮಾಡಬಾರದು. ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದೀರಿ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು ಎಂದು ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ವಿಚಾರವಾಗಿ ವಾಗ್ದಾಳಿ ನಡೆಸಿದರು.
ಯಾರೇ ಆದರೂ ಕಾಂಗ್ರೆಸ್‍ನಿಂದ ಗೆದ್ದು ಪಕ್ಷದ ಜೊತೆ ಇರಬೇಕು. ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಕೊಳ್ಳಬೇಕು. ಯಾರೇ ಬ್ಲಾಕ್‍ಮೇಲ್ ಮಾಡಿದರೂ ಬಹಳ ದಿನ ನಡೆಯಲ್ಲ ಎಂದು ಹೇಳಿದರು.