ಬೆಂಗಳೂರು: ಕೇಂದ್ರ ಸಚಿವರಾದ ಕುಮಾರಸ್ವಾಮಿ (HD Kumaraswamy) ಅವರು ರಾಜ್ಯದ ಹಿತ ನೋಡಿ ಮಾತನಾಡಲಿ, ರಾಜ್ಯದ ಹಿತದೃಷ್ಟಿಯಿಂದ ಸಿಎಂ ರನ್ನ ಭೇಟಿ ಮಾಡಿ ಮಾತನಾಡಿದ್ರೆ ಒಳ್ಳೆಯದು ಎಂದು ರಾಜ್ಯ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.
ರಾಜ್ಯ ಸರ್ಕಾರದ (Government Of Karnataka) ಸಹಕಾರ ಸಿಗುತ್ತಿಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರುಮಾಳ್ – ಮಹಾ ಕುಂಭಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷ!
ನಾನು ನಮ್ಮ ಅಧಿಕಾರಿಗಳ ಜೊತೆ ಹೋಗಿ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ್ದೇನೆ. ಕೆಲವು ಸೆಮಿ ಕಂಡಕ್ಟರ್ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದೇವೆ. ಯಾರೂ ಭೇಟಿ ಮಾಡಿಲ್ಲ ಅನ್ನೋದು ಸುಳ್ಳು. ಸಿಎಂ ಅವರನ್ನು ಭೇಟಿ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ರಾಜ್ಯದ ಹಿತ ದೃಷ್ಟಿಯಿಂದ ಬೆಂಗಳೂರಿಗೆ ಬಂದಾಗ ಅವರೇ ಭೇಟಿ ಮಾಡಬಹುದು. ನಾನು ಕೈಗಾರಿಕಾ ಸಚಿವನಾಗಿ ಭೇಟಿ ಮಾಡಿ ಸಾಕಷ್ಟು ಮನವಿ ಕೊಟ್ಟಿದ್ದೇನೆ. ಇನ್ವೆಸ್ಟರ್ ಮೀಟ್‌ಗೆ ಕರೆಯೋಕೂ ಹೋಗುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಯತ್ನಾಳ್ ಉಚ್ಚಾಟನೆಗೆ ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹ
ಕುಮಾರಸ್ವಾಮಿ ಅವರು ರಾಜ್ಯದ ಹಿತದೃಷ್ಟಿಯಿಂದ ಸಿಎಂ ರನ್ನ ಭೇಟಿಮಾಡಿ ಮಾತನಾಡಿದ್ರೆ ಒಳ್ಳೆಯದು. ಸಿಎಂ ಜೊತೆ ಅವರು ಸಭೆ ಮಾಡಬೇಕು, ರಾಜ್ಯದ ಅಭಿವೃದ್ಧಿಯ ಪರವಾಗಿ ಸಭೆ ಮಾಡಬೇಕು. ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕಾಗಿ ಕುಮಾರಸ್ವಾಮಿಯವರನ್ನ ಸೂಕ್ತ ಸಂದರ್ಭದಲ್ಲಿ ಮತ್ತೆ ಭೇಟಿಯಾಗ್ತೇನೆ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾಗಿದ್ದೆ. ಕುಮಾರಸ್ವಾಮಿ- ಸಿಎಂ ಕೂಡ ಭೇಟಿಯಾಗಬೇಕು ಎಂದಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ