ಉಡುಪಿ: ನಗರಸಭೆ ಸಾಮಾನ್ಯ ಸಭೆಯಲ್ಲಿ ತನ್ನ ವಾರ್ಡ್ ಸದಸ್ಯೆಯ ಪರ ಹೇಳಿಕೆ ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರು ಹಲ್ಲೆ ನಡೆಸಿದ್ದಾರೆ.
ಕಾರ್ಯಕ್ರಮ ನಡೆಯುವ ವೇಳೆ ಬ್ಯಾನರ್‍ನಲ್ಲಿ ನನ್ನ ಭಾವಚಿತ್ರ ಹಾಕುತ್ತಿಲ್ಲ. ಶಾಸಕರಿಗೆ ಮಾಹಿತಿ ನೀಡದೆ ರಸ್ತೆಯೊಂದನ್ನು ಉದ್ಘಾಟನೆ ಮಾಡಲಾಗಿದೆ ಎಂದು ಪಕ್ಷದವರೇ ಕೆಲವರು ಆರೋಪ ಮಾಡಿದ್ದಾರೆ. ಅಲ್ಲದೆ ಕಡಿಯಾಳಿ ದೇವಸ್ಥಾನದ ಗೇಟ್ ಬಂದ್ ಮಾಡಿರುವುದರಿಂದ ಅಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಹಾಗಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸದಸ್ಯೆ ಗೀತಾ ಶೇಟ್ ಹೇಳಿದರು.
Advertisement
Advertisement
ಈ ವೇಳೆ ಗೀತಾ ಅವರ ಪರವಾಗಿ ಹೇಳಿಕೆ ನೀಡಲು ರೋನಿ ಡೀಮೆಲ್ಲೊ ಎಂಬುವರು ಸದನದ ಒಳಗೆ ನುಗ್ಗಿದರು. ಹೀಗಾಗಿ ಕಾಂಗ್ರೆಸ್ ಸದಸ್ಯರು ಸೇರಿ ಅವರನ್ನು ತಡೆದು ಹಲ್ಲೆಮಾಡಿ ಹೊರ ದಬ್ಬಿದರು.
Advertisement
ರಮೇಶ್ ಕಾಂಚನ್, ರಮೇಶ್ ಪೂಜಾರಿ, ಸುಕೇಶ್ ಹೆರ್ಗ ಎಂಬವರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
https://youtu.be/0Lb4iGpcf30