– ಕಾಂಗ್ರೆಸ್ ಸೇರಲಿದ್ದಾರೆ ಹಾರ್ದಿಕ್ ಪಟೇಲ್
ಅಹಮದಾಬಾದ್: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರ ತವರು ಕ್ಷೇತ್ರದಿಂದಲೇ ಪ್ರಚಾರವನ್ನು ಆರಂಭಿಸಿದೆ. ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪ್ರಿಯಾಂಕ ಗಾಂಧಿ ಸಹ ಚುನಾವಣಾ ಪ್ರಚಾರದಲ್ಲಿ ಮೊದಲ ಭಾಷಣ ಮಾಡಲಿದ್ದಾರೆ. ಇದೇ ಸಮಾವೇಶದಲ್ಲಿ ಗುಜರಾತ್ ಪಾಟೇದಾರ್ ಮೀಸಲು ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಇಂದು ದಂಡಿ ಸತ್ಯಾಗ್ರಹದ ದಿನವಾಗಿದ್ದರಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಬರಮತಿ ಆಶ್ರಮದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾದರು. ಪ್ರಿಯಾಂಕ ಗಾಂಧಿ ಇಂದು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ.
Advertisement
Ahmedabad: Rahul Gandhi, Sonia Gandhi, Manmohan Singh and Priyanka Gandhi Vadra attend prayer meet on anniversary of 'Dandi March' at Sabarmati Ashram pic.twitter.com/JYuEkRUORV
— ANI (@ANI) March 12, 2019
Advertisement
ದೇಶ ಸೇವೆ ಮಾಡುವ ಹಂಬಲದಿಂದ ನಾನು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಯಾವುದೇ ಕಾನೂನಾತ್ಮಕ ತೊಂದರೆ ಆಗಿದಿದ್ದರೆ ಪಕ್ಷ ಹಾಗು ಕಾರ್ಯಕರ್ತರು ಒಪ್ಪಿಗೆ ಸೂಚಿಸಿದ್ರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬುದನ್ನು ಟ್ವೀಟ್ ಮೂಲಕ ಹಾರ್ದಿಕ್ ಪಟೇಲ್ ತಿಳಿಸಿದ್ದರು.
Advertisement
Ahmedabad: Rahul Gandhi, Sonia Gandhi, Manmohan Singh and Priyanka Gandhi Vadra attend prayer meet on anniversary of 'Dandi March' at Sabarmati Ashram pic.twitter.com/JYuEkRUORV
— ANI (@ANI) March 12, 2019
Advertisement
ಪಟೇಲ್ ಸಮುದಾಯ ಮೀಸಲಾತಿ ಹೋರಾಟದ ವೇಳೆ ಬಿಜೆಪಿ ಶಾಸಕರೊಬ್ಬರ ಕಚೇರಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಹಾರ್ದಿಕ್ ಪಟೇಲ್‍ಗೆ ಸ್ಥಳೀಯ ವಿಸ್ನಾನಗರ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿತ್ತು. 2015 ಪಟೇಲ್ ಸಮುದಾಯ ಮೀಸಲಾತಿ ನೀಡಲು ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಗುಜರಾತಿನಲ್ಲಿ ಬೃಹತ್ ಹೋರಾಟ ನಡೆದಿತ್ತು. ಈ ವೇಳೆ 3 ರಿಂದ 4 ಸಾವಿರ ಹೋರಾಟಗಾರರು ಸ್ಥಳೀಯ ಬಿಜೆಪಿ ಶಾಸಕ ರುಷಿಕೇಶ್ ಪಟೇಲ್ ಕಚೇರಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿದಂತೆ ಹಾರ್ದಿಕ್ ಪಟೇಲ್ ಸೇರಿದಂತೆ 17 ಮಂದಿ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದರು.
ಹಾರ್ದಿಕ್ ಪಟೇಲ್ ಜೈಲು ಶಿಕ್ಷೆಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದರೂ, ದೋಷಾರೋಪದಿಂದ ಮುಕ್ತವಾಗಿಲ್ಲ. ಹೀಗಾಗಿ ಹಾರ್ದಿಕ್ ಪಟೇಲ್ ಚುನಾವಣೆಗೆ ಸ್ಪರ್ಧಿಸಲು ಕಾನೂನು ತೊಡಕಾಗುವ ಸಾಧ್ಯತೆಗಳಿವೆ.
Ahmedabad: #Visuals from Sabarmati Ashram on anniversary of 'Dandi March'; Congress party will attend a prayer meet at the ashram & then hold Congress Working Committee (CWC) meeting at Sardar Patel Smarak. #Gujarat pic.twitter.com/kxyiA4PkLZ
— ANI (@ANI) March 12, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv