ಹುಬ್ಬಳ್ಳಿ: ಗಲಭೆ ಸ್ಥಳದಲ್ಲಿ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರ ಇದ್ದ ವಿಚಾರ ಬಯಲಾಗುತ್ತಲೇ ಬಿಜೆಪಿ ಸಿಡಿದೆದ್ದಿದೆ. ಇಡೀ ಪ್ರಕರಣಕ್ಕೆ ಪೊಲಿಟಿಕಲ್ ಟಚ್ ನೀಡಿದೆ. ಇದು ಕಾಂಗ್ರೆಸ್ ಕೃತ್ಯ ಎಂದೇ ಆರೋಪಿಸಿದೆ.
Advertisement
ಹಿಜಬ್ ವಿವಾದ ಕಾವೇರಿದ್ದ ಸಂದರ್ಭದಲ್ಲಿ ಫೆಬ್ರವರಿ 12ರಂದು ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಓರ್ವ ಶಿಕ್ಷಕಿ ರಕ್ತಪಾತದ ಬೆದರಿಕೆ ಹಾಕಿದ್ದರು. ಅವತ್ತಿನ ಹೇಳಿಕೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆ ವೇಳೆ ಹೇಳಿದ್ದನ್ನೇ ಈಗ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್
Advertisement
Advertisement
ಅಲ್ಲದೇ ಮೀರ್‍ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‍ಐ ಕಾರ್ಯಕರ್ತರೇ ಹುಬ್ಬಳ್ಳಿ ಗಲಭೆಗೆ ಕಾರಣ ಅಂತಾ ಆಪಾದಿಸಿದೆ. ಇನ್ನು, ಹುಬ್ಬಳ್ಳಿ ಗಲಭೆಗೆ ಅಲ್ತಾಫ್ ಹಳ್ಳೂರು ನೇರ ಕಾರಣ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಗಲಭೆ ಮಾಡಿದವರನ್ನು ಪ್ರೋತ್ಸಾಹಿಸ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ ಎಂದಿದ್ದಾರೆ. ಬಿಎಸ್‍ವೈ ಮಾತಿಗೆ ಅಲ್ತಾಫ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನವನಲ್ಲ ಎಂದಿದ್ದಾರೆ. ಮೀರ್ ಸಾದಿಕ್ ಎಂಬ ಬಿಜೆಪಿ ಟ್ವೀಟ್‍ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಹಿಂದೆ ವ್ಯವಸ್ಥಿತ ಪಿತೂರಿ- ಶಿರಚ್ಛೇದದ ಮಾತು, RSS ವಿರುದ್ಧ ಘೋಷಣೆ