ಕೋಲಾರ : ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ ಬಳಿಕ ಕೋಲಾರ ಜಿಲ್ಲೆಯ ರಾಜಕಾರಣ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರಕ್ಕೆ ಸಿದ್ದರಾಮಯ್ಯ ಬರುವುದಾದರೇ ಇರುವುದಕ್ಕೆ ಒಂದು ಸೂರು ಬೇಕಲ್ಲ, ಅದಕ್ಕಾಗಿ ಒಂದು ಮನೆ ಹಾಗೂ ಕಚೇರಿ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಕೋಲಾರವೂ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಇದೇ ತಿಂಗಳ 23ರಂದು ಕಾಂಗ್ರೆಸ್ (Congress) ನಾಯಕರು ಕೋಲಾರದಲ್ಲಿ ಬಸ್ ಯಾತ್ರೆ ಮಾಡಲಿದ್ದು, ಈ ಸಂದರ್ಭದಲ್ಲಿ ಕಚೇರಿ ಉದ್ಘಾಟನೆ ಮಾಡಿಸುವ ವಿಶ್ವಾಸದಲ್ಲಿದ್ದಾರೆ.
Advertisement
Advertisement
ಅವರು ಕೋಲಾರ ಪ್ರವಾಸ ಕೈಗೊಂಡ ವೇಳೆ ತಂಗಲು ಮನೆ ಹಾಗೂ ಸಾರ್ವಜನಿಕರನ್ನು ಸಂಪರ್ಕ ಮಾಡಲು ಕಚೇರಿ ಅವಶ್ಯಕ ಎನ್ನುವುದನ್ನು ಅರಿತ ಕಾಂಗ್ರೆಸ್ ನಾಯಕರು ಮನೆ, ಕಚೇರಿ ಮಾಡಲು ಸಿದ್ಧತೆಯಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಬಂದರೆ ಜನ ಹೆಚ್ಚು ಬರುತ್ತಾರೆ ಜೊತೆಗೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಭೆ ನಡೆಸಬೇಕಾದ ಸಂದರ್ಭದಲ್ಲಿ ಮನೆ ಕಚೇರಿ ಅವಶ್ಯಕವಾಗಿದೆ. ಇದನ್ನೂ ಓದಿ: ಮುಂದಿನ 10 ವರ್ಷ ನೀರಾವರಿ ದಶಕ – ಬೊಮ್ಮಾಯಿ ಘೋಷಣೆ
Advertisement
Advertisement
ಅದರಂತೆ ಕೋಲಾರ (Kolar) ಕ್ಷೇತ್ರ ಹಾಗೂ ಹಳ್ಳಿಗಾಡಿನ ಜನರಿಗೆ ಸುಲಭವಾಗಿ ಸಿಗುವಂತಹ ಪಿ.ಸಿ.ಬಡಾವಣೆ, ಬೈರೇಗೌಡ ನಗರ ಸುತ್ತಮುತ್ತ ಮನೆ ಹಾಗೂ ಕಚೇರಿ ಹುಡುಕಾಟವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಕೊನೆಯ ಚುನಾವಣೆ ಕೋಲಾರದಲ್ಲಿ ಖಚಿತವಾಗಿದ್ದು, ಕಾಂಗ್ರೆಸ್ ನಾಯಕರು ಜನರನ್ನು ಸೆಳೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಗ್ಲಾಸ್‍ನಲ್ಲಿ ಕೈ ಲಾಕ್ ಮಾಡಿ ಕಾರು ಓಡಿಸಿದ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಕಿರುಕುಳ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k