ನವದೆಹಲಿ: ಬ್ರಿಟಿಷರು ಕಟ್ಟಿಸಿದ್ದ ಸಂಸತ್ ಭವನದಲ್ಲಿ ಕಾಂಗ್ರೆಸ್‌ನವರು (Congress) ಎಂಜಾಯ್ ಮಾಡ್ತಿದ್ರು. ಇದೀಗ ಹೊಸ ಸಂಸತ್ ಭವನ (New Parliament Building) ಕಟ್ಟಿದ್ದು ವಿರೋಧಪಕ್ಷಗಳಿಗೆ ಹೊಟ್ಟೆ ಉರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ತಿರುಗೇಟು ನೀಡಿದ್ದಾರೆ.
Advertisement
ಭಾನುವಾರ (ಮೇ 28) ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದರು. ಬೆಳಗ್ಗೆ ಪೂಜಾ ವಿಧಿ-ವಿಧಾನಗಳು ನೆರವೇರಿದ ನಂತರ ಐತಿಹಾಸಿಕ ಸೆಂಗೋಲ್ ಅನ್ನು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಪ್ರಧಾನಿಯವರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದರು. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ
Advertisement
Advertisement
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಸಂಸತ್ ಭವನ ನವಭಾರತದ ಹೊಸ ಕನಸಿಗೆ ಹುರುಪು ತಂದಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಧರ್ಮ ದಂಡ (ರಾಜದಂಡ) ಸಂಸತ್ ಪ್ರವೇಶಿಸಿದೆ. ಇದು ನಿಜಕ್ಕೂ ಸಂತಸದ ಸಂಗತಿ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: New Parliament Building ಉದ್ಘಾಟನೆ – ಈ ಭವನ ಹಿರಿಮೆ, ವಿಶ್ವಾಸದ ಸಂಕೇತ: ಮೋದಿ
Advertisement
ಪರಕೀಯರ ಸಂಸತ್‌ನಿಂದ ನಮ್ಮ ತನದ ಸಂಸತ್‌ಗೆ ಪ್ರವೇಶವಾಗಿದೆ. ಇಷ್ಟು ದಿನ ಬ್ರಿಟಿಷರು ಕೂರಿಸಿದ್ದ ಸಂಸತ್‌ನಲ್ಲಿದ್ದೆವು, ಈಗ ನಮ್ಮ ಸ್ವಂತಿಕೆಯ ಸಂಸತ್‌ಗೆ ಪ್ರವೇಶಿಸಿದ್ದೇವೆ. ಭಾರತದಲ್ಲಿ ವಿರೋಧಪಕ್ಷಗಳು ವಿರೋಧ ಮಾಡುವುದಕ್ಕಾಗಿಯೇ ಇವೆ. ಬ್ರಿಟಿಷರು ಕಟ್ಟಿಸಿದ್ದ ಸಂಸತ್ ಭವನದಲ್ಲಿ ಕಾಂಗ್ರೆಸ್‌ನವರು ಎಂಜಾಯ್ ಮಾಡ್ತಿದ್ರು. ಹೊಸ ಸಂಸತ್ ಭವನ ಕಟ್ಟಿದ್ದು ವಿರೋಧಪಕ್ಷಗಳಿಗೆ ಹೊಟ್ಟೆ ಉರಿಯಾಗಿದೆ. ದೇಶದ ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ದೇವೇಗೌಡರು ಭಾಗಿಯಾಗಿರುವುದು ಅದು ಅವರ ದೊಡ್ಡತನ. ದೇಶದ ವಿಚಾರ ಬಂದಾಗ ಒಟ್ಟಿಗೆ ನಿಲ್ಲುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.