ಬೆಂಗಳೂರು: ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ಅವರು ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕಾಂಗ್ರೆಸ್ ನಾಯಕರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರು ಅನಂತ್ ಅವರ ನಿಧನಕ್ಕೆ ಟ್ವಿಟ್ಟರಿನಲ್ಲಿ, “ಕೇಂದ್ರ ಸಚಿವ ಶ್ರೀ ಅನಂತ್ ಸಚಿವ ಜೀ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿರುವ ಸುದ್ದಿ ಕೇಳಿ ನಾನು ವಿಷಾಧಿಸುತ್ತೇನೆ. ಅನಂತ್ ಅವರ ಸ್ನೇಹಿತರು ಹಾಗೂ ಕುಟುಂಬದವರಿಗೆ ನಾನು ಸಮಾಧಾನ ತಿಳಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.
Advertisement
I’m sorry to hear about the passing of Union Minister, Shri Ananth Kumar ji, in Bengaluru, earlier this morning. My condolences to his family & friends. May his soul rest in peace. Om Shanti.
— Rahul Gandhi (@RahulGandhi) November 12, 2018
Advertisement
ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗುತ್ತಿದೆ. ಅವರು ತಮ್ಮ ತಲೆಮಾರಿನ ಅತ್ಯುನ್ನತ ರಾಜಕೀಯ ಪ್ರತಿಭೆಗಳ ಪೈಕಿ ಒಬ್ಬರಾಗಿದ್ದರು. ಜ್ಞಾನ, ಅನುಭವ ಮತ್ತು ಬುದ್ಧಿ ಅದ್ಭುತ ಪರಿಣಾಮಗಳನ್ನು ಬಳಸಿದ ಚರ್ಚಾಗಾರಾಗಿದ್ದರು. ಅವರು ಕುಟುಂಬಕ್ಕೆ ಹಾಗೂ ಸಹದ್ಯೋಗಿಗಳಿಗೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಡಿಸಿಎಂ ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
Advertisement
Extremely sad to hear the news of the demise of Shri H.N.#AnanthKumar. He was without doubt one of the towering political talents of his generation – a sharp debater, who used knowledge, experience and wit to wonderful effect. I express my condolences to his family and colleagues pic.twitter.com/dSXtAsbXyX
— Dr. G Parameshwara (@DrParameshwara) November 12, 2018
Advertisement
ಡಿ.ಕೆ ಶಿವಕುಮಾರ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಅನಂತ್ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು ಹಾಗೂ ತುಂಬಾ ನೋವಾಯಿತು. ಅನಂತ್ ಅವರು ನಮ್ಮ ದೇಶವನ್ನು ಹಲವು ಸಾಮಥ್ರ್ಯಗಳಲ್ಲಿ ಸೇವೆ ಸಲ್ಲಿಸಿದ ಸಂಸತ್‍ನ ಸದಸ್ಯ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಆಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
Absolutely shocked & deeply pained by demise of Shri Ananth Kumar. A seasoned parliamentarian who served our nation in several capacities. My condolences to his family.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ. pic.twitter.com/ajqGwADJJe
— DK Shivakumar (@DKShivakumar) November 12, 2018
ಬಿಜೆಪಿಯ ಅಗ್ರಪಂಕ್ತಿಯ ನಾಯಕ ಮತ್ತು 1996 ರಿಂದಲೂ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಶ್ರೀ ಅನಂತ್ ಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ. ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ನೀಡಲೆಂದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
BJPಯ ಅಗ್ರಪಂಕ್ತಿಯ ನಾಯಕ ಮತ್ತು 1996 ರಿಂದಲೂ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಶ್ರೀ #AnanthKumar ರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ.
ಅವರು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ.
ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ನೀಡಲೆಂದು,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. pic.twitter.com/QHH8KOS796
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 12, 2018
ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಆಘಾತ ಹಾಗೂ ದುಃಖವಾಗಿದೆ. ಅವರು ಕರ್ನಾಟಕದ ಬಿಜೆಪಿ ಪಕ್ಷದಲ್ಲಿ ಅತೀ ಎತ್ತರದ ನಾಯಕರಾಗಿದ್ದರು. ಅವರು ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೆ.ಜೆ ಜಾರ್ಜ್ ಟ್ವೀಟ್ ಮಾಡಿದ್ದಾರೆ.
Extremely shocked and saddened by the sudden demise of Union Minister Shri. #AnanthKumar, one of the tallest leader of BJP in Karnataka. I extend my condolences to his family and may God rest his soul in peace. pic.twitter.com/v0YoGddlOu
— KJ George (@thekjgeorge) November 12, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews