ಬೆಂಗಳೂರು: ಭಾರತ ಹಾಗೂ ಭಾರತೀಯ ಸೇನೆಯ ವಿರುದ್ಧ ಕಾಂಗ್ರೆಸ್ (Congress) ನಾಯಕರು ಪಾಕಿಸ್ತಾನದ (Pakistan) ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ಸಚೇತಕ ರವಿಕುಮಾರ್ (N.Ravikumar) ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath), ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಪಾಕಿಸ್ತಾನ ಪರವಾದ ವಕ್ತಾರರು ರಾಜ್ಯದಲ್ಲಿ ಜಾಸ್ತಿ ಆಗಿದ್ದಾರೆ. ಮಂಜುನಾಥ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಪಾಕ್ ವಕ್ತಾರರು. ಪಾಕಿಸ್ತಾನದವರು ಮಾತಾಡಿದ ರೀತಿ ಮಾತಾಡ್ತಿದ್ದಾರೆ. ಪಾಕಿಸ್ತಾನವೇ ಭಾರತ ದಾಳಿ ಒಪ್ಪಿಕೊಂಡಿದೆ. ಉಗ್ರರ ಹತ್ಯೆ ಆಗಿದ್ದಕ್ಕೆ ಅವರ ಕುಟುಂಬಕ್ಕೆ ಪಾಕ್ ಸರ್ಕಾರ ಹಣ ಕೊಟ್ಟಿದೆ. ಮಂಜುನಾಥ್ ಅವರು ಸಾಕ್ಷಿ ಕೇಳ್ತಾರೆ. ಪ್ರಿಯಾಂಕ್ ಖರ್ಗೆ ಯಾರನ್ನ ನಂಬಬೇಕು ಅಂತ ಕೇಳ್ತಾರೆ. ಖರ್ಗೆ ಅವರೇ ನೀವು ಭಾರತದವರನ್ನ ನಂಬುತ್ತಾರಾ ಪಾಕಿಸ್ತಾನವನ್ನ ನಂಬುತ್ತಿರಾ? ನಿಮ್ಮ ಮಾತು ಕೇಳಿದ್ರೆ ಪಾಕಿಸ್ತಾನ ಪರ ಇದ್ದಂತೆ ಆಗ್ತಿದೆ.ಪ್ರಿಯಾಂಕ್ ಖರ್ಗೆ ಮಾತು ಕೇಳಿ ಕ್ಷೇತ್ರದ ಮತದಾರರೇ ಮತ ಹಾಕಿ ತಪ್ಪು ಮಾಡಿದ್ದೇವೆ ಅಂತಿದ್ದಾರೆ ಅನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ
ಕಾಂಗ್ರೆಸ್ ವಿಪಕ್ಷವಾಗಿ ಟೀಕೆ ಮಾಡಿ, ಆದರೆ ಸೈನಿಕರನ್ನ ಬಲಿಕೊಟ್ಟು ಟೀಕೆ ಮಾಡಬೇಡಿ. ದೇಶಕ್ಕೆ ಸೈನಿಕರು ಹುತಾತ್ಮರಾಗಿದ್ದಾರೆ. ಇದು ಕಾಂಗ್ರೆಸ್ ನಾಯಕರು, ಸಚಿವರಿಗೆ ಗೊತ್ತಿಲ್ಲವಾ? ಇವರಿಗೆ ಇತಿಹಾಸ ಗೊತ್ತಿಲ್ಲ. ಮಂಜುನಾಥ್ ಇತಿಹಾಸ ಗೊತ್ತಾ? ಅಡಿ ಜಮೀನಿಗೆ ಎಷ್ಟು ಅಂತ ಮಾತ್ರ ಗೊತ್ತು ಇವರಿಗೆ. ಗೊತ್ತಿಲ್ಲ ಎಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗಿದೆ ಅಂತ ತೋರಿಸೋಕೆ ಕಳಿಸ್ತೀವಿ ಹೋಗಿ ಬನ್ನಿ. ಮತ ಬ್ಯಾಂಕ್‌ಗೆ ಹೀಗೆ ಪಾಕಿಸ್ತಾನ ಪರವಾಗಿ ಗುಲಾಮಿ ತರ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಬಗ್ಗೆ ಅವರ ತಂದೆ ವ್ಯಥೆ ಪಡುತ್ತಿದ್ದಾರೆ ಅನ್ನಿಸುತ್ತೆ. ಮರಿ ಖರ್ಗೆ ಅವರೇ ದೇಶಕ್ಕೆ ಅಪಮಾನ ಮಾಡ್ತಿದ್ದೀರಾ. ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಇರಬಹುದು. ಅದಕೋಸ್ಕರ ಅವರು ಪಾಕಿಸ್ತಾನ ಪರ ಮಾತಾಡ್ತಿದ್ದಾರೆ. ನಿಮಗೇನು ಅವಾರ್ಡ್ ಸಿಗೊಲ್ಲ. ನಿಮ್ಮನ್ನ ಡಿಸಿಎಂ ಆಗಿ ಮಾಡೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಧನ ಸಮಾವೇಶ ಮಾಡೋಕೆ ಹೊರಟಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿರೋಕೆ ಸಾಧನೆ ಸಮಾವೇಶನಾ? PFI ಅವರ ಮೇಲಿನ ಕೇಸ್ ತೆಗೆದಿದ್ದಕ್ಕೆ ಸಾಧನೆ ಸಮಾವೇಶನಾ? ನಿಮ್ಮ ಸಾಧನೆ ಏನಿದೆ? ಎಷ್ಟು ಅಭಿವೃದ್ಧಿ ಆಗಿದೆ ಹೇಳಿ. ಗ್ಯಾರಂಟಿ ಗ್ಯಾರಂಟಿ ಅಂತೀರಾ ಏನ್ ಗ್ಯಾರಂಟಿ. ಭಯೋತ್ಪಾದಕರ ಕೇಸ್ ತೆಗೆದಿದ್ದು ಗ್ಯಾರಂಟಿನಾ? ಲಾಡ್, ಖರ್ಗೆ, ದಿನೇಶ್ ಗುಂಡೂರಾವ್ ಅವರೇ ನಿಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಮಾತಾಡಿ. ಯಾಕೆ ಮೋದಿ ವಿರುದ್ಧ ಮಾತಾಡ್ತೀರಾ? ಪಾಕಿಸ್ತಾನ ಪರವಾದ ಗುಲಾಮಿ ತನ ಒಳ್ಳೆಯದಲ್ಲ ಎಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಇದ್ದರೆ ಸೇನೆ ಬಗ್ಗೆ ಮಾತಾಡಿರೋದರ ಬಗ್ಗೆ ತನಿಖೆ ಮಾಡಲಿ. ಯಾವ ರೋಗ ಬಂದಿದೆ ಅಂತ ತನಿಖೆ ಮಾಡಲಿ. ಟ್ರಂಪ್ ಹೇಳಿದ್ದು, ಪಾಕಿಸ್ತಾನ ಪ್ರಧಾನಿ ಹೇಳಿದ್ದೇ ನಿಜನಾ? ಮೋದಿ ಹೇಳೋದು ನಂಬೊಲ್ಲವಾ? ನಾಚಿಕೆ ಆಗ್ಬೇಕು ಕಾಂಗ್ರೆಸ್‌ಗೆ. ಕಾಂಗ್ರೆಸ್‌ನ ದಡ್ಡತನದ ವರ್ತನೆ ಇದು. ಕಾಂಗ್ರೆಸ್‌ಗೆ ರೋಗ ಬಂದಿದೆ. ಬಿಜೆಪಿಯನ್ನು ಟೀಕೆ ಮಾಡೋ ಭರದಲ್ಲಿ ಸೇನೆಯನ್ನ ಹೀಯಾಳಿಸೋದು, ಸೈನಿಕರನ್ನ ಕುಗ್ಗಿಸೋದು ಸರಿಯಲ್ಲ. ರಾಹುಲ್ ಗಾಂಧಿ ಭಾರತದ ಬಗ್ಗೆ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್‌ನವರು ಹೀಗೆ ಮಾತಾಡೋದು ನೋಡಿದ್ರೆ ಕಾಂಗ್ರೆಸ್ ಪಾಕಿಸ್ತಾನದ ರೂಲಿಂಗ್ ಪಾರ್ಟಿ ಏಜೆಂಟ್ ಆಗಿದೆ. ಮಿತ್ರ ಪಕ್ಷ ಆಗಿದೆ ಅಥವಾ ಪಾಕಿಸ್ತಾನದ ರೂಲಿಂಗ್ ಪಾರ್ಟಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದಕರನ್ನು ಸೇನೆ ಹೊಡೆದು ಹಾಕಿದೆ. ಸೇನೆ ನಿರ್ಧಾರ ಮಾಡಿದೆ ಅವರಿಗೆ ಬಿಡಿ. ಇಂದಿರಾಗಾಂಧಿ ತರಹ ಶಿಮ್ಲಾ ಒಪ್ಪಂದವನ್ನು ಮಾಡಿದ ರೀತಿ ಮೋದಿಯವರು ಮಾಡೋದಿಲ್ಲ. ರಾಹುಲ್ ಗಾಂಧಿ ರೀತಿ ದೇಶಕ್ಕೆ ಅಪಕೀರ್ತಿ ತರುವ ಕೆಲಸವನ್ನು ಮೋದಿ ಮಾಡೋದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗ – ಕಾಂಗ್ರೆಸ್ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್ ಆಯ್ಕೆಮಾಡಿದ ಕೇಂದ್ರ!