ಕೊಪ್ಪಳ: ನಮ್ಮ ಪಕ್ಷಕ್ಕೆ ಬಾ, ಇಲ್ಲ ನಿನ್ನನ್ನು ಬಿಡುವುದಿಲ್ಲ ಎಂದು ಬಿಜೆಪಿಯವರು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರು ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ನಮ್ಮ ಪಕ್ಷಕ್ಕೆ ಬಾ, ಇಲ್ಲ ನಿನ್ನನ್ನು ಬಿಡುವುದಿಲ್ಲ ಎಂದು ಬಿಜೆಪಿಯವರು ಡಿ.ಕೆ ಶಿವಕುಮಾರ್ ಅವರಿಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ಡಿಕೆಶಿ ಮಾತ್ರ ಅದಕ್ಕೆ ಒಪ್ಪಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ಡಿ.ಕೆ ಶಿವಕುಮಾರ್ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಆಸ್ತಿ ಗಳಿಕೆ ಇವತ್ತಿನದ್ದಲ್ಲ. ಹಿಂದಿನಿಂದ ಅವರ ಆಸ್ತಿ ಇದೆ. ಮೋದಿ ಬಂದ ಮೇಲೆ ಬಿಜೆಪಿ ಅವರ ಮೇಲೆ ಇರೋ ಕೇಸ್ ಕ್ಲೋಸ್ ಆಗುತ್ತಿವೆ. ಯಡಿಯೂರಪ್ಪ, ಅಮಿತ್ ಶಾ ಅವರ ಮೇಲೆ ಇರೋ ಕೇಸ್ ಕ್ಲೋಸ್ ಆಗಿವೆ. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರ ಮೇಲೆ ಬಿದ್ದಿದ್ದಾರೆ ಎಂದು ಗರಂ ಆದರು.
ಬಿಜೆಪಿಯವರು ಮಾತ್ರ ಸತ್ಯಹರಿಶ್ಚಂದ್ರರು. ಉಳಿದವರು ಕೆಟ್ಟವರು ಎನ್ನುವಂತೆ ಬಿಂಬಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಜೊತೆ ನಾವೆಲ್ಲ ಇರುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ನಾಯಕರು, ಕೇಂದ್ರ ಸರ್ಕಾರದಿಂದ ಡಿಕೆಶಿ ಕುಟುಂಬಕ್ಕೆ ಕಿರುಕುಳ- ಸಿಎಂ ಲಿಂಗಪ್ಪ