ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಕೊಲೆ ಸಂಚಿಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಆಪ್ತನಿಗೆ ಸುಪಾರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ವೀಡಿಯೋ, ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಯಲಹಂಕದಿಂದ ಗೋಪಾಲಕೃಷ್ಣ ಅವರು ಎಸ್. ಆರ್ ವಿಶ್ವನಾಥ್ ಚುನಾವಣೆಯಲ್ಲಿ ವಿರುದ್ಧವಾಗಿ ನಿಂತು ಸೋತಿದ್ದರು. ಎಸ್. ಆರ್ ವಿಶ್ವನಾಥ್ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಈ ವೀಡಿಯೋ 2 ತಿಂಗಳ ಹಿಂದೆ ಶೂಟ್ ಮಾಡಿದ್ದು ಎನ್ನಲಾಗಿದೆ. ಗೋಪಾಲಕೃಷ್ಣ ತನ್ನ ಆಪ್ತ ಕುಳ್ಳ ದೇವರಾಜ್‍ಗೆ ಸುಪಾರಿ ಕೊಟ್ಟಿರುವ ಎರಡು ವೀಡಿಯೋ ಹಾಗೂ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ವೀಡಿಯೋದಲ್ಲಿ ಏನಿದೆ?: 6 ತಿಂಗಳು ಬೇಕಾದರೂ ಆಗಲಿ, ಕಡಬಗೆರೆ ಸೀನನ್ನು ಎತ್ತಿದ ಹಾಗೇ ಎಸ್.ಆರ್ ವಿಶ್ವನಾಥ್ ಎತ್ತಬೇಕು. ಕಾರ್‌ನಲ್ಲಿ ಹೋಗುವಾಗ ಅಟ್ಯಾಕ್ ಮಾಡಬಾರದು, ನಾಗಶೆಟ್ಟಿಯಲ್ಲಿ ಮಾಡೋಣ. ತೋಟ ಇರುವ ಜಾಗ ನೋಡಿ ಮಾಡೋಣ ಎಂದು ಹೇಳಿದ್ದಾರೆ. ಜೊತೆಗೆ ವೀಡಿಯೋದಲ್ಲಿ 20 ಲಕ್ಷ ರೂಪಾಯಿ ಹಣವನ್ನು ಕೊಡುವ ದೃಶ್ಯವೂ ಇದೆ.
Advertisement
ಕುಳ್ಳ ದೇವರಾಜ್ : ಹೇಳ್ತಿನಿ ಯಾರು ಅಂತ.. ಪಟ್ ಅಂತ ರೆಡಿ ಮಾಡಿ ಎಲ್ಲಾ ಮುಗಿಸಿಬಿಡೋಣ..
ಗೋಪಾಲಕೃಷ್ಣ : ಯಾವ ತರ ಮಾಡುತ್ತಾರೋ ಸೈಲೆಂಟಾಗಿ ಮಾಡುತ್ತಾರೆ..
ಕುಳ್ಳ ದೇವರಾಜ್ : ಸೈಲೆಂಟಾಗಿ ಮಾಡ್ತಾರೆ ನಿಂಗ್ ಯಾಕಣ್ಣ?
ಗೋಪಾಲಕೃಷ್ಣ : ಪಕ್ಕಾ ತಾನೇ?
ಕುಳ್ಳ ದೇವರಾಜ್ : ನಿನ್ನ ಕಥೆ ಕಟ್ಕೊ ನಾನು ಪಕ್ಕಾ ಮಾಡುಸ್ತೀನಿ. ಒಂದು ಹೊಡೆದವನಿಗೆ ಇನ್ನೊಂದು ಹೊಡೆಯೋದು ಕಷ್ಟಾನಾ? ಸಲ್ಪ ರಿಸ್ಕ್ ಆಗುತ್ತೆ. ಒಟ್ಟಿನಲ್ಲಿ ಡಿಪಾರ್ಟ್‍ಮೆಂಟದ್ದು ನಿನ್ನ ಇಂಚಾರ್ಜ್ ಡಿಪಾರ್ಟ್‍ಮೆಂಟ್ ಏನ್ ಮಾಡ್ತಾರೆ..
ಗೋಪಾಲಕೃಷ್ಣ : ಡಿಪಾರ್ಟ್‍ಮೆಂಟ್‍ದು ಏನಿದೆ?
Advertisement
ಕುಳ್ಳ ದೇವರಾಜ್ : ಒಂದೇಟು ಮುಟ್ಟಬಾರದು.. ಮಾಡಿ ಸೆರೆಂಡರ್ ಆಗ್ತಾರೆ.
ಗೋಪಾಲಕೃಷ್ಣ : ಆದರೆ ಅವನು ಫಿನಿಶ್ ಆಗಿಬಿಡಬೇಕು. ಫುಲ್ಲು ಮರ್ಡರ್ ಅರ್ಧಂಬರ್ಧ ಇರಬಾರದು
ಕುಳ್ಳ ದೇವರಾಜ್ : ಫಿನಿಶ್ ಆಗ್ತಾನೆ ಅಣ್ಣ, ಮಾಡಿ ಅವನ ಮೇಲೆ ಹೇಳೋ ತರ ಮಾಡೋಣ.
ಗೋಪಾಲಕೃಷ್ಣ : ಅವನ ಮೇಲೆನೆ ಹೇಳಬೇಕು.
ಕುಳ್ಳ ದೇವರಾಜ್ : ಅವರಿಗೂ ಅವನ ಮೇಲೆ ಕೋಪ ಇದೆ. ಅರ್ಥ ಆಯ್ತಾ. ಯಾವುದೋ 2-3 ಜಮೀನಿನ ಮೇಲೆ ಕೈ ಹಾಕಿ ಥಣಿಸಂದ್ರ ಕಡೆ ಇದು ಮಾಡವ್ರೆ.. ರೆಡಿ ಮಾಡ್ತಿನಿ ಅರ್ಥ ಆಯ್ತಾ.
ಗೋಪಾಲಕೃಷ್ಣ : ಓಕೆ ಮಾಡಿಸು.
ಕುಳ್ಳ ದೇವರಾಜ್ : ಕೊಡು ಅಡ್ವಾನ್ಸ್ ಎಷ್ಟು ಕೊಡ್ತಿಯಾ?
Advertisement
ಗೋಪಾಲಕೃಷ್ಣ: ಮಾಡಿಸು ಕೊಡ್ತಿನಿ. ಅರೇಂಜ್ ಮಾಡ್ತಿನಿ, ಹೌದಾ, ಪ್ಲ್ಯಾನ್ ರೆಡಿನಾ ಹಾಗಾದ್ರೆ?
ಗೋಪಾಲಕೃಷ್ಣ: ಗಾಂಜಾ ಪ್ಲೇಯರ್ ಆದರೂ ಫಂಕ್ಷನ್‍ನಲ್ಲಿ ಮಾಡೋದಲ್ಲ. ಇವನು ಹೊಡೆದು ಬಿಸಾಕೋದು ಎಷ್ಟೊತ್ತು ಅವರಿಗೆ.
ಕುಳ್ಳ ದೇವರಾಜ್ : ಇವಾಗ ಏನು ಅಣ್ಣ ಕತ್ತು ಕುಯ್ಕೊಂತಾರಾ ಏನು? ಇಲ್ಲಿ ಆಯ್ತಲ್ಲ ಸಿಗ್ನಲ್ಲಲ್ಲಿ ಕಡಬುಗೆರೆ ಸೀನಂದು ಹಂಗೆ ರೆಡಿ ಮಾಡ್ಕೊ.. ಢಮ್ ಅನ್ನಿಸೋಣ.
ಗೋಪಾಲಕೃಷ್ಣ : ಕಾರಲ್ಲಿ ಹೋಗೋವಾಗ ಮಾಡಬಾರದು.
ಕುಳ್ಳ ದೇವರಾಜ್ : ಅದು ಸಕ್ಕತ್ತಾಗ್ ಮಾಡಿದೆ ನೀನು ಪ್ಲಾನ್, ಹೆಂಗೋ ನಮಗೆಲ್ಲಾ ಗೊತ್ತು ತಗೋ.. ನೋಡು ಹಂಗೆ ಮಾಡಬೇಕು, ಸೈಲೆಂಟಾಗಿ.
ಗೋಪಾಲಕೃಷ್ಣ : ಉಳಿಬಾರ್ದು ಅರ್ಧಂಬರ್ಧ ಇದ್ರೆ ಕಷ್ಟ ಆಗುತ್ತೇ. ಫಿನಿಷ್ ಆಗಿಬಿಡಬೇಕು.
ಕುಳ್ಳ ದೇವರಾಜ್ : ನೀನು ಎಲ್ಲಾ ಕರೆಕ್ಟಾಗಿ ಮಾಡಿದೆ ಲಾಸ್ಟ್ ಟೈಂ ಆದರೆ ಹಾಸ್ಪಿಟಲ್ ಅಲ್ಲಿ ಸ್ವಲ್ಪ ಯಾಮಾರ್ ಬಿಟ್ಟೆ ಅವನು ಕಡಬಗೆರೆ ಹತ್ತಿರ. ನೀನಾಗಿ ನೀನೇ ಹೆಸರು ಹೇಳ್ಬಿಟ್ಟೆ ಅವನು ಹೇಳಿಲ್ಲ. ಮಿ** ನನ್ನ ಮಗ ಆವಾಗ ಕೇಸ್ ಸ್ವಲ್ಪ ಲೂಸ್ ಆಯ್ತು.
ಗೋಪಾಲಕೃಷ್ಣ : ಕೇಸ್ ಲೂಸ್ ಆಗಕ್ಕೆ ಪೊಲೀಸರಿಗೆ ಅವರ ಮೇಲೆ ನಂಬಿಕೆ ಇರಲಿಲ್ಲ. ಕಡಬಗೆರೆ ಅವರು ಬರೀ ಪೊಲೀಸ್ ಅವರ ಮೇಲೆ ಕೇಸ್ ಹಾಕ್ತಾ ಇದ್ದರು. ಎಸ್‍ಪಿ ಡಿಸಿಪಿ ಅಂತವರ ಮೇಲೆ ಕೇಸ್ ಹಾಕಿ ಬಿಟ್ಟಿದ್ದಾರೆ. ಅದಕ್ಕೆ ಪೊಲೀಸರು ಅಪೋಸಿಟ್ ಇದ್ದರು. ಹರ್ಷ ಡಿಸಿಪಿ ನನಗೆ ಹೇಳಿದ ಸರ್ ಯಾಕೆ ಹೋಗಿ ಹೋಗಿ ಈ ನನ್ನ ಮಕ್ಕಳಿಗೆ ಸಪೋರ್ಟ್ ಮಾಡುತ್ತೀರಾ ಸರ್, ಸರಿ ಇಲ್ಲ ಇವರು ಕಚಡಾ ನನ್ನ ಮಕ್ಕಳು. ಬ್ಯಾಗ್ರೌಂಡ್ ಗೊತ್ತಿಲ್ಲ ಸರ್ ನಿಮಗೆ. ಇಲ್ಲ ಅಂದಿದ್ರೆ ಇನ್ನಷ್ಟು ಮಾಡಿಸುತ್ತಿದ್ದೆ. ನೋಡು ಹುಷಾರಾಗಿ ಐಡಿಯಾ ಮಾಡು.
ಕುಳ್ಳ ದೇವರಾಜ್ : ಮಾಡೋಣ ಒಂದ್ 15 ದಿವಸ ಅಲ್ಲ, 6 ತಿಂಗಳು ಆಗಲಿ. ನಿಧಾನಕ್ಕೆ ರೆಡಿ ಮಾಡಿ ಹುಡುಗರನ್ನು ಫಿಲ್ಟರ್ ಮಾಡಬೇಕು. ಎಣ್ಣೆ ಇರಬಾರದು, ಗಾಂಜಾ ಇರಬಾರದು ಅವರಿಗೆ ಜಿದ್ದು ಇರಬೇಕು.
ಗೋಪಾಲಕೃಷ್ಣ : ಜಿದ್ದು ಇರಬೇಕು, ಆಮೇಲೆ ಒಳ್ಳೆಯ ಜಾಗ ನೋಡಿ ಕೊಂಡು ತೋಟ ಅಂತ ಜಾಗ ನೋಡಿಕೊಂಡು.. ಅಂತ ಕಡೆ ನೊಡ್ಕೊಬೇಕು.
ಗೋಪಾಲಕೃಷ್ಣ: ಅದನ್ನೆಲ್ಲಾ ಒಂದು ತಿಂಗಳು 2 ತಿಂಗಳಾದ್ರೂ ಪರವಾಗಿಲ್ಲ
ಕುಳ್ಳ ದೇವರಾಜ್: 3 ಜನ ಟೀಂ ಇದೆ ಅದರಲ್ಲಿ ಫಿಲ್ಟರ್ ಮಾಡ್ಕೊಬೇಕು. ಕರೆಕ್ಟಾಗಿ ಇರೋರನ್ನ ಖಡಕ್ಕಾಗಿ ಇರುವವರನ್ನು ಮಾಡ್ಕೊಂಡು.
ಕುಳ್ಳ ದೇವರಾಜ್: ವಾಕಿಂಗ್ ಬರ್ತಾನಾ..
ಗೋಪಾಲಕೃಷ್ಣ : ವಾಕಿಂಗ್ ಬರ್ತಾನೆ.. 7-8 ಗಂಟೆಗೆ.. ಅಲ್ಲಿ ಜಾಸ್ತಿ ಡೀಲಿಂಗ್ಸ್ ಇವಾಗ.. ತೋಟದಲ್ಲಿ..
ಕುಳ್ಳ ದೇವರಾಜ್ : ಮಾಡೋಣ ಬಿಡು, ನೀನು ದುಡ್ಡು ರೆಡಿ ಮಾಡ್ಕೊ ಕೆಲಸ ನಮ್ಮದು ಇರಲಿ.
ಗೋಪಾಲಕೃಷ್ಣ : ನೀನು ಫಸ್ಟ್ ಕ್ಲೀನಾಗಿ ಪ್ಲ್ಯಾನ್ ಮಾಡ್ಕೊ.
ಗೋಪಾಲಕೃಷ್ಣ : ಎರಡು ಏಟಲ್ಲಿ ಹೋಗಬೇಕು..
ಕುಳ್ಳ ದೇವರಾಜ್ : ಹೈದರಾಬಾದ್‌ನಿಂದ ಶಾರ್ಪ್ ಶೂಟರ್ ಕರೆಸುತ್ತಾರೆ, ಹೊಡೆಯುವುದು ಅವರು ಹೋಗುವುದು ಇವರು. ಶಾರ್ಪ್ ಶೂಟರ್ ಕರೆಸಿ ಬಿಟ್ಟು ಓಡ್ಸೋದು.
ಗೋಪಾಲಕೃಷ್ಣ : ಆಯ್ತಣ್ಣ., ಹೊರಟೋಯ್ತು ಅಣ್ಣ ಅನ್ನಬೇಕು.
ಕುಳ್ಳ ದೇವರಾಜ್ : ಫಸ್ಟ್ ಕೊಡಿಲ್ಲಿ ಕಾಸು.
ಗೋಪಾಲಕೃಷ್ಣ : ಇವನು ಯಾವ ಲೆಕ್ಕ ಹೇಳು. ಸಿಲಿಂಡರ್ ತಗೊಂಡು ಬಂದು ಒಬ್ಬನೇ ತಗೊಂಡು ಬಂದ್ ಢಮ್ ಅನ್ಸಿದರೆ ಆಯ್ತು.
ಕುಳ್ಳ ದೇವರಾಜ್ : ಆಗಲಿ ಕಾಸು ಬೇಡವಾ..?
ಕುಳ್ಳ ದೇವರಾಜ್ : ಒಬ್ಬನೇ ಇದ್ದಾಗ ಮಾಡ್ತಿವೋ… 10 ಜನ ಇದ್ದಾಗ ಮಾಡುತ್ತಿವೋ ನಿನಗ್ಯಾಕೆ..
ಗೋಪಾಲಕೃಷ್ಣ : 10 ಜನ ಬೇಡ ಸೈಲೆಂಟಾಗಿ ಮಾಡಿಸು, ತೋಟದಲ್ಲಿ ಕ್ಯಾಮೆರಾ ಇರಲ್ಲ.. ಟಿಂಗ್ ಟಿಂಗ್ ಟಿಂಗ್ ಅಂತ ಹಾರಿಸಬಹುದು.
ಕುಳ್ಳ ದೇವರಾಜ್ : ಕ್ಯಾಮರಾ ಇರಲಿ, ಬಿಡಲಿ. ನೀನು ಪಟ್ಟಂತಾ ರೆಡಿ ಮಾಡು. 5 ಲಕ್ಷ ಕೊಡು ಅಡ್ವಾನ್ಸ್.
ಗೋಪಾಲಕೃಷ್ಣ : ಆಯ್ತು. ಅಡ್ವಾನ್ಸ್ ಕೊಟ್ಟರೆ ಎಷ್ಟು ದಿನಕ್ಕೆ?
ಕುಳ್ಳ ದೇವರಾಜ್ : 20 ಇದೆ..
ಗೋಪಾಲಕೃಷ್ಣ : ಇದು ಎಲ್ಲಾ 2 ಲಕ್ಷ ಇದೆ.. ಇದು 1 ಲಕ್ಷ…
ಕುಳ್ಳ ದೇವರಾಜ್ : ಪಕ್ಕಾನಾ..? 500 ಆದ್ರೂ ಎಣಿಸು.
ಗೋಪಾಲಕೃಷ್ಣ : ಇಲ್ಲಾಪ್ಪ ಎಣಿಸು ಎಣಿಸು..
ಕುಳ್ಳ ದೇವರಾಜ್ : ಯಾವುದು ಲೆಕ್ಕಾ ಹಾಕೋದು..
ಗೋಪಾಲಕೃಷ್ಣ : ಅಲ್ಲೇ ಇದೆಯಲ್ಲ..
ಕುಳ್ಳ ದೇವರಾಜ್ : ಇದು 20 ಸಾವಿರ ಇದೆಯಲ್ಲ.. ಮಿಷಿನ್ ಅಲ್ಲಿ ಲೆಕ್ಕಾ ಹಾಕಿಸಿಕೊಂಡು ಬರಲಾ..?
ಗೋಪಾಲಕೃಷ್ಣ: ಏ.. ಹಾಕಪ್ಪ?
ಗೋಪಾಲಕೃಷ್ಣ: 2 ಲಕ್ಷದ 40 ಆಯ್ತು.. ಅದು ಸೇರಿ. ಎರಡೂ ವರೆ.
ಗೋಪಾಲಕೃಷ್ಣ: ಡಿಸಿಪಿ ಹರ್ಷ ಇದ್ದರು. ನಾನು ಹೇಳಿದಂತೆ ಕೇಳ್ತಾ ಇದ್ರು..
ಕುಳ್ಳ ದೇವರಾಜ್: ಹರ್ಷ ಸರ್ ಅಲ್ವಾ? ಇನ್ನೊಬ್ಬರು ಯಾರು ನಾರಾಯಣ ಅಂತಾ ಹೇಳ್ತಾ ಇದ್ರಿ
ಗೋಪಾಲಕೃಷ್ಣ: ಅವರು ಈ ಕೇಸಿಗೆ ಎನ್‌ಕ್ವೈರಿ ಆಫೀಸರ್ ಆಗಿ ಬಂದಿದ್ದರು.
ಕುಳ್ಳ ದೇವರಾಜ್ : ಅವರು ಫುಲ್ ಸಪೋರ್ಟ್ ಅಲ್ವಾ ನಿಮಗೆ. ಅದುಕ್ಕಾದ್ರೆ 25 ಲಕ್ಷ ಖರ್ಚು ಮಾಡಿದ್ದೀಯಾ? ಇದಕ್ಕೆ ಕೊಡು ಅಂದ್ರೆ ಅಳ್ತಿಯಾ?
ಗೋಪಾಲಕೃಷ್ಣ: 25 ಅಲ್ಲ 50 ಕೊಡ್ತಿನಿ, ತಲೆ ಕೆಡಿಸ್ಕೊಬೇಡ.
ಗೋಪಾಲಕೃಷ್ಣ: ನಾನು ಎಲ್ಲೂ ಬರಬಾರದು. ರಿಮೋಟ್ ಥರ ಆಗ್ಬೇಕು. ಕುತ್ತಿಗೆಗೆ ಬಂದರೂ ನಮ್ಮ ವಿಷಯ ಬರಬಾರದು. ನಾವು ಕರೆಕ್ಟಾಗ್ ಇದ್ದಾಗ ಎಲ್ಲಿ ಎಲ್ಲಿ ಏನು ಬೇಕು. ಎಲ್ಲಾ ಕಡೆ ಮುಚ್ಚಿ ಹಾಕಬಹುದು.
ಕುಳ್ಳ ದೇವರಾಜ್: ಅಣ್ಣಾ ಇದು ಯಾವದೋ ಕೆಲ್ಸ ಸ್ಟಾರ್ಟ್ ಮಾಡಿಸಿ ಬಿಟ್ಟು ನೀನು
ಗೋಪಾಲಕೃಷ್ಣ: ಮಾಡಯ್ಯ ಎಲ್ಲಿ ರಿಸಲ್ಟ್ ಬರಲಿಲ್ಲ ಇನ್ನ.
ಕುಳ್ಳ ದೇವರಾಜ್: ಏನು ಹೊಡೆದ ಮೇಲೆ ಕಾಸ್ ಕೊಡ್ತಾರಾ? ಯಾರಾದ್ರೂ?
ಗೋಪಾಲಕೃಷ್ಣ: ರಿಸಲ್ಟ್ ಇನ್ನೂ ಇಲ್ಲ.
ಕುಳ್ಳ ದೇವರಾಜ್: ನಾವು ಕೈಯಿಂದ ಕೊಡಬೇಕು ಅಷ್ಟೆ. ನೀನ್ ಮಾಡೋ ಕೆಲಸ.
ಗೋಪಾಲಕೃಷ್ಣ: ಕೊಡು, ಕೆಲಸ ಆದ ಮೇಲೆ ಅದರ ನೂರಷ್ಟು ತಗೊತಿಯಾ? ಅದು ಕಥೆನೇ ಬೇರೆ. ನೀನು ಎಲ್ಲೋ ಹೋಗ್ ಬಿಡ್ತಿಯಾ? ನನ್ನ ಜೊತೆ ಇಟ್ಟುಕೊಂಡು ಡಿಕೆ ಹತ್ತಿರ ಹೋಗ್ತಿನಿ.