ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಸನ್ನಿ ರಾಜ್‍ಪಾಲ್ ಅವರು ಪೊಲೀಸ್ ಮೇಲೆ ಹಲ್ಲೆ ಮಾಡಿ ಸಚಿವರ ಸಭೆಗೆ ನುಗ್ಗಿದ ಘಟನೆ ಇಂದೋರ್ ನಲ್ಲಿ ಇಂದು ನಡದಿದೆ.
ಮಧ್ಯಪ್ರದೇಶದ ಲೋಕೋಪಯೋಗಿ ಹಾಗೂ ಪರಿಸರ ಸಚಿವ ಸಜ್ಜನ್ ಸಿಂಗ್ ವರ್ಮಾ ಅವರು ಸಭೆ ನಡೆಸಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಸನ್ನಿ ರಾಜ್‍ಪಾಲ್ ಅವರನ್ನು ಪೊಲೀಸರು ತಡೆದು, ಸಭೆ ನಡೆದಿದೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಕ್ಯಾರೆ ಎನ್ನದ ಸನ್ನಿ ರಾಜ್‍ಪಾಲ್ ಹಲ್ಲೆ ಮಾಡಿ, ಸಭೆಗೆ ನುಗ್ಗಿದ್ದಾರೆ.
Advertisement
#WATCH Indore: Congress leader Sunny Rajpal misbehaves with a police personnel after being denied entry for a meeting chaired by minister Sajjan Singh Verma. #MadhyaPradesh. pic.twitter.com/LOBZ2SpITL
— ANI (@ANI) June 17, 2019
Advertisement
ಕಾಂಗ್ರೆಸ್ ಮುಖಂಡ ಸನ್ನಿ ರಾಜ್‍ಪಾಲ್ ವರ್ತನೆಯನ್ನು ಸ್ಥಳದಲ್ಲಿದ್ದ ಕೆಲವರು ಹಾಗೂ ಮಾಧ್ಯಮದವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮುಖಂಡರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.