ಬ್ರಸೆಲ್ಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಒಂದು ವಾರದ ಯುರೋಪ್ (Europe) ಪ್ರವಾಸಕ್ಕೆ ತೆರಳಿದ್ದು, ಯುರೋಪಿಯನ್ ಯೂನಿಯನ್ (EU) ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸೆಪ್ಟೆಂಬರ್ 7ರಂದು ಬ್ರಸೆಲ್ಸ್‌ನಲ್ಲಿ ಇಯು ವಕೀಲರನ್ನು ರಾಹುಲ್ ಗಾಂಧಿ ಭೇಟಿ ಮಾಡಲಿದ್ದು, ಹೇಗ್‌ನಲ್ಲಿಯೂ ಇದೇ ರೀತಿಯ ಸಭೆಯನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ರಾಗಾ ಸೆಪ್ಟೆಂಬರ್ 8ರಂದು ಪ್ಯಾರಿಸ್‌ನ (Paris) ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಜಿ20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷರ ಪ್ರವಾಸ – ಬೈಡನ್ ಪ್ರವಾಸಕ್ಕೂ ಮುನ್ನ ಜಿಲ್ ಬೈಡನ್‍ಗೆ ಕೊರೊನಾ ಸೋಂಕು
ಸೆಪ್ಟೆಂಬರ್ 9ರಂದು ರಾಹುಲ್ ಗಾಂಧಿ ಪ್ಯಾರಿಸ್‌ನಲ್ಲಿರುವ ಫ್ರಾನ್ಸ್‌ನ ಲೇಬರ್ ಯೂನಿಯನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಾರ್ವೆಗೆ ಭೇಟಿ ನೀಡಲಿರುವ ಅವರು, ಸೆಪ್ಟೆಂಬರ್ 10ರಂದು ಓಸ್ಲೋದಲ್ಲಿ ಡಯಾಸ್ಪೋರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: 68ನೇ ವಯಸ್ಸಿನಲ್ಲಿ ಮೂರನೇ ಮದ್ವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ
ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ರಾಹುಲ್ ಗಾಂಧಿ ಈ ಸಭೆ ಮುಕ್ತಾಯಗೊಂಡ ಬಳಿಕ ಅಂದರೆ ಸೆಪ್ಟೆಂಬರ್ 11ರಂದು ಹಿಂದಿರುಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?
Web Stories