ಜೈಪುರ: ಪ್ರಪಂಚದ ಇತರ ಜನರೊಂದಿಗೆ ಮಾತನಾಡುವಾಗ ಹಿಂದಿ ಕೆಲಸ ಮಾಡುವುದಿಲ್ಲ ಬದಲಿಗೆ ಇಂಗ್ಲಿಷ್ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದರು.
ರಾಜಸ್ಥಾನದ ಅಲ್ವಾರ್‌ನಲ್ಲಿ ರ‍್ಯಾಲಿಯಲ್ಲಿ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕರು ಶಾಲೆಯಲ್ಲಿ ಇಂಗ್ಲಿಷ್ ಕಲಿಸಲು ಬಯಸುವುದಿಲ್ಲ. ಆದರೆ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಾರೆ. ವಾಸ್ತವವಾಗಿ, ಬಡ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯಲು ಬಿಜೆಪಿ ನಾಯಕರು ಬಯಸುವುದಿಲ್ಲ. ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುತ್ತಾರೆ ಎಂಬ ಭಯವಿದೆ ಅವರಿಗೆ ಎಂದು ಕಿಡಿಕಾರಿದರು.
Advertisement
LIVE: कांग्रेस अध्यक्ष श्री @kharge जी एवं श्री @RahulGandhi जी की मालाखेड़ा (अलवर) में विशाल जनसभा#AlwarBoleBharatJodo#BharatJodoYatrahttps://t.co/U6rBARph50
— Govind Singh Dotasra (@GovindDotasra) December 19, 2022
Advertisement
ಬಿಜೆಪಿಯ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಬಿಜೆಪಿ ನಾಯಕರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ, ರೈತರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬಾರದು ಎಂದು ಬಿಜೆಪಿ ಬಯಸುತ್ತದೆ. ಆದರೆ ಹಿಂದಿ ಅಥವಾ ತಮಿಳಿನಂತಹ ಇತರ ಭಾಷೆಗಳನ್ನು ಓದಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ನೀವು ಪ್ರಪಂಚದೊಂದಿಗೆ ಸಂಪರ್ಕ ಹೊಂದಲು ಬಯಸಿದರೆ, ನೀವು ಇಂಗ್ಲಿಷ್ ತಿಳಿದಿರಬೇಕು ಎಂದು ಹೇಳಿದರು. ಇದನ್ನೂ ಓದಿ: ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?
Advertisement
Advertisement
ಬಡ ರೈತರ ಮಕ್ಕಳು, ಕಾರ್ಮಿಕರು ನಮಗೆ ಬೇಕು. ಅವರು ಇಂಗ್ಲಿಷ್ ಕಲಿತರೆ ಅಮೆರಿಕನ್ನರೊಂದಿಗೆ ಸ್ಪರ್ಧಿಸಲು ಹಾಗೂ ಅವರ ಭಾಷೆಯನ್ನು ಬಳಸಿ ಅವರನ್ನು ಗೆಲ್ಲಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಸುಮಾರು 1,700 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲಾಗಿದೆ. ಯುವಕರು ಇಂಗ್ಲಿಷ್ ಕಲಿತು ಅಮೆರಿಕನ್ ಮಕ್ಕಳಿಗೆ ಸವಾಲು ಹಾಕಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದರು. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು