ಬೆಂಗಳೂರು: ರೌಡಿ ನಲಪಾಡ್ ಸುದ್ದಿ ಮಾಡಿದ್ದಕ್ಕೆ ಶಾಸಕ ಹ್ಯಾರಿಸ್ ಬೆಂಬಲಿಗರು ಪಬ್ಲಿಕ್ ಟಿವಿ ಕ್ಯಾಮೆರಾಮೆನ್ ಮೇಲೆ ಹಲ್ಲೆ ಮಾಡಿದ್ದಾರೆ.
ಸೋಮವಾರ ಸಂಜೆ 4 ಗಂಟೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಿಂದ ಕೋರ್ಟ್ ನಲಪಾಡ್ ನನ್ನು ಪೊಲೀಸರು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದರು. ಈ ವೇಳೆ ದೃಶ್ಯವನ್ನು ಸೆರೆ ಹಿಡಿಯಲು ಮಾಧ್ಯಮಗಳ ಕ್ಯಾಮೆರಾಮೆನ್‍ಗಳು ಮತ್ತು ಛಾಯಾಗ್ರಾಹಕರು ನಿಂತಿದ್ದರು.
Advertisement
Advertisement
ಈ ಸಂದರ್ಭದಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಪಬ್ಲಿಕ್ ಟಿವಿ ಕ್ಯಾಮೆರಾ ಮೆನ್ ಗಣೇಶ್ ಮೇಲೆ ರೌಡಿ ಗ್ಯಾಂಗ್ ಹಲ್ಲೆ ಮಾಡಿದೆ. ಶೂಟಿಂಗ್ ಮಾಡಿದ್ದಕ್ಕೆ ಕ್ಯಾಮೆರಾದ ಮುಂಭಾಗವನ್ನು ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಗಣೇಶ್ ಹಿಂದುಗಡೆ ಇದ್ದಂತಹ ಬ್ಯಾಕ್ ಪ್ಯಾಕ್ ಗೆ ಹೊಡೆದು ಜಖಂಗೊಳಿಸುವ ಪ್ರಯತ್ನ ಮಾಡಿದ್ದಾರೆ.
Advertisement
Advertisement
ಘಟನೆ ಹೇಗಾಯ್ತು ಎಂದು ವಿವರಿಸಿದ ಗಣೇಶ್ ಅವರು, ಸಂಜೆ ಶೂಟಿಂಗ್ ಮಾಡಲು ನಿಂತಿದ್ದಾಗ ಗೂಂಡಾ ಬೆಂಬಲಿಗರು ಸ್ಥಳಕ್ಕೆ ಆಗಮಿಸಿದರು. ಶೂಟ್ ಮಾಡುತ್ತಿದ್ದಾಗ “ಇವರು ಪಬ್ಲಿಕ್ ಟಿವಿಯವರು” ಎಂದು ಹೇಳಿ ಹಿಂದಿನಿಂದ ಹೊಡೆದರು. ಅಷ್ಟೇ ಅಲ್ಲದೇ ಐಪಿಸಿ ಸೆಕ್ಷನ್ 307(ಹತ್ಯೆ ಯತ್ನ) ಅಡಿಯಲ್ಲಿ ಕೇಸ್ ಹಾಕಬೇಕು ಎಂದು ಬೆಳಗ್ಗೆಯಿಂದ ಸುದ್ದಿ ಬಿತ್ತರಿಸಿದ್ದಾರೆ ಎಂದು ಹೇಳಿ ಹೊಡೆಯಲು ಆರಂಭಿಸಿದರು. ಈ ವೇಳೆ ಅಲ್ಲೆ ಏಜೆನ್ಸಿ ಒಂದರ ಹಿರಿಯ ಫೋಟೋಗ್ರಾಫರ್ ಮೇಲೆಯೂ ಹಲ್ಲೆ ನಡೆಸಿದರು. ಈ ವೇಳೆ ನನ್ನನ್ನು ಸೇರಿದಂತೆ ನಾಲ್ಕು ಮುಂದಿಯನ್ನು ಬಿಳಿಸಿ ತುಳಿದಿದ್ದಾರೆ. ಪೊಲೀಸರಿಗಿಂತಲೂ ರೌಡಿ ನಲಪಾಡ್ ಗ್ಯಾಂಗ್ ನ ಅಭಿಮಾನಿಗಳ ಸಂಖ್ಯೆಯೇ ಜಾಸ್ತಿ ಇತ್ತು ಎಂದು ವಿವರಿಸಿದರು.
ಅವರ ದರ್ಪ ಹೇಗಿತ್ತು ಎಂದರೆ, ಪೊಲೀಸ್ ಠಾಣೆ ನಮ್ಮದೇ, ನಲಪಾಡ್ ನಮ್ಮ ಬಾಸ್, ಪ್ರಿನ್ಸ್, ನಲಪಾಡ್‍ಗೆ ಜೈ ಎಂದು ಘೋಷಣೆ ಕೂಗುತ್ತಿದ್ದರು ಎಂದು ಗಣೇಶ್ ತಿಳಿಸಿದರು.
https://www.youtube.com/watch?v=s6QIz2E8-mE
https://www.youtube.com/watch?v=HHtov0B5tLs