– ಶಾಸಕ ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದ ಹೈದರ್
ಬೆಂಗಳೂರು: ಶನಿವಾರ ತಡರಾತ್ರಿ ಲೈವ್ ಬ್ಯಾಂಡ್‌ನಿಂದ ಹೊರ ಬರುತ್ತಿದ್ದ ಕಾಂಗ್ರೆಸ್ ಶಾಸಕನನ್ನು (Congress Leader) ಅಡ್ಡಗಟ್ಟಿ ಭೀಕರ ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಅಶೋಕನಗರದ (Ashoknagar) ಗರುಡ ಮಾಲ್ ಬಳಿ ನಡೆದಿದೆ.
Advertisement
ಶೇಖ್ ಹೈದರ್ ಅಲಿ ಕೊಲೆಯಾದ ಕಾಂಗ್ರೆಸ್ ಮುಖಂಡ. ತಡರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಹೈದರ್ ಅಲಿ ಲೈವ್ ಬ್ಯಾಂಡ್‌ನಿಂದ ರಾತ್ರಿ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದ ಮಡುವಲ್ಲಿ ಬಿದಿದ್ದ ಹೈದರ್ ಅವರನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಆನೆಪಾಳ್ಯ ನಿವಾಸಿ ಹೈದರ್ ಸಾವನ್ನಪ್ಪಿದ್ದರು. ಇದನ್ನೂ ಓದಿ: Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?
Advertisement
ವಿಚಾರ ತಿಳಿದು ಬೌರಿಂಗ್ ಆಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದು, ಲಾಂಗು-ಮಚ್ಚು ಝಳಪಿಸಿ ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶೇಖ್ ಹೈದರ್ ಅಲಿ ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದರು. ಹೈದರ್ ಅಲಿ ಹ್ಯಾರಿಸ್ ಪರ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರು. ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ
Advertisement
Advertisement
ಘಟನೆ ಸಂಬಂಧ ಡಿಸಿಪಿ ಶೇಖರ್ ಮಾತನಾಡಿ, ತಡರಾತ್ರಿ 1 ಗಂಟೆ ವೇಳೆ ಫುಟ್ಬಾಲ್ ಸ್ಟೇಡಿಯಂ ಗೇಟ್ ಬಳಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ರೌಡಿಶೀಟರ್. ಹೈದರ್ ಅಲಿ ವಿರುದ್ಧ 11 ಪ್ರಕರಣಗಳಿವೆ. ಮಾರಣಾಂತಿಕ ಹಲ್ಲೆ, ಸಾಮಾನ್ಯ ಹಲ್ಲೆ, ಎನ್ಡಿಪಿಎಸ್ ಕೇಸ್‌ಗಳು ಇದೆ. ಹೈದರ್ ಅಶೋಕನಗರ ಪೊಲೀಸ್ ಠಾಣಾ ರೌಡಿಶೀಟರ್. 2016ರಿಂದ ರೌಡಿಶೀಟರ್ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೊಲೆಯಾದ ವ್ಯಕ್ತಿಗೆ ರಾಜಕೀಯ ಹಿನ್ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಿದ್ದಕ್ಕೆ ಸಿಟ್ಟು; ಆಕೆಯ ಗಂಡನಿಗೆ ಇರಿದು ಹತ್ಯೆ ಮಾಡಿದ ಪಾಗಲ್ ಪ್ರೇಮಿ