ಬೆಂಗಳೂರು: ಬೆಲೆ ಏರಿಕೆ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ನಾಲಗೆ ಬಿದ್ದು ಹೋಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಸರಣಿ ಟ್ವೀಟ್ ಮೂಲಕ ಬಿಜೆಪಿ ನಾಯಕರು ಹಾಗೂ ಬೆಲೆ ಏರಿಕೆ ವಿರುದ್ಧ ಹರಿಹಾಯ್ದ ದಿನೇಶ್ ಗುಂಡೂರಾವ್, ರಾಜ್ಯ BJP ಉಸ್ತುವಾರಿ ಅರುಣ್ ಸಿಂಗ್ ಬೆಲೆಯೇರಿಕೆ ಬಗ್ಗೆ ಪ್ರತಿಕ್ರಿಯಿಸಲು ನಾನೇನು RBI ಗೌರ್ನರ್ ಅಲ್ಲ ಎಂದಿದ್ದಾರೆ. ಇದು ಅರುಣ್ ಸಿಂಗ್ ಅವರ ಅಜ್ಞಾನ ಮತ್ತು ಭಂಡತನದ ಪರಮಾವಧಿ. ಬೆಲೆಯೇರಿಕೆ ಬಗ್ಗೆ RBI ಗೌರ್ನರ್ ಸಮಜಾಯಿಷಿ ಕೊಡುವುದಾದರೆ,ಬೆಲೆ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು ಎಂದು ಪ್ರಶ್ನಿಸಿದರು.
Advertisement
1@BJP4Karnataka ಉಸ್ತುವಾರಿ @ArunSinghbjp ಬೆಲೆಯೇರಿಕೆ ಬಗ್ಗೆ ಪ್ರತಿಕ್ರಿಯಿಸಲು ನಾನೇನು RBI ಗೌರ್ನರ್ ಅಲ್ಲ ಎಂದಿದ್ದಾರೆ.
ಇದು ಅರುಣ್ ಸಿಂಗ್ ಅವರ ಅಜ್ಞಾನ ಮತ್ತು ಭಂಡತನದ ಪರಮಾವಧಿ.
ಬೆಲೆಯೇರಿಕೆ ಬಗ್ಗೆ RBI ಗೌರ್ನರ್ ಸಮಜಾಯಿಷಿ ಕೊಡುವುದಾದರೆ,ಬೆಲೆ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 3, 2021
Advertisement
ಬೆಲೆಯೇರಿಕೆ ಬಗ್ಗೆ ಮಾತನಾಡಲು BJP ನಾಯಕರಿಗೆ ಈಗ ನಾಲಗೆ ಬಿದ್ದು ಹೋಗಿದೆ. ಹಾಗಾಗಿ ಜನರ ಗಮನ ಬೇರೆಡೆ ಸೆಳೆಯಲು ಧರ್ಮ, ದೇವರು,ಹೆಸರು ಬದಲಾವಣೆ ಎಂಬ ಅಸ್ತ್ರ ಪ್ರಯೋಗ ಮಾಡುತ್ತಿರುತ್ತಾರೆ. ಬಿಜೆಪಿಯ ಕೆಲ ಜೋಕರ್ ಗಳು ಈ ಅಸ್ತ್ರ ಪ್ರಯೋಗಿಸುತ್ತಾ ಜನ ಎದುರಿಸುತ್ತಿರುವ ನೈಜ ಸಮಸ್ಯೆ ಮರೆ ಮಾಚಿ ದೇಶಕ್ಕೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಇದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿಯ ಮುಂದುವರಿದ ಭಾಗ: ರೋಹಿಣಿ ಸಿಂಧೂರಿ
Advertisement
2
ಬೆಲೆಯೇರಿಕೆ ಬಗ್ಗೆ ಮಾತನಾಡಲು BJP ನಾಯಕರಿಗೆ ಈಗ ನಾಲಗೆ ಬಿದ್ದು ಹೋಗಿದೆ. ಹಾಗಾಗಿ ಜನರ ಗಮನ ಬೇರೆಡೆ ಸೆಳೆಯಲು ಧರ್ಮ, ದೇವರು,ಹೆಸರು ಬದಲಾವಣೆ ಎಂಬ ಅಸ್ತ್ರ ಪ್ರಯೋಗ ಮಾಡುತ್ತಿರುತ್ತಾರೆ.
ಬಿಜೆಪಿಯ ಕೆಲ ಜೋಕರ್‌ಗಳು ಈ ಅಸ್ತ್ರ ಪ್ರಯೋಗಿಸುತ್ತಾ ಜನ ಎದುರಿಸುತ್ತಿರುವ ನೈಜ ಸಮಸ್ಯೆ ಮರೆ ಮಾಚಿ ದೇಶಕ್ಕೆ ದ್ರೋಹ ಎಸಗುತ್ತಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 3, 2021
Advertisement
ಸಂಪನ್ಮೂಲ ಕ್ರೋಢೀಕರಣಕ್ಕೆ ಬೆಲೆಯೇರಿಕೆ ಅನಿವಾರ್ಯ ಎಂಬ ಕೆಲ BJP ನಾಯಕರ ವಾದ ಶುದ್ಧ ಅವಿವೇಕತನದ್ದು. ಕೇವಲ ತೈಲದ ತೆರಿಗೆಯ ಮೂಲಕವೇ ಕೇಂದ್ರ ಇಲ್ಲಿಯವರೆಗೂ 23 ಲಕ್ಷ ಕೋಟಿ ಸಂಗ್ರಹಿಸಿದೆ. ಆ ಹಣ ಯಾವ ಅಭಿವೃದ್ಧಿಗೆ ಬಳಕೆಯಾಗಿದೆ.? ತಾನೇ ಜಾರಿಗೆ ತಂದ 10 ಯೋಜನೆಗಳಿಗೆ ಕೇಂದ್ರಕ್ಕೆ ಅನುದಾನ ಕೊಡುವ ಯೋಗ್ಯತೆಯಿಲ್ಲ. ಅಭಿವೃದ್ಧಿ ಎಲ್ಲಿದೆ ಎಂದು ಟ್ವಿಟ್ಟರ್ ಮುಖಾಂತರ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ
3
ಸಂಪನ್ಮೂಲ ಕ್ರೋಢೀಕರಣಕ್ಕೆ ಬೆಲೆಯೇರಿಕೆ ಅನಿವಾರ್ಯ ಎಂಬ @BJP4India ನಾಯಕರ ವಾದ ಶುದ್ಧ ಅವಿವೇಕತನದು.
ಕೇವಲ ತೈಲದ ತೆರಿಗೆಯ ಮೂಲಕವೇ ಕೇಂದ್ರ ಇಲ್ಲಿಯವರೆಗೂ 23ಲಕ್ಷ ಕೋಟಿ ಸಂಗ್ರಹಿಸಿದೆ.
ಆ ಹಣ ಯಾವ ಅಭಿವೃದ್ಧಿಗೆ ಬಳಕೆಯಾಗಿದೆ?
ತಾನೇ ಜಾರಿಗೆ ತಂದ 10 ಯೋಜನೆಗಳಿಗೆ ಕೇಂದ್ರಕ್ಕೆ ಅನುದಾನ ಕೊಡುವ ಯೋಗ್ಯತೆಯಿಲ್ಲ. ಅಭಿವೃದ್ಧಿ ಎಲ್ಲಿದೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 3, 2021