ಬೆಂಗಳೂರು: ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಪಕ್ಷದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೇಳೂರು ಗೋಪಾಲಕೃಷ್ಣ ಅವರು ಒಂದು ತಿಂಗಳ ಹಿಂದೆ ಅಂದರೆ ಫೆ.4 ರಂದು ನೀಡಿದ ಹೇಳಿಕೆಯನ್ನ ಕರ್ನಾಟಕ ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಕೇಂದ್ರ ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸರ ಟ್ವಿಟ್ಟರ್ ಖಾತೆಗಳನ್ನು ಟ್ಯಾಗ್ ಮಾಡಿ ಕ್ರಮಕೈಗೊಳ್ಳಲು ಮನವಿ ಮಾಡಿಕೊಂಡಿದೆ.
Advertisement
Advertisement
ರಾಹುಲ್ ಗಾಂಧಿಯವರೇ ನೀವು ಕೆಟ್ಟ ರಾಜಕೀಯವನ್ನು ವಿರೋಧಿಸುತ್ತೀರಿ ಎಂದು ಹೇಳುತ್ತೀರಿ. ಆದರೆ ಈಗ ನಿಮ್ಮ ಪಕ್ಷದ ನಾಯಕರೇ ಮೋದಿ ಅವರನ್ನು ಗುಂಡಿಟ್ಟು ಕೊಲ್ಲಲು ಕರೆ ನೀಡುತ್ತಾರೆ. ಹೀಗಾಗಿ ಇವರ ವಿರುದ್ಧ ಏನು ಕ್ರಮವನ್ನು ಕೈಗೊಳ್ಳುತ್ತೀರಿ ಎಂದು ಕರ್ನಾಟಕ ಬಿಜೆಪಿ ಪ್ರಶ್ನೆಯನ್ನು ಕೇಳಿದೆ.
Advertisement
ದೇಶದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ನಾವು ಹೆಚ್ಚು ಗೌರವವನ್ನು ನೀಡಿದ್ದೇವೆ. ಆದರೆ ಇಂದು ಗಾಂಧಿಜೀ ಬದುಕಿದ್ದರೆ ಗುಂಡಿಟ್ಟು ಸಾಯಿಸುತ್ತೇವೆ ಎಂದು ಹಿಂದೂ ಮಹಾಸಭಾ ನಾಯಕಿ ಹೇಳುತ್ತಾರೆ. ಹಾಗಾದರೆ ದೇಶಕ್ಕೆ ಅಘಾತ ತರುತ್ತಿರುವ ಪ್ರಧಾನಿ ಮೋದಿ ಅವರನ್ನು ತಾಕತ್ ಇದ್ದರೆ ಗುಂಡಿಟ್ಟು ಸಾಯಿಸಿ ಎಂದು ಹೇಳಿ ಬಿಜೆಪಿಗೆ ಟಾಂಗ್ ನೀಡಿದ್ದರು.
Advertisement
ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದ ಬೇಳೂರು ಗೋಪಾಲ ಕೃಷ್ಣ ಅವರು, ಗಾಂಧಿ ಪ್ರತಿಮೆಗೆ ಗುಂಡಿಟ್ಟ ಸಂದರ್ಭವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. ಮೋದಿ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ನಿರ್ಮಾಣ ಆಗಿದ್ಯಾ ನಿರ್ಮಾಣ ಆಗಿಲ್ಲ ಎಂದಾದರೆ ಪ್ರಧಾನಿ ಮೋದಿಯನ್ನು ತಾಕತ್ ಇದ್ದರೆ ಗುಂಡಿಟ್ಟು ಸಾಯಿಸಿ ಎಂದಿದ್ದರು.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ನಮಗೆ ಬೇಳೂರು ಅವರ ಹೇಳಿಕೆ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇಂದು ವಿಡಿಯೋ ಸಿಕ್ಕಿದೆ. ಆದ್ದರಿಂದಲೇ ಈಗ ಮಾಹಿತಿ ನೀಡಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರ ಸೇರಿದಂತೆ ಗೃಹ ಇಲಾಖೆ ಬೇಳೂರು ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv