-20:8 ಸೀಟಿಗೆ ದೋಸ್ತಿಗಳು ಜೈಜೈ
ಬೆಂಗಳೂರು: ವಿಧಾನಸಭೆಯ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ – ಜೆಡಿಎಸ್ ನಡುವೆ ಲೋಕಸಭಾ ಸೀಟು ಹಂಚಿಕೆ ಕಗ್ಗಂಟು ಬಗೆಹರಿದಿದೆ. ಕರ್ನಾಟಕದ ಹೊಂದಾಣಿಕೆ ಮೇಲೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಜೆಡಿಎಸ್ ಲೋಕಸಭಾ ಸೀಟುಗಳನ್ನು ನಮಗಿಷ್ಟು, ನಿಮಗಿಷ್ಟು ಎಂದು ಹಂಚಿಕೊಂಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಜೊತೆ ಮಾತುಕತೆ ನಡೆಸಿ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳು ಕಾಂಗ್ರೆಸ್ ಇಟ್ಟುಕೊಂಡಿದ್ದರೆ, 8 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲಾಗಿದೆ. ಶಿಷ್ಯ ಸಿದ್ದರಾಮಯ್ಯರ ಕ್ಷೇತ್ರವಾದ ಮೈಸೂರನ್ನು ಬಿಟ್ಟು ಕೊಟ್ಟಿಲ್ಲ. ಈಗ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರೋ ಕಾರಣ ಬೆಂಗಳೂರು ಉತ್ತರದಿಂದಲೇ ದೇವೇಗೌಡರು ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ದೋಸ್ತಿಗಳ ಕ್ಷೇತ್ರ ಮತ್ತು ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಜೆಡಿಎಸ್ ಕ್ಷೇತ್ರ & ಸಂಭಾವ್ಯ ಅಭ್ಯರ್ಥಿ
ಬೆಂಗಳೂರು ಉತ್ತರ – ಹೆಚ್.ಡಿ. ದೇವೇಗೌಡ, ಮಂಡ್ಯ – ನಿಖಿಲ್, ಹಾಸನ – ಪ್ರಜ್ವಲ್, ಶಿವಮೊಗ್ಗ – ಮಧು ಬಂಗಾರಪ್ಪ, ಉತ್ತರ ಕನ್ನಡ – ಆನಂದ ಅಸ್ನೋಟಿಕರ್, ತುಮಕೂರು – ರಮೇಶ್ ಬಾಬು / ಸುರೇಶ್ ಬಾಬು, ಚಿಕ್ಕಮಗಳೂರು/ಉಡುಪಿ – ಜಯಪ್ರಕಾಶ್ ಹೆಗ್ಡೆ / ಭೋಜೇಗೌಡ ಮತ್ತು ವಿಜಯಪುರ – ರವಿ ಚೌವ್ಹಾಣ್ / ಸುನೀಲ್ ರಾಥೋಡ್
ಕಾಂಗ್ರೆಸ್ ಕ್ಷೇತ್ರ & ಸಂಭಾವ್ಯ ಅಭ್ಯರ್ಥಿ
ಮೈಸೂರು – ವಿಜಯ ಶಂಕರ್, ಚಾಮರಾಜನಗರ – ಧ್ರುವ ನಾರಾಯಣ್, ಬೆಂಗಳೂರು ಗ್ರಾ – ಡಿ.ಕೆ. ಸುರೇಶ್, ಕೋಲಾರ – ಕೆ.ಎಚ್. ಮುನಿಯಪ್ಪ, ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ, ಚಿತ್ರದುರ್ಗ – ಚಂದ್ರಪ್ಪ, ಬಳ್ಳಾರಿ – ಉಗ್ರಪ್ಪ, ರಾಯಚೂರು – ಬಿ.ವಿ. ನಾಯಕ್, ಕಲಬುರಗಿ – ಮಲ್ಲಿಕಾರ್ಜುನ ಖರ್ಗೆ, ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ, ಬೆಳಗಾವಿ – ಅಂಜಲಿ ನಿಂಬಾಳ್ಕರ್ / ಜಾರಕಿಹೊಳಿ ಕುಟುಂಬ, ಬೆಂಗಳೂರು ದಕ್ಷಿಣ – ಪ್ರಿಯಾಕೃಷ್ಣ / ರಾಮಲಿಂಗಾರೆಡ್ಡಿ, ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್
ದಕ್ಷಿಣ ಕನ್ನಡ – ರಮಾನಾಥ್ ರೈ / ವಿನಯ ಕುಮಾರ್ ಸೊರಕೆ, ಧಾರವಾಡ – ವಿನಯ್ ಕುಲಕರ್ಣಿ, ದಾವಣಗೆರೆ – ಎಸ್.ಎಸ್. ಮಲ್ಲಿಕಾರ್ಜುನ, ಹಾವೇರಿ – ಬಸವರಾಜ್ ಶಿವಣ್ಣವರ್ / ಸಲೀಂ ಅಹಮದ್, ಕೊಪ್ಪಳ – ರಾಜಶೇಖರ ಹಿಟ್ನಾಳ್, ಬೀದರ್ – ಈಶ್ವರ ಖಂಡ್ರೆ, ಬಾಗಲಕೋಟೆ – ಬಾಯಕ್ಕ ಮೇಟಿ / ವೀಣಾ ಕಾಶಪ್ಪನವರ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv