ಸರ್ಕಾರಕ್ಕೆ ಶತದಿನದ ಸಂಭ್ರಮ: ಪಾಸಾ? ಫೇಲಾ? – ‘ದೋಸ್ತಿ’ ರಿಪೋರ್ಟ್ ಕಾರ್ಡ್

Public TV
14 Min Read
PASS FAIL HDK 100 1

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಇವತ್ತು ಶತದಿನದ ಸಂಭ್ರಮ.. ಅಧಿಕಾರಕ್ಕಾಗಿ ಮೈತ್ರಿ ಮಾಡ್ಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ನಡ್ವೆ ಹೊಂದಾಣಿಕೆಯ ಕೊರತೆ ಇದ್ರೂ ದೋಸ್ತಿ ಸರ್ಕಾರ ತೆವಳಿಕೊಂಡೇ ಶತದಿನೋತ್ಸವ ಪೂರೈಸಿದೆ. ಹತ್ತಾರು ವಿವಾದಗಳು, ಹತ್ತಾರು ಸವಾಲುಗಳ ನಡ್ವೆ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ರಾಜ್ಯಭಾರ ಮಾಡ್ತಿದ್ದಾರೆ. ರೈತರ ಆತ್ಮಹತ್ಯೆ, ಪ್ರವಾಹ ವಿಕೋಪದ ಸಮಸ್ಯೆಗಳನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ.. ಆದ್ರೆ, ಬಜೆಟ್‍ನಲ್ಲಿ ಪ್ರಾದೇಶಿಕ ಸಮತೋಲನ ಕಾಪಾಡೋದ್ರಲ್ಲಿ ವಿಫಲರಾದ್ರು ಅನ್ನೋ ಟೀಕೆಗೆ ಸಿಎಂ ತುತ್ತಾಗಿದ್ದಾರೆ.. ಬರ ಪರಿಸ್ಥಿತಿಯನ್ನ ನಿಭಾಯಿಸಲು ವಿಫಲರಾದ್ರು ಅನ್ನೋ ಆರೋಪವೂ ಇದೆ. ಹೀಗಾಗಿ ಎಚ್‍ಡಿಕೆ ಸರ್ಕಾರದ ಮಂತ್ರಿಗಳು ಪಾಸಾ? ಫೇಲಾ ಎನ್ನುವುದಕ್ಕೆ ಅವರ ಸಾಧನೆ ಮತ್ತು ವೈಫಲ್ಯಗಳ ಪಟ್ಟಿಯನ್ನು ನೀಡಲಾಗಿದೆ.

* ಪರಮೇಶ್ವರ್, ಉಪ ಮುಖ್ಯಮಂತ್ರಿ
> ಖಾತೆಗಳು: ಗೃಹ, ಬೆಂಗಳೂರು ನಗರಾಭಿವೃದ್ಧಿ,ಯುವ ಜನ ಮತ್ತು ಕ್ರೀಡಾ ಇಲಾಖೆ

> ಡಿಸಿಎಂ ಪರಂ ಮಾಡಿದ್ದೇನು..?
– ಬೆಂಗಳೂರು ಅಭಿವೃದ್ದಿ ಬಗ್ಗೆ ಸಭೆ ಮಾಡಿದ್ದು ಮಾತ್ರ
– ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಪ್ರಯತ್ನ ಮಾಡಿದ್ದು
– ಕೆಲವು ಜಿಲ್ಲೆಗಳಿಗೆ ಮಾತ್ರ ಭೇಟಿ ಕೊಟ್ಟು ಸಭೆ ನಡೆಸಿದ್ದು
– ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸ ಏನು ಮಾಡಿಲ್ಲ

> ಡಿಸಿಎಂ ಮೈನಸ್ ಪಾಯಿಂಟ್..?
– ಗೃಹ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು
– ಕ್ರೀಡಾ ಇಲಾಖೆಯತ್ತ ತಲೆ ಹಾಕದೇ ಇರೋದು
– ಡಿಸಿಎಂಯಾಗಿದ್ರೂ ಬೆರಳಣಿಕೆಯಷ್ಟು ಜಿಲ್ಲೆಗಳಿಗೆ ಭೇಟಿ
– ಸಮನ್ವಯತೆ ಸಾಧಿಸಲು ಹೆಣಗಾಡುತ್ತಿರುವ ಡಿಸಿಎಂ

> ಅಂಕ: 3.5/10

G.Parameshwar

* ಎಚ್.ಡಿ.ರೇವಣ್ಣ, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆ: ಲೋಕೋಪಯೋಗಿ ಇಲಾಖೆ

> ಸಚಿವರು 100 ದಿನ ಮಾಡಿದ್ದೇನು..?
– ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚು ಆಸಕ್ತಿ
– ಕೇಂದ್ರ ಸಚಿವರುಗಳನ್ನು ಹೆಚ್ಚು ಮಾಡಿ ಅನುದಾನ ಕೇಳಿದ್ದು
– ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರವಾಸ ಮಾಡಿದ್ದು
– ಗರ್ಭಿಣಿಯರಿಗೆ ಮಾಸಾಶನಕ್ಕೆ ಹೆಚ್ಚು ಆಸಕ್ತಿ ತೋರಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸೂಪರ್ ಸಿಎಂ, ವಿವಾದಗಳ ಕೇಂದ್ರ ಬಿಂದು ಎಂಬ ಆರೋಪ
– ಸರ್ಕಾರಿ ಬಂಗಲೆ ನವೀಕರಣಕ್ಕೆ ದುಂದು ವೆಚ್ಚ, ಕೊಳಚೆ ನೀರನ್ನು ರಸ್ತೆಗೆ ತಿರುಗಿಸಿದ್ದು
– ಹಾಸನದಲ್ಲಿ ನೆರೆ ಸಂತ್ರಸ್ಥರಿಗೆ ಬಿಸ್ಕೆಟ್ ಎಸೆದು ದುರಂಹಕಾರ ಪ್ರದರ್ಶನ
– ಉತ್ತರ ಕರ್ನಾಟಕದಿಂದ ಹಾಸನಕ್ಕೆ ಕೆ- ಶಿಫ್ ಶಿಫ್ಟ್ ಮಾಡಿದ್ದು
– ಇಲಾಖೆಗಳ ವರ್ಗಾಗಣೆಯಲ್ಲಿ ಹೆಚ್ಚು ಮೂಗು ತೋರಿಸಿದ್ದು

> ಅಂಕ; 4.5/10

H.D.Revanna

ವಾಸ್ತು ಪ್ರಿಯ ಸಚಿವ ರೇವಣ್ಣ ವಿರುದ್ಧದ ಕಾಂಟ್ರವರ್ಸಿ ಇದೇ ಮೊದಲಲ್ಲ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾರೆ. ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂನ ಟಾಪ್ 10 ವಿವಾದ ಇಲ್ಲಿದೆ

1 – ಹಾಸನದ ರಾಮನಾಥಪುರ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿದ್ದು
2 – ಬೆಳಗಾವಿಯಿಂದ ಕೆ ಶಿಪ್ ಕಚೇರಿಗಳು ಹಾಸನಕ್ಕೆ ಸ್ಥಳಾಂತರ
3 – ಸರ್ಕಾರಿ ಬಂಗಲೆಯಲ್ಲೂ ವಾಸ್ತು ಹುಡುಕಿದ್ದು ಸರೀನಾ…?
4 – ಶಾಸಕರಾಗಿ ಪ್ರಮಾಣವಚನಕ್ಕೆ ಸಮಯ ನಿಗದಿ..!
5 – ಮಂತ್ರಿ ಆಗುವ ಮುನ್ನವೇ ಎಂಜಿನಿಯರ್‍ಗಳ ವರ್ಗಾವಣೆ..!
6 – ಮಂತ್ರಿಯಾಗುವ ಮೊದಲೇ ಸಿಎಂ ಸಭೆಯಲ್ಲಿ ಮೂಗು ತೂರಿಸಿದ್ದು..!
7 – ಸಚಿವರಾಗುತ್ತಿದ್ದಂತೆ ಇಂಧನ ಖಾತೆಗಾಗಿ ಪಟ್ಟು..!
8 – ಮೈತ್ರಿ ಸರ್ಕಾರದಲ್ಲಿ ರೇವಣ್ಣ ಸೂಪರ್ ಸಿಎಂ..!
9 – ಮಗನ ಮೇಲೆ ಎಫ್‍ಐಆರ್ ಹಾಕಿದ್ದಕ್ಕೆ ಇನ್ಸ್‍ಪೆಕ್ಟರ್‍ಗೆ ಕಿರುಕುಳ..!
10 – ಹೋದ ಕಡೆಯಲ್ಲೆಲ್ಲಾ ವಾಸ್ತುಗಾಗಿ ಸಚಿವರ ಹುಡುಕಾಟ

* ಡಿ.ಕೆ.ಶಿವಕುಮಾರ್, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆಗಳು: ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ

> ಸಚಿವರು 100 ದಿನ ಮಾಡಿದ್ದೇನು..?
– ಜಲಸಂಪನ್ಮೂಲ ಇಲಾಖೆಗೆ ಸಂಬಂಧಪಟ್ಟಂತೆ ಸಭೆಗಳನ್ನ ನಡೆಸಿದ್ದು
– ಮಹದಾಯಿ ವಿಚಾರದಲ್ಲಿ ಕಾನೂನು ಹೋರಾಟದ ಬಗ್ಗೆ ಗಮನಹರಿಸಿದ್ದು
– ಸರ್ಕಾರದ ನಡುವೆ ಸಮನ್ವಯತೆ ಕಾಪಾಡಲು ನಿತ್ಯ ಪ್ರಯತ್ನ ಮಾಡ್ತಿರೋದು

> ಸಚಿವರ ಮೈನಸ್ ಪಾಯಿಂಟ್..?
– ವೈದ್ಯಕೀಯ ಶಿಕ್ಷಣ ಕೋರ್ಸ್‍ಗಳ ಶುಲ್ಕ ಹೆಚ್ಚಳ ಮಾಡಿದ್ದು
– ಸೀಮಿತವಾಗಿ ಕೆಲ ಜಿಲ್ಲೆಗಳಿಗೆ ಮಾತ್ರ ಭೇಟಿ ಕೊಟ್ಟಿರೋದು
– ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‍ಗಳ ವರ್ಗಾವಣೆ ವಿವಾದ

> ಅಂಕ: 4/10

d.k.shivakumar

* ಆರ್.ವಿ. ದೇಶಪಾಂಡೆ, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆಗಳು: ಕಂದಾಯ, ಕೌಶಲಾಭಿವೃದ್ಧಿ

> ಸಚಿವರು 100 ದಿನ ಮಾಡಿದ್ದೇನು..?
– ವಿಧಾನಸೌಧದಲ್ಲಿ ಸಭೆಗಳನ್ನು ನಡೆಸಿದ್ದು
– ಕೊಡಗು ನೆರೆ ಪ್ರದೇಶಗಳಿಗೆ ಒಂದು ದಿನ ಪ್ರವಾಸ
– ತಹಶೀಲ್ದಾರ್, ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಕಂದಾಯ ಖಾತೆ ಹೊಂದಿದ್ದರೂ ಎಲ್ಲ ಜಿಲ್ಲೆಗಳಲ್ಲಿ ಭೇಟಿ ಇಲ್ಲ
– ಹಿರಿಯರಾಗಿ ಸರ್ಕಾರದ ಸಮನ್ವಯತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ
– ಕೌಶಲ್ಯ ಅಭಿವೃದ್ಧಿ ಖಾತೆ ಬಗ್ಗೆಯಂತು ತಲೆ ಹಾಕಿಯೇ ಇಲ್ಲ

> ಅಂಕ: 2.5/10

R.V.Deashapande

* ಜಿ.ಟಿ.ದೇವೇಗೌಡ, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆ: ಉನ್ನತ ಶಿಕ್ಷಣ

> ಸಚಿವರು 100 ದಿನ ಮಾಡಿದ್ದೇನು..?
– ಉನ್ನತ ಶಿಕ್ಷಣ ಇಲಾಖೆಯ ಬಗ್ಗೆ ಹೆಚ್ಚು ಸಭೆಗಳನ್ನು ನಡೆಸಿದ್ದು
– 4ನೇ ಕ್ಲಾಸ್ ಎಂಬ ಟೀಕೆಗೆ ಉತ್ತರಿಸಲು ಇಲಾಖೆ ಅಧ್ಯಯನ ಮಾಡಿದ್ದು
– ಮುಕ್ತ ವಿವಿ ಕೋಸ್‍ಗಳಿಗೆ ಮಾನ್ಯತೆ ಸಿಕ್ಕಿದ್ದನ್ನು ಬಳಸಿಕೊಂಡಿದ್ದು

ಸಚಿವರ ಮೈನಸ್ ಪಾಯಿಂಟ್..?

– ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಅನ್ನೋದು
– ಸಿದ್ದರಾಮಯ್ಯಗೆ ಡೋಂಟ್‍ಕೇರ್ ಎಂದು ಸಮನ್ವಯತೆಗೆ ಸೆಡ್ಡು
– ಬಹಳ ತಡವಾಗಿ ಇಲಾಖೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು

>ಅಂಕ: 3.5/10

Devegowda

* ಕೆ.ಜೆ. ಜಾರ್ಜ್, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆಗಳು: ಬೃಹತ್ ಕೈಗಾರಿಕೆ, ಐಟಿ-ಬಿಟಿ

> ಸಚಿವರು 100 ದಿನ ಮಾಡಿದ್ದೇನು..?
– ಬೃಹತ್ ಕೈಗಾರಿಕೆಗೆ ಸಂಬಂಧಪಟ್ಟಂತೆ ಸಭೆಗಳನ್ನು ನಡೆಸಿದ್ದು
– ಖಾಸಗಿ ಹೋಟೆಲ್‍ನಲ್ಲಿ ಐಟಿಬಿಟಿ ಮುಖ್ಯಸ್ಥರ ಜತೆ ಸಂವಾದ

> ಸಚಿವರ ಮೈನಸ್ ಪಾಯಿಂಟ್..?
– ಜಿಲ್ಲೆಗಳಿಗೆ ಭೇಟಿ ಕೊಡದೇ ಬೆಂಗಳೂರಲ್ಲೇ ಕುಳಿತಿದ್ದು
– ಸರ್ಕಾರದ ಸಮನ್ವಯತೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸಚಿವ
– ಬೃಹತ್ ಕೈಗಾರಿಕೆಯ ಬಂಡವಾಳ ಹೂಡಿಕೆ ಶೂನ್ಯ

> ಅಂಕ: 01/10

K.J.George
* ಬಂಡೆಪ್ಪ ಕಾಶೆಂಪುರ, ಕ್ಯಾಬಿನೆಟ್ ದರ್ಜೆ
> ಖಾತೆ: ಸಹಕಾರ

> ಸಚಿವರು 100 ದಿನ ಮಾಡಿದ್ದೇನು..?
– ಸಾಲಮನ್ನಾ ಆದೇಶದ ವಿಚಾರದಲ್ಲಿ ಸಿಎಂಗೆ ಸಾಥ್ ನೀಡಿದ್ದು
– ಯಾವುದೇ ವಿವಾದಗಳಿಲ್ಲದೆ ಸರ್ಕಾರದಲ್ಲಿ ಕೆಲಸ ಮಾಡಿದ್ದು
– ಉತ್ತರ ಕರ್ನಾಟಕ ತಾರತಮ್ಯ ವಿಚಾರದಲ್ಲಿ ಸಿಎಂ ಸಮರ್ಥನೆ ಮಾಡಿಕೊಂಡಿದ್ದುಸಚಿವರ ಮೈನಸ್ ಪಾಯಿಂಟ್..?

– ಜಿಲ್ಲೆಗಳ ಪ್ರವಾಸ ವಿಚಾರದಲ್ಲಿ ಹಿಂದೇಟು ಹಾಕಿದ್ದು
– ಹೈಕ ಭಾಗದಲ್ಲೇ ಹೆಚ್ಚು ಪ್ರವಾಸ ಮಾಡಿದ್ದು, ಸಭೆ ಮಾಡಿದ್ದು
– ಸರ್ಕಾರದ ಸಮನ್ವಯತೆ ವಿಚಾರದಲ್ಲಿ ಸೈಲೆಂಟ್ ಆಗಿದ್ದು

>ಅಂಕ: 3.5/10

bandeppa kashempur

ಕೃಷ್ಣಬೈರೇಗೌಡ, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆಗಳು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾನೂನು ಮತ್ತು ಸಂಸದೀಯ ವ್ಯವಹಾರ

> ಸಚಿವರು 100 ದಿನ ಮಾಡಿದ್ದೇನು..?
– ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವುದು
– ಗ್ರಾಮೀಣಾಭಿವೃದ್ದಿ ಇಲಾಖೆಯ ಹಲವು ಸಭೆಗಳನ್ನು ನಡೆಸಿದ್ದು
– ಸಂಸದೀಯ ವ್ಯವಹಾರಗಳ ಸಚಿವರಾಗಿ ಸದನದಲ್ಲಿ ಸರ್ಕಾರವನ್ನ್ನು ಸಮರ್ಥಿಸಿದ್ದು

> ಸಚಿವರ ಮೈನಸ್ ಪಾಯಿಂಟ್..?
> ಸರ್ಕಾರದ ಸಮನ್ವಯತೆ ಬಗ್ಗೆ ತಲೆಕೆಡಿಸಿಕೊಳ್ಳದಿರೋದು
> ಸಭೆ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಆಗಿಲ್ಲ ಎಂಬ ಆರೋಪ
> ಯಾರ ಕೈಗೂ ಸಿಗುವುದಿಲ್ಲ ಎಂಬ ಆರೋಪ ಮುಂದುವರಿಕೆ

> ಅಂಕ: 3.5/10

Krishna Byre gowda

* ಸಿ.ಎಸ್.ಪುಟ್ಟರಾಜು, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆ: ಸಣ್ಣ ನೀರಾವರಿ

> ಸಚಿವರು 100 ದಿನ ಮಾಡಿದ್ದೇನು..?
– ಮಂಡ್ಯ ಜಿಲ್ಲೆಯಲ್ಲಿ ಸಿಎಂ ನಾಟಿ ಕಾರ್ಯ ಮಾಡಿಸಿದ್ದು
– ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿರೋದು
– ಸರ್ಕಾರದ ಸಮನ್ವಯತೆ ವಿಚಾರದಲ್ಲಿ ಸಿಎಂ ಜತೆ ನಿಂತಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸಿಎಂ ಹಿಂದೆಯೇ ಹೆಚ್ಚು ತಿರುಗಿದ್ರು ಎಂಬ ಆರೋಪ
– ವಿಧಾನಸೌಧದಲ್ಲಿ ಸಭೆ ಮಾತ್ರ ಅಭಿವೃದ್ಧಿ ಆಗಿಲ್ಲ
– ಸಣ್ಣ ನೀರಾವರಿ ಇಲಾಖೆ ಪ್ರಗತಿಯಲ್ಲಿ ಹಿಂದೆ

> ಅಂಕ: 3.5/10

C.S.Puttaraju
* ಯು.ಟಿ.ಖಾದರ್, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆಗಳು: ನಗರಾಭಿವೃದ್ಧಿ, ವಸತಿ

> ಸಚಿವರು 100 ದಿನ ಮಾಡಿದ್ದೇನು..?
– ವಸತಿ, ನಗರಾಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ
– ಕೆಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕನ
– ಸರ್ಕಾರವನ್ನ ತಕ್ಕಮಟ್ಟಿಗೆ ಸಮರ್ಥಿಸಿಕೊಂಡ ಕಾಂಗ್ರೆಸ್ ಸಚಿವ

> ಸಚಿವರ ಮೈನಸ್ ಪಾಯಿಂಟ್..?
– ನೆರೆ ಪ್ರದೇಶಗಳಲ್ಲಿ ಹೆಚ್ಚು ಪ್ರವಾಸ ಮಾಡಲಿಲ್ಲ
– ನಗರಾಭಿವೃದ್ಧಿ ಪ್ರಗತಿಯಲ್ಲಿ ಹಿನ್ನಡೆ, ಸಭೆ ಮಾತ್ರ
– ಇಲಾಖೆ ವರ್ಗಾವಣೆಯಿಂದ ಸಿಎಂ ಜತೆಯೇ ಗುದ್ದಾಟ

*ಅಂಕ: 3.5/10

U.T.Khadar

* ಶಿವಶಂಕರ ರೆಡ್ಡಿ, ಸಂಪುಟ ದರ್ಜೆ ಸಚಿವ
> ಖಾತೆ: ಕೃಷಿ

ಸಚಿವರು 100 ದಿನ ಮಾಡಿದ್ದೇನು..?

– ವಿಧಾನಸೌಧದಲ್ಲಿ ಇಲಾಖೆಯ ಸಭೆಗಳನ್ನ ನಡೆಸಿದ್ದು
– ಅನುದಾನ ವಿಚಾರದಲ್ಲಿ ಕೇಂದ್ರದ ಜತೆ ಮಾತುಕತೆ
– ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ಪೂರೈಕೆ

ಸಚಿವರ ಮೈನಸ್ ಪಾಯಿಂಟ್..?

-ಕೆಲವು ಜಿಲ್ಲೆಗಳಿಗೆ ಮಾತ್ರ ಪ್ರವಾಸ ಮಾಡಿದ್ದು
– ಯಾರ ಕೈಗೂ ಸಿಗುವುದಿಲ್ಲ ಎಂಬ ಆರೋಪ
– ಕೃಷಿ ಸಚಿವರಾದ್ರೂ ಸಿಎಂ ನಾಟಿ ಕಾರ್ಯದಲ್ಲಿ ಇರಲಿಲ್ಲ

> ಅಂಕ: 3/10

SHIVASHANKAR REDDY 1

* ಪ್ರಿಯಾಂಕ್ ಖರ್ಗೆ, ಕ್ಯಾಬಿನೆಟ್ ದರ್ಜೆ
> ಖಾತೆ: ಸಮಾಜ ಕಲ್ಯಾಣ

> ಸಚಿವರು 100 ದಿನ ಮಾಡಿದ್ದೇನು..?
– ವಿಧಾನಸೌಧದಲ್ಲಿ ಇಲಾಖೆಯ ಸಭೆ ನಡೆಸಿದ್ದು
– ಇಲಾಖೆಯನ್ನು ಅಧ್ಯಯನ ಮಾಡಲು ಹೆಚ್ಚು ಸಮಯ ಮೀಸಲು
– ಸರ್ಕಾರದ ಸಮನ್ವಯತೆ ವಿಚಾರದಲ್ಲಿ ಸಿಎಂ ಪರ ನಿಂತಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಹೈಕ ಭಾಗಕ್ಕೆ ಮಾತ್ರ ಸಿಮೀತರಾದ ಸಚಿವರು
– ಸಭೆ ನಡೆಸಿದ್ದು ಬಿಟ್ಟರೇ ಹೇಳಿಕೊಳ್ಳುವ ಕೆಲಸ ಆಗಿಲ್ಲ
– ಗ್ರೌಂಡ್‍ನಲ್ಲಿ ಕೆಲಸ ಮಾಡಲ್ಲ, ಯಾರ ಕೈಗೂ ಸಿಗಲ್ಲ ಎಂಬ ಆರೋಪ

> ಅಂಕ: 3/10

Priyank Kharge

* ಜಮೀರ್ ಅಹ್ಮದ್, ಸಂಪುಟ ದರ್ಜೆ ಸಚಿವ
> ಖಾತೆಗಳು: ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ

> ಸಚಿವರು 100 ದಿನ ಮಾಡಿದ್ದೇನು..?
– 7 ಕೆಜಿ ಅಕ್ಕಿ ವಿತರಣೆಗೆ ಪಟ್ಟು ಹಿಡಿದು ಕೊಡಿಸಿದ್ದು
– ಸರ್ಕಾರದ ಸಮನ್ವಯತೆಗಾಗಿ ಕಷ್ಟಪಟ್ಟು ಸರ್ಕಸ್ ಮಾಡಿದ್ದು
– ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನಕ್ಕಾಗಿ ಹೋರಾಟ, ಯಶಸ್ವಿ

> ಸಚಿವರ ಮೈನಸ್ ಪಾಯಿಂಟ್..?
– ಸಿದ್ದು ಕಾರೇ ಬೇಕೆಂದು ವಿವಾದ ಮೈಮೇಲೆ ಎಳೆದುಕೊಂಡಿದ್ದು
– ಆಗಾಗ್ಗೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿ ಸಿಎಂಗೆ ಟಾಂಗ್
– ತನ್ವೀರ್ ಸೇಠ್, ರೋಷನ್ ಬೇಗ್ ಜತೆ ಕಾದಾಟಕ್ಕೆ ಇಳಿದಿದ್ದು

> ಅಂಕ: 3/10

Zameer Ahmed 1

* ಶಿವಾನಂದ ಪಾಟೀಲ್, ಸಂಪುಟ ದರ್ಜೆ ಸಚಿವ
> ಖಾತೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

> ಸಚಿವರು 100 ದಿನ ಮಾಡಿದ್ದೇನು..?
– ಇಲಾಖೆಯ ಬಗ್ಗೆ ಅಧ್ಯಯನ ನಡೆಸಲು ಹೆಚ್ಚು ಸಮಯ
– ಕೆಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಆಸ್ಪತ್ರೆಗಳ ಪರಿಶೀಲನೆ
– ಸರ್ಕಾರದ ನಡುವೆ ಸಮನ್ವಯತೆ ಕಾಪಾಡಲು ಮುಂದಾಗಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಆರೋಗ್ಯ ಕರ್ನಾಟಕದ ಗೊಂದಲ ನಿವಾರಣೆಗೆ ತಡ ಮಾಡಿದ್ದು
– ಮಾಜಿ ಸಚಿವ ಎಂ.ಬಿ.ಪಾಟೀಲ್ ಜತೆಗಿನ ಗುದ್ದಾಟ ಮುಂದುವರಿಸಿದ್ದು
– ಮುಂಬೈ ಕರ್ನಾಟಕದತ್ತ ಹೆಚ್ಚು ಗಮನ ಕೊಡ್ತಿದ್ದಾರೆ ಎಂಬ ಆರೋಪ

> ಅಂಕ: 3/10

Shivananda patil

* ವೆಂಕಟರಮಣಪ್ಪ, ಸಂಪುಟ ದರ್ಜೆ ಸಚಿವ
> ಖಾತೆ: ಕಾರ್ಮಿಕ ಕಲ್ಯಾಣ

> ಸಚಿವರು 100 ದಿನ ಮಾಡಿದ್ದೇನು..?
– ಇಎಸ್‍ಐ ಆಸ್ಪತ್ರೆಗಳಿಗೆ ವಿಸಿಟ್ ಮಾಡಿ ಪರಿಶೀಲನೆ
– ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆ ತಯಾರಿಸಿದ್ದು
– ಕಾರ್ಮಿಕ ಇಲಾಖೆಯ ಸಭೆಗಳನ್ನ ನಡೆಸಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡದಿರುವುದು
– ಸರ್ಕಾರದ ಸಮನ್ವಯತೆ ಬಗ್ಗೆ ಮಾತನಾಡದಿರೋದು
– ಬರೀ ಇಲಾಖೆಯ ಸಭೆಗಳನ್ನ ವಿಧಾನಸೌಧದಲ್ಲಿ ನಡೆಸಿದ್ದು
> ಅಂಕ: 2/10

Venkata ramanappa

* ರಾಜಶೇಖರ್ ಪಾಟೀಲ್, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆಗಳು: ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ

> ಸಚಿವರು 100 ದಿನ ಮಾಡಿದ್ದೇನು..?
– ವಿಧಾನಸೌಧದಲ್ಲಿ ಸಭೆಗಳನ್ನು ಮಾತ್ರ ಮಾಡಿದ್ದಾರೆ
– ದೇವಾಲಯಗಳ ಆದಾಯಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರ ಕ್ರಮ
– ವಿವಾದಗಳಿಲ್ಲ, ಸರ್ಕಾರದ ಸಮನ್ವಯತೆ ಪರ ನಿಂತಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸಚಿವರಾಗಿದ್ದರೂ ಅಷ್ಟೇನೂ ಕ್ರಿಯಾಶೀಲವಾಗಿಲ್ಲ
– ಕೇವಲ ಕ್ಷೇತ್ರದ ಸುತ್ತಮುತ್ತ ಓಡಾಡಿದ ಸಚಿವ
– ಜಿಲ್ಲೆಗಳ ಪ್ರವಾಸದಲ್ಲಿ ಫೆಲ್ಯೂರ್ ಮಿನಿಸ್ಟರ್

* ಅಂಕ: 02/10

Rajashekhar Patil

* ಪುಟ್ಟರಂಗಶೆಟ್ಟಿ, ಕ್ಯಾಬಿನೆಟ್ ದರ್ಜೆ ಸಚಿವ
> ಖಾತೆ: ಹಿಂದುಳಿದ ವರ್ಗಗಳ ಕಲ್ಯಾಣ

> ಸಚಿವರು 100 ದಿನ ಮಾಡಿದ್ದೇನು..?
– ವಿಧಾನಸೌಧದಲ್ಲಿ ಸಭೆಗಳನ್ನ ನಡೆಸಿದ್ದು
– ವಿವಾದಗಳಿಲ್ಲದೆ ಸೈಲೆಂಟ್ ಆಗಿ ಇದ್ದದ್ದು

> ಸಚಿವರ ಮೈನಸ್ ಪಾಯಿಂಟ್..?
– ಬೇರೆ ಜಿಲ್ಲೆಗಳ ಪ್ರವಾಸ ಮಾಡದಿರುವುದು
– ಸಿದ್ದರಾಮಯ್ಯ ನನಗೆ ಈಗಲೂ ಸಿಎಂ ಎಂದಿದ್ದು
– ಇಲಾಖೆಯ ಬಗ್ಗೆ ಸ್ಪಷ್ಟ ಅಧ್ಯಯನ ಮಾಡದಿರುವುದು

* ಅಂಕ: 02/10

puttarangashetty

* ಆರ್.ಶಂಕರ್, ಕ್ಯಾಬಿನೆಟ್ ದರ್ಜೆ
> ಖಾತೆ: ಅರಣ್ಯ ಮತ್ತು ಪರಿಸರ

> ಸಚಿವರು 100 ದಿನ ಮಾಡಿದ್ದೇನು..?
– ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದು
– ಅರಣ್ಯ ಪ್ರದೇಶಗಳಿಗೆ ಪ್ರವಾಸ ಮಾಡಿ ಪರಿಶೀಲನೆ ಮಾಡಿದ್ದು
– ಸರ್ಕಾರದ ಸಮನ್ವಯತೆಗಾಗಿ ಸರ್ಕಸ್ ಮಾಡಿದ್ದು

> ಸಚಿವರ ಮೈನಸ್ ಪಾಯಿಂಟ್..?
– ವರ್ಗಾವಣೆ ವಿಚಾರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದು
– ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಬಹಿರಂಗ ಅಸಮಾಧಾನ ಹಾಕಿದ್ದು
– ರಾತ್ರೋರಾತ್ರಿ ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು

* ಅಂಕ: 03/10

R.Shankar

* ಜಯಮಾಲ, ಕ್ಯಾಬಿನೆಟ್ ದರ್ಜೆ

* ಖಾತೆಗಳು: ಮಹಿಳಾ & ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ

> ಸಚಿವರು 100 ದಿನ ಮಾಡಿದ್ದೇನು..?
– ಎರಡು ಇಲಾಖೆಗಳ ಸಮಗ್ರ ಅಧ್ಯಯನ ಮಾಡಿದ್ದು
– ಸದ್ಯಕ್ಕೆ ವಿವಾದಗಳಿಲ್ಲದೆ ಇಲಾಖೆಗಳನ್ನು ಎಚ್ಚರಿಕೆಯಿಂದ ನಡೆಸ್ತಿರುವುದು
– ಧಮನಿತ ಮಹಿಳೆಯರಿಗಾಗಿ ಯೋಜನೆ ತಯಾರಿಸಲು ಮುಂದಾಗಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸ್ವಪಕ್ಷೀಯ ಹಿರಿಯರೇ ತಿರುಗಿಬಿದ್ದಿದ್ದು
– ಸರ್ಕಾರವನ್ನ ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗದಿರುವುದು
– ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡದಿರುವುದು

* ಅಂಕ: 03/10

Jayamala

* ರಮೇಶ್ ಜಾರಕಿಹೊಳಿ, ಕ್ಯಾಬಿನೆಟ್ ದರ್ಜೆ
* ಖಾತೆಗಳು: ಪೌರಾಡಳಿತ, ಬಂದರು-ಒಳನಾಡು ಸಾರಿಗೆ

> ಸಚಿವರು 100 ದಿನ ಮಾಡಿದ್ದೇನು..?
– ಸರ್ಕಾರವನ್ನು ಪ್ರತಿ ಬಾರಿಯೂ ಸಮರ್ಥಿಸಿಕೊಂಡಿದ್ದು
– ವಿಧಾನಸೌಧದಲ್ಲಿ ಇಲಾಖೆಗಳ ಸಭೆಯನ್ನು ನಡೆಸಿದ್ದು
– ರಾಜಕೀಯ ಗೊಂದಲಕ್ಕೆ ತೇಪೆ ಹಚ್ಚಲು ಮುಂದಾಗಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸಹೋದರರ ನಡುವಿನ ಕಾದಾಟ ಬಹಿರಂಗವಾಗಿದ್ದು
– ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡದಿರುವುದು
– ಶಾಸಕರ ಜತೆ ಸಚಿವರು ದೇಶದ ಪ್ರವಾಸ ಮಾಡಿದ್ದು

* ಅಂಕ: 02/10

 

* ಸಾ.ರಾ.ಮಹೇಶ್, ಕ್ಯಾಬಿನೆಟ್ ದರ್ಜೆ
ಖಾತೆಗಳು: ಪ್ರವಾಸೋದ್ಯಮ, ರೇಷ್ಮೆ

> ಸಚಿವರು 100 ದಿನ ಮಾಡಿದ್ದೇನು..?
– ಕೊಡಗು ನೆರೆ ನಿರ್ವಹಣೆಯನ್ನ ಸಮರ್ಪಕವಾಗಿ ಮಾಡಿದ್ದು
– ಸಿಎಂ ಜತೆ ಸರ್ಕಾರದ ಸಮನ್ವಯತೆಗಾಗಿ ನಿಂತಿದ್ದು
– ವಿಧಾನಸೌಧದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಯತ್ನ

> ಸಚಿವರ ಮೈನಸ್ ಪಾಯಿಂಟ್..?
– ರೇಷ್ಮೆ ಸೀರೆ ಕೊಡಲು ವಿಫಲ, ಗೊಂದಲ ಸೃಷ್ಟಿ
– ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡದಿರುವುದು
– ಮೈಸೂರು ವಿಚಾರದಲ್ಲಿ ಸ್ವಪಕ್ಷೀಯರ ಜತೆ ಭಿನ್ನಾಭಿಪ್ರಾಯ

* ಅಂಕ: 04/10

Sa.Ra. Mahesh

* ಎನ್.ಮಹೇಶ್, ಕ್ಯಾಬಿನೆಟ್ ದರ್ಜೆ
> ಖಾತೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

> ಸಚಿವರು 100 ದಿನ ಮಾಡಿದ್ದೇನು..?
– ಇಲಾಖೆಯ ಬಗ್ಗೆ ಅಧ್ಯಯನಕ್ಕೆ ಹೆಚ್ಚು ಸಮಯ
– ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ಪರಿಶೀಲನೆ
– ವಿಧಾನಸೌಧದಲ್ಲಿ ಹೆಚ್ಚು ಸಭೆಗಳನ್ನು ನಡೆಸಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸರ್ಕಾರದ ಸಮನ್ವಯತೆ ಬಗ್ಗೆ ತಲೆಕೆಡಿಸಿಕೊಳ್ಳದಿರೋದು
– ಹಾಜರಾತಿ ಇರದ ಸರ್ಕಾರಿ ಶಾಲೆಗಳನ್ನ ಮುಚ್ಚುವ ಕುರಿತು ವಿವಾದ
– ಪರೀಕ್ಷಾ ಪದ್ಧತಿ ಬದಲಾಯಿಸುವುದಾಗಿ ವಿವಾದ ಎಳೆದುಕೊಂಡಿದ್ರು

* ಅಂಕ: 03/10

N.Mahesh

* ಡಿ.ಸಿ ತಮ್ಮಣ್ಣ, ಕ್ಯಾಬಿನೆಟ್ ದರ್ಜೆ
> ಖಾತೆ: ಸಾರಿಗೆ

> ಸಚಿವರು 100 ದಿನ ಮಾಡಿದ್ದೇನು..?
– ಗಾರ್ಮೆಂಟ್ ಮಹಿಳೆ ನೌಕರರಿಗೆ ಉಚಿತ ಬಸ್ ಪಾಸ್ ಕೊಡಲು ಪ್ರಯತ್ನ
– ವಿಧಾನಸೌಧದಲ್ಲಿ ಹೆಚ್ಚು ಸಭೆಗಳನ್ನು ನಡೆಸಿದ್ದು
– ಬಸ್ ದರ ಏರಿಕೆ ವಿಚಾರದಲ್ಲಿ ತಟಸ್ಥರಾಗಿದ್ದು

> ಸಚಿವರ ಮೈನಸ್ ಪಾಯಿಂಟ್..?
– ಸರ್ಕಾರದ ಸಮನ್ವಯತೆ ಬಗ್ಗೆ ಸೈಲೆಂಟ್ ಆಗಿದ್ದು
– ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಲು ಗೊಂದಲ
– ಜನರ ಕೈಗೆ ಸಚಿವರು ಸಿಗಲ್ಲ ಅನ್ನೋ ಆರೋಪ

* ಅಂಕ: 03/10

D.C.Thammanna

* ವೆಂಕಟರಾವ್ ನಾಡಗೌಡ, ಕ್ಯಾಬಿನೆಟ್ ದರ್ಜೆ
> ಖಾತೆ: ಪಶು ಸಂಗೋಪನೆ, ಮೀನುಗಾರಿಕೆ

> ಸಚಿವರು 100 ದಿನ ಮಾಡಿದ್ದೇನು..?
– ಸಚಿವರು ವಿಧಾನಸೌಧದಲ್ಲಿ ಸಭೆಗಳನ್ನು ನಡೆಸಿದ್ದು
– ಸರ್ಕಾರದ ಸಮನ್ವಯತೆಯ ಬಗ್ಗೆ ಹೆಚ್ಚು ಸಮರ್ಥನೆ
– ಮೀನುಗಾರಿಕೆಗೆ ಸೀಮೆಎಣ್ಣೆ ವಿತರಣೆ ಅಡೆತಡೆ ನಿವಾರಣೆ

> ಸಚಿವರ ಮೈನಸ್ ಪಾಯಿಂಟ್..?
– ಹಲವು ಜಿಲ್ಲೆಗಳ ಪ್ರವಾಸ ಮಾಡದಿರುವುದು
– ಇಲಾಖೆಗಳ ಪ್ರಗತಿ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ
– ವಿವಾದಗಳು ಇಲ್ಲ, ಯೋಜನೆಗಳ ಜಾರಿಯೂ ಇಲ್ಲ

* ಅಂಕ: 02/10

Venkata rao nadagouda

* ಎಂ.ಸಿ.ಮನಗೂಳಿ, ಕ್ಯಾಬಿನೆಟ್ ದರ್ಜೆ
> ಖಾತೆ: ತೋಟಗಾರಿಕೆ

> ಸಚಿವರು 100 ದಿನ ಮಾಡಿದ್ದೇನು..?
– ಇಲಾಖೆಯಲ್ಲಿ ಕಡಿಮೆ ಸಭೆಗಳನ್ನು ನಡೆಸಿರುವುದು
– ಮಾವು ಬೆಳೆಗೆ ಬೆಂಬಲ ಬೆಲೆಗೆ ಕ್ರಮ ಕೈಗೊಂಡಿದ್ದು
– ವಿವಾದಗಳು ಇಲ್ಲದೆ ಸೈಲೆಂಟ್ ಆಗಿ ಇದ್ದದ್ದು

> ಸಚಿವರ ಮೈನಸ್ ಪಾಯಿಂಟ್..?
– ಬಹುತೇಕ ಜಿಲ್ಲೆಗಳಿಗೆ ಪ್ರವಾಸ ಮಾಡದಿರುವುದು
– ಸರ್ಕಾರದ ಸಮನ್ವಯತೆ ಬಗ್ಗೆ ಕೇರ್ ಮಾಡದಿರುವುದು
– ವಿಧಾನಸೌಧದಲ್ಲೂ ಸಚಿವರು ಸಿಗಲ್ಲ, ಫೀಲ್ಡ್‍ನಲ್ಲೂ ಸಿಗಲ್ಲ

* ಅಂಕ: 1.5/10

M.C.Managuli

* ಗುಬ್ಬಿ ಶ್ರೀನಿವಾಸ್, ಕ್ಯಾಬಿನೆಟ್ ದರ್ಜೆ
> ಖಾತೆ: ಸಣ್ಣ ಕೈಗಾರಿಕೆ

> ಸಚಿವರು 100 ದಿನ ಮಾಡಿದ್ದೇನು..?
– ವಿಧಾನಸೌಧದಲ್ಲಿ ಸಭೆಗಳನ್ನು ನಡೆಸಿದ್ದು
– ವಿಧಾನಸೌಧದಲ್ಲಿ ಸಾರ್ವಜನಿಕರ ಕೈಗೆ ಸಿಗುವುದು
– ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿರುವುದು

> ಸಚಿವರ ಮೈನಸ್ ಪಾಯಿಂಟ್..?
– ಇಲಾಖೆಯ ಪ್ರಗತಿಯಲ್ಲಿ ಹಿನ್ನಡೆ
– ಸರ್ಕಾರ ಸಮನ್ವಯತೆ ಬಗ್ಗೆ ಕೇರ್ ಮಾಡಲಿಲ್ಲ
– ಸಣ್ಣ ಕೈಗಾರಿಕಾ ಯೋಜನೆಗಳ ಬಗ್ಗೆಯೂ ಗಮನವಿಲ್ಲ

* ಅಂಕ: 2/10

Gubbi Shrinivas

* ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
> ಖಾತೆಗಳು: ಹಣಕಾಸು, ಗುಪ್ತದಳ, ಇಂಧನ, ವಾರ್ತಾ & ಸಾರ್ವಜನಿಕ ಸಂಪರ್ಕ

> ಸಿಎಂ ಹೆಚ್‍ಡಿಕೆ ಮಾಡಿದ್ದೇನು..?
– ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ
– ಖಾಸಗಿ ಲೇವಾದೇವಿ ಕಡಿವಾಣ ಸುಗ್ರಿವಾಜ್ಞೆ
– ಬಡವರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ದಿನ ಸಾಲ
– ರೈತರಿಗೆ ಸ್ಥೈರ್ಯ ತುಂಬಲು ನಾಟಿ ಕಾರ್ಯ
– ಕೊಡಗು ಪ್ರಕೃತಿ ವಿಕೋಪ ಕಾರ್ಯ ನಿರ್ವಹಣೆ

> ಸಿಎಂ ಮೈನಸ್ ಪಾಯಿಂಟ್..?
– ಹೆಚ್ಚು ಹಳೇ ಮೈಸೂರು ಭಾಗದಲ್ಲಿ ಪ್ರವಾಸ
– ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡದಿರುವುದು
– ಖಾತೆ ಹಂಚಿಕೆ, ಸರ್ಕಾರದ ಸಮನ್ವಯತೆಯಲ್ಲಿ ಹೆಣಗಾಟ
– ಪ್ರತಿ ವಿಚಾರಕ್ಕೂ ಮಾಧ್ಯಮಗಳ ಮೇಲೆ ಕಿಡಿಕಾರಿದ್ದು
– ರಾಜ್ಯ ಪ್ರವಾಸಕ್ಕಿಂತ ದೇವಸ್ಥಾನಗಳಿಗೆ ಹೆಚ್ಚು ಸುತ್ತಿದ್ದು

> ಅಂಕ: 5.5/10

H.D.Kumaraswamy

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *