– ಐಎಂಎಫ್ ನೀಡಿದ ಸಾಲದಲ್ಲಿ ಮಸೂದ್ ಅಜರ್‌ಗೆ ಪಾಕ್ ಪರಿಹಾರ ನೀಡಿದೆ
– ಕಾಂಗ್ರೆಸ್ ಅವಧಿಯಲ್ಲಿ ಯಾಕೆ ಉಗ್ರರ ವಿರುದ್ಧ ಕ್ರಮ ಆಗಿಲ್ಲ?
ಬೆಂಗಳೂರು: ಕಾಂಗ್ರೆಸ್‌ನವರು ಭಾರತದಲ್ಲಿ ಉಗ್ರರನ್ನು ಸಾಕ್ತಿದ್ದಾರೆ ಎಂದು ಪರಿಷತ್ ಸದಸ್ಯ ರವಿಕುಮಾರ್(Ravikumar) ಕಿಡಿಕಾರಿದರು.
ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಎಂಎಫ್‌ನಿಂದ ಪಡೆದ ಸಾಲದ ಹಣದಲ್ಲಿ ಪಾಕಿಸ್ತಾನದ(Pakistan) ಸರ್ಕಾರ ಮಸೂದ್ ಅಜರ್‌ಗೆ ಪರಿಹಾರ ಕೊಟ್ಟಿದೆ. ಆ ಮೂಲಕ ಪಾಕಿಸ್ತಾನ ಉಗ್ರರನ್ನ ಸಾಕ್ತಿದೆ. ಇಲ್ಲಿ ಸುಹಾಸ್ ಶೆಟ್ಟಿ(Suhas Shetty) ಹತ್ಯೆ ಮಾಡಿದ ಆದಿಲ್‌ಗೆ ಸುಪಾರಿ ಹಣ ಎಲ್ಲಿಂದ ಬಂತು? ಇದೇ ಕಾಂಗ್ರೆಸ್ ಸರ್ಕಾರ ಕೊಟ್ಟ ಪರಿಹಾರದಿಂದ ಬಂದಿದೆ. ಅಲ್ಲಿಗೆ ಕಾಂಗ್ರೆಸ್‌ನವ್ರೂ ಭಯೋತ್ಪಾದಕರನ್ನು ಸಾಕ್ತಿದ್ದಾರೆ ಅಂತಾ ಆಯ್ತು ಅಲ್ವಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಂಗಿ ಪ್ರೀತಿಗೆ ಅಣ್ಣನೇ ಸಪೋರ್ಟ್ – ಬೈದು ಬುದ್ದಿ ಹೇಳಿದ ತಂದೆಯನ್ನೇ ಕೊಂದ ಮಗ!
ಕಾಂಗ್ರೆಸ್ ನಾಯಕರು(Congress Leaders) ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕೆ ಮಾಡ್ತಿದ್ದಾರೆ. ಪಹಲ್ಗಾಮ್ ಕೃತ್ಯ ನಡೆಯುವಾಗ ಮೋದಿಯವ್ರು ಎಲ್ಲಿದ್ರು ಅಂತ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಆ ಸಂದರ್ಭದಲ್ಲಿ ಮೋದಿ ಎಲ್ಲಿದ್ರು, ಏನು ಮಾಡಿದ್ರು ಅಂತ ದೇಶದ ಎಲ್ಲ ಪ್ರಜೆಗಳಿಗೆ ಗೊತ್ತಿದೆ. ಎಲ್ಲರಿಗೂ ಗೊತ್ತಿರುವ ವಿಷಯ ಪ್ರಿಯಾಂಕ್ ಖರ್ಗೆಗೆ(Priyank Kharge) ಯಾಕೆ ಗೊತ್ತಿಲ್ಲ. ಇದೇನು ಪ್ರಿಯಾಂಕ್ ಖರ್ಗೆಯ ಗೋಸಂಬಿತನನಾ ಅಥವಾ ಡಬಲ್ ಸ್ಟಾಂಡರ್ಡಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವೈಟ್ ಫೀಲ್ಡ್ ಟೆಕ್ಕಿ ಕೇಸ್‌ಗೆ ಟ್ವಿಸ್ಟ್ – ಭಾರತ ಪರ ಕೂಗಿದ್ದಾಗ ಯಾರು ಹೊರ ಬರದಿದ್ದಕ್ಕೆ ಬೇಸತ್ತು ಪಾಕ್ ಪರ ಘೋಷಣೆ
ಕಾಂಗ್ರೆಸ್ ಅವಧಿಯಲ್ಲಿ 2004ರಿಂದ 2014ರವರೆಗೆ ಹೆಚ್ಚಿನ ಉಗ್ರ ದಾಳಿಗಳು ದೇಶದಲ್ಲಾಯ್ತು. 900ಕ್ಕೂ ಹೆಚ್ಚು ನಾಗರಿಕರು ಸತ್ರು, ಆಗ ಎಲ್ಲಿತ್ತು ಕಾಂಗ್ರೆಸ್? ಯಾಕೆ ಅಧಿಕಾರದಲ್ಲಿದ್ರೂ ಉಗ್ರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಪ್ರತೀಕಾರಕ್ಕೆ ಸೇನೆ ಸಿದ್ಧವಾಗಿತ್ತು. ಆದ್ರೆ ಮನಮೋಹನ್ ಸಿಂಗ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಏ.22ರಿಂದ ಮೇ 12 ರವರೆಗೆ ಮೋದಿ ಎಲ್ಲಿಗೆ ಹೋಗಿದ್ರು – ಬಹಿರಂಗ ಪಡಿಸುವಂತೆ ಪ್ರಿಯಾಂಕ್ ಆಗ್ರಹ
ಬಿಜೆಪಿ ಅವಧಿಯಲ್ಲಿ ಮೂರು ಪ್ರಮುಖ ಉಗ್ರ ದಾಳಿ ಆಯ್ತು. ಅದಕ್ಕೆ ಭಾರತ ತಕ್ಕ ಕ್ರಮ ಹಾಗೂ ಪ್ರತೀಕಾರ ತೀರಿಸಿಕೊಂಡಿದೆ. ಕಾಂಗ್ರೆಸ್ ನಾಯಕರು ಮನಸೋ ಇಚ್ಛೆ ಮಾತಾಡೋದನ್ನ ನಿಲ್ಲಿಸಲಿ. ದೇಶದ ಒಳಿತಿಗೆ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಅನಗತ್ಯ ಹೇಳಿಕೆ ಕೊಡಬಾರದು ಎಂದು ಹೇಳಿದರು.