ಚಿಕ್ಕಮಗಳೂರು: ಕಾಂಗ್ರೆಸ್ (Congress) ಅನ್ನು ನಾವು ದುರ್ಬಲ ಎಂದು ಪರಿಗಣಿಸಲ್ಲ. ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲದೆ ಇರಬಹುದು. ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ಸಿಗೆ ಹೋಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ (CT Ravi) ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧ ಮತ್ತು ಚುನಾವಣೆಯನ್ನು ಹಗುರವಾಗಿ ಪರಿಗಣಿಸಲ್ಲ. ಗಂಭೀರವಾಗಿ ತೆಗೆದುಕೊಂಡು ಗಂಭೀರವಾಗಿ ಎದುರಿಸಬೇಕು. ಮೇಲ್ನೋಟಕ್ಕೆ ಎಲ್ಲಾ ಕಡೆ ಮೋದಿ ಪರ ಅಲೆ ಇರುವುದು ಅರ್ಥವಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್‌ಗೆ ವೋಟ್ ಹಾಕಿದವರು ದೇಶಕ್ಕಾಗಿ ಮೋದಿಗೆ ವೋಟ್ ಹಾಕುತ್ತೇವೆ ಎನ್ನುತ್ತಿದ್ದಾರೆ ಎಂದರು. ಇದನ್ನೂ ಓದಿ: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಹೊರಗೆ ಬರ್ತೀನಿ, ಸಾಮಾನ್ಯನಂತೆ ಕೆಲಸ ಮಾಡ್ತೀನಿ: ಯದುವೀರ್
Advertisement
Advertisement
ನಾವೇನೂ ದೇಶಭಕ್ತರಲ್ವಾ? ಮೋದಿ ಪ್ರಧಾನಿಯಾಗೋದು ನಮಗೂ ಇಷ್ಟ. ಅಭ್ಯರ್ಥಿ ಬಗ್ಗೆ ಚರ್ಚೆಯಾಗುತ್ತಿರೋದು ಕಡಿಮೆ. ಎಲ್ಲಾ ಕಡೆ ಮೋದಿ ಹವಾ ಇದೆ. ಕಾಂಗ್ರೆಸ್ಸಿನಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್ಸಿಗೆ ಒಂದಿಷ್ಟು ಮತ ಇದೆ ಎನ್ನುವುದನ್ನು ಮರೆಯುವ ಹಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ರಾಜೀನಾಮೆ – ಬಿಜೆಪಿಯಿಂದ ಕಣಕ್ಕೆ?
Advertisement
Advertisement
ಕೆಎಸ್ ಈಶ್ವರಪ್ಪ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ-ಈಶ್ವರಪ್ಪನವರ ಸಂಬಂಧ 4 ದಶಕ ಮೀರಿದ್ದು. ಒಂದು ಕಾಲದಲ್ಲಿ ಬ್ಯುಸಿನೆಸ್ಸನ್ನೂ ಜಂಟಿಯಾಗಿಯೇ ಮಾಡುತ್ತಿದ್ದರು ಅನ್ನೋದನ್ನ ಕೇಳಿದ್ದೀವಿ. ಅವರಿಗಿಂತ ಹತ್ತಿರವಾದವರೂ ಯಾರು ಇಲ್ಲ. ಏನೇ ಸಮಸ್ಯೆ ಇದ್ದರೂ ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಣದಿಂದ ಹಿಂದೆ ಸರಿಯಬೇಡಿ – ಈಶ್ವರಪ್ಪಗೆ ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನ ಗೋಪಾಲ್ ಜೀ ಬೆಂಬಲ