– ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬದುಕಲು ಸಾಧ್ಯವೇ ಇಲ್ಲ
– ಕಾಂಗ್ರೆಸ್ ಕುಟುಂಬ ಮೊದಲು, ದೇಶ ಕೊನೆಯಲ್ಲಿ ಎಂಬ ಧ್ಯೇಯ ಹೊಂದಿದೆ
ಬೆಂಗಳೂರು: ಕಾಂಗ್ರೆಸ್ (Congress) ಎಂದರೆ ಅದು ಅಧಿಕಾರದಿಂದ, ಅಧಿಕಾರಕ್ಕೋಸ್ಕರ ಇರುವ ಪಕ್ಷ. ಅಧಿಕಾರ ಇಲ್ಲವೆಂದರೆ ಕಾಂಗ್ರೆಸ್ ಪಕ್ಷದವರು ನೀರಿನಿಂದ ಹೊರಗೆ ಬಿದ್ದ ಮೀನಿನಂತೆ ಚಡಪಡಿಸುತ್ತಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಟೀಕಿಸಿದ್ದಾರೆ.
Advertisement
ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬದುಕಲು ಸಾಧ್ಯವೇ ಇಲ್ಲ. ಬಿಜೆಪಿ ಮತ್ತೊಂದು ಕಡೆ ಸೇವೆಯೇ ಸಂಘಟನೆ ಎಂಬ ಶ್ರೇಷ್ಠ ಭಾವನೆಯಿಂದ ದೇಶ ಮೊದಲು, ನಂತರ ಪಕ್ಷ ಎಂಬ ಉತ್ತಮ ಸಿದ್ಧಾಂತ ಹೊಂದಿದೆ. ಕೋವಿಡ್ ದಿನಗಳಲ್ಲಿ ದೇಶದ ಇತರ ರಾಜಕೀಯ ಪಕ್ಷದವರು ಮನೆಯಲ್ಲಿ ಕೂತಿದ್ದರು. ಆದರೆ ನಮ್ಮ ಪಕ್ಷವು ದೇಶದ ಲಕ್ಷಾಂತರ ಜನರ ಸಂಕಷ್ಟಕ್ಕೆ ಸ್ಪಂದಿಸಿತ್ತು ಎಂದು ವಿವರಣೆ ನೀಡಿದರು.ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆ ಪರಿಶೀಲಿಸಿ ಸೂಕ್ತ ಕ್ರಮ: ಸಿದ್ದರಾಮಯ್ಯ
Advertisement
ಇದೇ ವೇಳೆ ಬಿಜೆಪಿಯ ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ (Sudhakar Reddy) ಮಾತನಾಡಿ, ಇಲ್ಲಿ ಹಬ್ಬದ ವಾತಾವರಣ ಇದೆ. ಇದಕ್ಕಾಗಿ ವಿಜಯೇಂದ್ರ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಗುರಿ ಮೀರಿ ಸಾಧನೆ ಮಾಡಿ. ನಮ್ಮದು ಸೇವೆ, ನಿಷ್ಠೆಯೊಂದಿಗೆ ದೇಶಹಿತ ಪಕ್ಷ. ಕಾಂಗ್ರೆಸ್ಸಿನದು ಕುಟುಂಬದ ಪಕ್ಷ ಎಂದರು.
Advertisement
ಕಾಂಗ್ರೆಸ್, ಕುಟುಂಬ ಮೊದಲು, ದೇಶ ಕೊನೆಯಲ್ಲಿ ಎಂಬ ಧ್ಯೇಯ ಹೊಂದಿದೆ. ಕಾಂಗ್ರೆಸ್ ಪಕ್ಷವನ್ನು ವಿದೇಶಿಯರು ಸ್ಥಾಪಿಸಿದರೆ, ನಮ್ಮದು ಭಾರತೀಯರೇ ಸ್ಥಾಪಿಸಿದ ಪಕ್ಷ. ಕಾಂಗ್ರೆಸ್‌ನದು ಬೆಲೆ ಏರಿಸುವ, ಬೇಜವಾಬ್ದಾರಿ, ಹಗರಣಗಳ ಸರ್ಕಾರವಾಗಿದೆ. ಖರ್ಗೆ, ಸಿದ್ದರಾಮಯ್ಯರು ಭ್ರಷ್ಟರು. ಮುಖ್ಯಮಂತ್ರಿಯವರಿಗೆ ಆ ಹುದ್ದೆಯಲ್ಲಿ ಮುಂದುವರೆಯುವ ಹಕ್ಕಿಲ್ಲ. ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
Advertisement
ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಸ್ಯತ್ವ ಆಧಾರದಲ್ಲಿ ಪಕ್ಷ ಬೆಳೆಸುವುದಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಕುಟುಂಬ ಇದೆಯೇ ಎಂಬುದು ಅವರಿಗೆ ಮಹತ್ವದ್ದು. ಒಂದೊಮ್ಮೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಬೇಸರವಾಗಿ ಇಟಲಿಗೆ ಹೋದರೆ ಆ ಪಕ್ಷ ಇರುವುದಿಲ್ಲ. ಅದು ಲೀಡರ್‌ಗಳ ಪಕ್ಷ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿಸಿದರು.ಇದನ್ನೂ ಓದಿ: ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ
ಸದಸ್ಯತ್ವವನ್ನು ವಿಸ್ತೃತವಾಗಿ ಮಾಡಬೇಕಿದೆ. ಅದಕ್ಕಾಗಿ ಬೀದಿಗೆ ಇಳಿಯಬೇಕು. ಕಾಂಗ್ರೆಸ್ ಪಕ್ಷವು ಹೆಸರಿಗೆ ಬೇಕಾಗಿ ಹಣ ತಾವೇ ನೀಡಿ ಸದಸ್ಯರನ್ನು ಮಾಡುತ್ತದೆ. ಇಲ್ಲಿ ಹಾಗಿಲ್ಲ. ನಾವು ಸದಸ್ಯತ್ವಕ್ಕೆ ಶುಲ್ಕ ಇಟ್ಟಿಲ್ಲ. ಸಕ್ರಿಯ ಸದಸ್ಯರು 100 ರೂ. ಕೊಡಬೇಕಿದೆ. ಬಿಜೆಪಿಯ ಜೀವ ಕಾರ್ಯಕರ್ತರು ಮತ್ತು ಸದಸ್ಯರಲ್ಲಿದೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy)ಮಾತನಾಡಿ, ಸದಸ್ಯತ್ವ ನೋಂದಣಿ ಕಾರ್ಯವು ಹಬ್ಬದ ಮಾದರಿಯಲ್ಲಿ ನಡೆಯಲಿ. ರಾಜ್ಯದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸುವ ಸ್ಥಿತಿ ಬರಬಹುದು. ಆದ್ದರಿಂದ ಪಕ್ಷವನ್ನು ಬಲಪಡಿಸಲು ಶ್ರಮಿಸೋಣ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ತಳಮುಖವಾಗಿ ಮೇಲಕ್ಕೆ ಬೆಳೆದ ಪಕ್ಷ. ಇದರ ಶಕ್ತಿ ನಾಯಕರಲ್ಲ. ಬಿಜೆಪಿ ಶಕ್ತಿ ಕಾರ್ಯಕರ್ತರ ರೂಪದಲ್ಲಿದೆ. ಸಮಾಜದ ಅನೇಕಾನೇಕ ಪ್ರಕೋಷ್ಠಗಳಲ್ಲಿ ಕೆಲಸ ಮಾಡುವವರೇ ಕಾರ್ಯಕರ್ತರು. 1980ರಲ್ಲಿ 1% ರಷ್ಟು ಮತ ಪಡೆದರೆ ಖುಷಿ ಪಡುವ ಪಕ್ಷ ನಮ್ಮದಾಗಿತ್ತು. ಇದೀಗ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಬಿಜೆಪಿ. ಹಿಂದೆ ದೇಶದಲ್ಲಿ 18 ಕೋಟಿ ಸದಸ್ಯರಿದ್ದು, ರಾಜ್ಯದಲ್ಲಿ 1.04 ಕೋಟಿ ಸದಸ್ಯರಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ನವಚೈತನ್ಯ ನಮ್ಮ ಪಕ್ಷಕ್ಕೆ ಲಭಿಸಿದೆ. ನಮ್ಮ ಶಕ್ತಿ ಈಗ ಏರುಮುಖವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಆಡಳಿತವುಳ್ಳ ರಾಜ್ಯಗಳು ಇಳಿಮುಖವಾಗುತ್ತಿದೆ ಎಂದರು.
ಸAಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಪ್ರೀತಂ ಗೌಡ, ಶಾಸಕರಾದ ಗೋಪಾಲಯ್ಯ, ರಾಮಮೂರ್ತಿ, ಎಸ್‌ಆರ್ ವಿಶ್ವನಾಥ್, ಮುನಿರತ್ನ, ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕೋರ್ ಕಮಿಟಿ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಇದನ್ನೂ ಓದಿ: ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತ್ವ ಅಭಿಯಾನದ ಸಂಚಾಲಕ ನಂದೀಶ್ ರೆಡ್ಡಿ ಸ್ವಾಗತಿಸಿದರು. ಒಂದೇ ದಿನದಲ್ಲಿ 50.31 ಲಕ್ಷ ಜನರಿಗೂ ಹೆಚ್ಚು ಜನರು ಸದಸ್ಯರಾಗಿದ್ದಾರೆ. ಈಗ ಕರ್ನಾಟಕ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಸದಸ್ಯರ ನೋಂದಣಿ ಆಗಿದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಕಾರ್ಯಕ್ರಮ ನಿರ್ವಹಿಸಿದರು.