ಹಾವೇರಿ: ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣವನ್ನು ಪರಿಚಯ ಮಾಡಿಕೊಟ್ಟು ಕರಗತ ಮಾಡಿರುವುದೇ ಕಾಂಗ್ರೆಸ್ (Congress) ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಶಿಗ್ಗಾಂವಿಯಲ್ಲಿ (Shiggaon) ಮಾಧ್ಯಮಗಳೊಂದಿಗೆ ರಾಜ್ಯ ಸರ್ಕಾರದ ಸಚಿವರು ಉಪಚುನಾವಣೆಯಲ್ಲಿ ಅಕ್ರಮ ತಡೆಯಲು ಬರುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಚುನಾವಣಾ ಅಕ್ರಮ ತಡೆಯಲು ಎಲೆಕ್ಷನ್ ಕಮಿಷನ್ ಇದೆ. ಅವರು ಅವರ ಕಾರ್ಯವನ್ನು ಮಾಡುತ್ತಿದ್ದಾರೆ. ಆಡಳಿತ ಮಾಡುವ ಸಚಿವರು ಕೆಲಸ ಬಿಟ್ಟು ಅದನ್ನು ಸಚಿವರು ಮಾಡಲು ಬರುತ್ತಿರುವುದು ಹಾಸ್ಯಸ್ಪದ. ಇಡೀ ದೇಶಕ್ಕೆ ಕತ್ತಲ ರಾತ್ರಿ ರಾಜಕಾರಣ ಪರಿಚಯಿಸಿದವರೇ ಕಾಂಗ್ರೆಸ್‌ನವರು ಎಂದು ಹೇಳಿದರು. ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್
Advertisement
Advertisement
ವಕ್ಫ್ ಆಸ್ತಿ ವಿಚಾರದಲ್ಲಿ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತದೆ. ಸಾಧನೆ ಸರ್ಕಾರದ್ದು ಇರುತ್ತದೆ, ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತದೆ. ರೈತರಿಗೆ ಯಾರು ನೋಟಿಸ್ ಕೊಟ್ಟರು. 2024ರಲ್ಲಿ ರೈತರ ಪಹಣಿಯಲ್ಲಿ ದಾಖಲೆ ಕೂತಿದೆ. ಅದನ್ನು ಯಾವ ಸರ್ಕಾರ ಮಾಡಿದೆ ಎನ್ನುವುದು ಗೊತ್ತಾಗಿದೆ. ತಾವು ಮಾಡಿದ ತಪ್ಪು ಅವ್ಯವಹಾರ ತಾವು ಮಾಡುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುವ ಪ್ರವೃತ್ತಿ ಈ ಸರ್ಕಾರ ಮಾಡುತ್ತಿದೆ. ಎಲ್ಲವೂ ಸ್ಪಷ್ಟವಾಗಿದೆ. ತುಷ್ಟೀಕರಣ ರಾಜಕಾರಣ ಜನರಿಗೆ ಗೊತ್ತಿದೆ. ವಕ್ಫ್ ವಿಚಾರ ಉಪಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರು ಮಾತ್ರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ
Advertisement
ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ಬಿಡುಗಡೆಯ ದಾಖಲೆ ಇದೆ ಎಂದು ಹೇಳಿರುವ ಸಚಿವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಕೊಟ್ಟಿರುವ ದಾಖಲೆ ಕೊಡಲಿ. ಯಾವ ಯಾವ ಇಲಾಖೆಯಲ್ಲಿ ಎಷ್ಟು ವಿಶೇಷ ಅನುದಾನ ಕೊಟ್ಟಿದ್ದಾರೆ ದಾಖಲೆ ಕೊಡಲಿ. ಜನರು ಕೇಳುತ್ತಿದ್ದಾರೆ, ಯಾಕೆ ಮುಚ್ಚಿಡುತ್ತಾರೆ? ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಹೇಳುವುದಲ್ಲ. ನೂರು ಕೋಟಿ ವಿಶೇಷ ಅನುದಾನ ಕೊಟ್ಟಿರುವ ದಾಖಲೆ ನೀಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ
Advertisement
ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ದಿನ ಜನರ ವಿಶ್ವಾಸ, ಪ್ರೀತಿ ಹೆಚ್ಚಾಗುತ್ತಿದೆ. ಮುಂದೆ ಹೋಗುತ್ತ ಜನಸಾಗರವೇ ಸೇರಿ ಕ್ಷೇತ್ರದಲ್ಲಿ ಗೆಲುವಿನ ಯಾತ್ರೆ ಮುಂದುವರೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧ