ಬೆಂಗಳೂರು: ಶನಿವಾರ ಮಾಜಿ ಸಚಿವ ಡಿಕೆ ಶಿವಕುಮಾರ್ ಸ್ವಾಗತಕ್ಕೆ ಬಾರದೇ ಕೇವಲ ಪರಮೇಶ್ವರ್ ಭೇಟಿ ಮಾಡಿ ಗದಗಕ್ಕೆ ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಚಾಟಿ ಬೀಸಿದೆ.
ಡಿಕೆಶಿ ಸ್ವಾಗತಕ್ಕೆ ಕಾಂಗ್ರೆಸ್ ನಾಯಕರುಗಳು ಕಡ್ಡಾಯವಾಗಿ ಹಾಜರಿರಬೇಕು ಅಂತ ಹೈಕಮಾಂಡ್ ಸೂಚನೆ ನೀಡಿದ್ದರೂ ಸಿದ್ದರಾಮಯ್ಯ ಗದಗಕ್ಕೆ ತೆರಳಿದ್ದರು. ಸಂಜೆ ಬೆಂಗಳೂರಿಗೆ ವಾಪಸ್ ಆದರೂ ಕೇವಲ ಪರಮೇಶ್ವರ್ ನಿವಾಸಕ್ಕೆ ಭೇಟಿ ಕೊಟ್ಟು ಸುಮ್ಮನಾಗಿದ್ರು. ಡಿಕೆಶಿ ಮನೆಗೆ ಹೋಗಿರಲಿಲ್ಲ.
ಸಿದ್ದರಾಮಯ್ಯನವರ ಈ ವರ್ತನೆಗೆ ಹೈಕಮಾಂಡ್ ಗರಂ ಆಗಿದೆ. ಸೋನಿಯಾ ಗಾಂಧಿ ಸೂಚನೆ ಮೇರೆಗೆ ಅಹ್ಮದ್ ಪಟೇಲ್ ಕರೆ ಮಾಡಿ ಸಿದ್ದರಾಮಯ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬೋದು ನಮ್ಮ ಕರ್ತವ್ಯ. ಮೊದಲು ನೀವು ಹೋಗಿ ಭೇಟಿ ಮಾಡಿ ಅಂತ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದರಿಂದ ಗಲಿಬಿಲಿಯಾದ ಸಿದ್ದರಾಮಯ್ಯ ಅವರು ಡಿಕೆಶಿ ಭೇಟಿಗೆ ಮುಂದಾಗಿದ್ದು ಇಂದು ಬೆಳಗ್ಗೆ 10 ಗಂಟೆಗೆ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ತೆರಳಿ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಕನಕಪುರ ಬಂಡೆ ಸಿಡಿಗುಂಡು- ‘ಬಂಡೆ’ ಕೆತ್ತಿದ್ರೆ ಆಕೃತಿ, ಪೂಜೆ ಮಾಡಿದ್ರೆ ಸಂಸ್ಕೃತಿ