ಬೆಂಗಳೂರು: ಪಕ್ಷಕ್ಕೆ ಹಿನ್ನಡೆಯಾದರೆ ನೀವಿಬ್ಬರೇ ಕಾರಣ ಹೊರತು ಬೇರೆಯವರಲ್ಲ. ನಿಮ್ಮಿಬ್ಬರ ಮಾತು, ವಿಭಿನ್ನ ಹೇಳಿಕೆಗಳೇ ಪಕ್ಷಕ್ಕೆ ಮುಳುವಾಗಬಹುದು. ಎಚ್ಚರಿಕೆಯಿಂದ ಮಾತನಾಡಿ ಎಂದು ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal), ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್‌ಗೆ (DK Shivakumar) ಖಡಕ್ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಮಾತನಾಡಿದ ಕೆ.ಸಿ ವೇಣುಗೋಪಾಲ್, ನಿಮ್ಮಿಬ್ಬರ ನಡೆ ಮತ್ತು ನುಡಿ ಪಕ್ಷಕ್ಕೆ ಸವಾಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ರಾಷ್ಟ್ರಮಟ್ಟದಲ್ಲಿ ಪಕ್ಷದ ಅಸ್ತಿತ್ವ ಉಳಿಸುವ ಗೆಲುವಾಗಲಿದೆ. ಪಕ್ಷ ಇದ್ದರೆ ವ್ಯಕ್ತಿ, ಪಕ್ಷವೇ ಸೋತರೆ ಯಾರು ಏನು ಮಾಡಲು ಆಗಲ್ಲ. ನಿಮ್ಮಿಬ್ಬರ ಮಾತು, ವಿಭಿನ್ನ ಹೇಳಿಕೆಗಳೇ ಪಕ್ಷಕ್ಕೆ ಮುಳುವಾಗಬಹುದು ಎಚ್ಚರಿಕೆಯಿಂದ ಮಾತನಾಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಎಲೆಕ್ಷನ್ ಗೆಲ್ಲಲು ಕಾಂಗ್ರೆಸ್ ರೋಡ್‌ಮ್ಯಾಪ್ – ಎಲ್ಲೆಲ್ಲಿ ಏನೇನು ಕಾರ್ಯಕ್ರಮ?
ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಅನಗತ್ಯ ಹೇಳಿಕೆಗಳು ಬೇಡ. ಪಕ್ಷಕ್ಕೆ ಹಿನ್ನಡೆ ಆದರೆ ನೀವಿಬ್ಬರೆ ಕಾರಣ ಹೊರತು ಬೇರೆಯವರಲ್ಲ. ಇದನ್ನ ನೆನಪಿನಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಮುಂಚಿತವಾಗಿ 150 ಸ್ಥಾನ ಘೋಷಣೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆ ಯೋಚನೆ ಮಾಡಿ ಹೇಳಿ. ಅದೇ ಅನುಕೂಲಕರ ಅನ್ನಿಸಿದ್ರೆ ಹಾಗೇ ಮಾಡೋಣ. ಒಟ್ಟಾರೆ ಇನ್ನು ನಾಲ್ಕು ತಿಂಗಳಲ್ಲಿ ಇಬ್ಬರ ಪ್ರತಿಷ್ಟೆಯ ಕಾರಣಕ್ಕೆ ಪಕ್ಷಕ್ಕೆ ಹಿನ್ನಡೆಯಾದರೆ ಹೈಕಮಾಂಡ್ ಅದನ್ನ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜೊತೆ ಸಿನಿಮಾ ಮಾಡುವೆ : ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ