– ಸದ್ಯಕ್ಕೆ ಸಂಪುಟ ಪುನಾರಾಚನೆ ಇಲ್ಲ ಎಂದ ಸಿಎಂ
ಬೆಂಗಳೂರು: ವಾಲ್ಮೀಕಿ ನಿಗಮ, ಮುಡಾ ನಿವೇಶನ ಹಂಚಿಕೆ ಆರೋಪಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದಲ್ಲಿ ದಸರಾ ಬಳಿಕ ಮೇಜರ್ ಸರ್ಜರಿ ಆಗುತ್ತದೆ ಎನ್ನಲಾಗಿದೆ.
ಸಿದ್ದರಾಮಯ್ಯ ಮನೆಯಲ್ಲಿ ಅಗ್ರ ನಾಯಕರ ಜೊತೆ ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಚಚೆ ನಡೆಸಿ ಸಚಿವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ಸಚಿವರ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಸಂಪುಟ ಪುನಾರಚನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ‘ಪಬ್ಲಿಕ್ ಟಿವಿ’ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಚಿವರ ವಿರುದ್ಧ ವೇಣುಗೋಪಾಲ್ ಗರಂ ಆಗಿದ್ದಾರೆ. ಸಭೆಯಲ್ಲಿ ಏನು ಚರ್ಚೆ ಆಗಿದೆ? ಕಾಂಗ್ರೆಸ್ ಹೈಕಮಾಂಡ್ ನಾಯಕರ ಎಚ್ಚರಿಕೆ ಏನು ಎಂಬ ಇಲ್ಲಿದೆ.
ದಸರಾ ವೇಳೆಗೆ ಸಂಪುಟ ಪುನಾರಚನೆ?
ನಿಮ್ಮ ಕಾರ್ಯವೈಖರಿ ನಮಗೆ ತೃಪ್ತಿದಾಯಕವಾಗಿಲ್ಲ. 2 ತಿಂಗಳಲ್ಲಿ ಸರಿಪಡಿಸಿಕೊಳ್ಳದಿದ್ದರೆ ಖಾತೆ ಕಳೆದುಕೊಳ್ಳಲು ರೆಡಿಯಾಗಿ. ತವರು ಜಿಲ್ಲೆ-ಉಸ್ತುವಾರಿ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದೀರಿ. ರಾಜ್ಯ ಪ್ರವಾಸ ಮಾಡಿ ಇಲಾಖೆಯಲ್ಲಿ ಸುಧಾರಣೆ ತರಬೇಕು. ನೀವು ಸರಿಯಾಗಿ ಕೆಲಸ ಮಾಡಿದ್ರೆ ಲೋಕಸಭೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತಿದ್ವಿ ಎಂದು ಸಚಿವರಿಗೆ ಕೆ.ಸಿ.ವೇಣುಗೋಪಾಲ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.