ಬೆಳಗಾವಿ: ಸರ್ಕಾರವನ್ನು ಸುಭದ್ರ ಮಾಡಿಕೊಳ್ಳಲು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು (Guarantee Scheme) ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ, ಶಕ್ತಿ ಯೋಜನೆಯ (Shakthi Scheme) ಸಾವಿರಾರು ಕೋಟಿ ರೂ. ಹಣವನ್ನೂ ಬಾಕಿ ಉಳಿಸಿಕೊಂಡಿರುವುದು ಈಗ ದಾಖಲೆ ಸಮೇತ ಬೆಳಕಿಗೆ ಬಂದಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಂದ ಬರೋಬ್ಬರಿ 4,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕಳೆದ ಎರಡೂವರೆ ವರ್ಷದಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಒಟ್ಟು 4 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಪಬ್ಲಿಕ್ ಟಿವಿ (PUBLiC TV) ವಿಸ್ತೃತ ವರದಿ ಬೆನ್ನಲ್ಲೇ ಶಕ್ತಿ ಯೋಜನೆಗೆ ಅನುದಾನ ರಿಲೀಸ್ ಆಗಿದೆ.
ನಾಲ್ಕೂ ನಿಗಮಗಳ 441 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ 171.41 ಕೋಟಿ ರೂ., ಬಿಎಂಟಿಸಿ 75.65 ಕೋಟಿ ರೂ., ಕೆಕೆಆರ್‌ಟಿಸಿ 86.92 ಕೋಟಿ ರೂ., ಎನ್‌ಡಬ್ಲ್ಯೂಕೆಆರ್‌ಟಿಸಿ 107.67 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಇತ್ತ ಗೃಹಲಕ್ಷ್ಮೀಯರ ಹಣವೂ ಬಾಕಿ ಇದೆ. 2023ರ ಜೂನ್ ತಿಂಗಳಲ್ಲಿ ಯೋಜನೆ ಆರಂಭವಾಗಿ ಮೊದಲ ಕಂತು ಹಾಕಿದ್ದು 2023ರ ಆಗಸ್ಟ್‌ನಲ್ಲಿ ಒಟ್ಟು 5 ತಿಂಗಳು ಖಾತೆಗೆ ಹಣ ಹಾಕಿತ್ತು. 2024ರಲ್ಲಿ ಪೂರ್ತಿ 12 ತಿಂಗಳು ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆ ಆಗಿದೆ. ಆದರೆ 2025ರಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆರ್ಥಿಕ ವಿಘ್ನ ಎದುರಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿಯ 5 ಸಾವಿರ ಕೋಟಿ ಫಟಾಫಟ್ ಲೂಟಿ ಹೊಡೆದರು: ಆರ್.ಅಶೋಕ್ ಟೀಕೆ
ಶಕ್ತಿ ಯೋಜನೆಗೆ ಸರ್ಕಾರ ಉಳಿಸಿಕೊಂಡಿರುವ ಬಾಕಿ ಎಷ್ಟು?
* 2023-2024 ರ ವರ್ಷದಲ್ಲಿ
ಕೆಎಸ್‌ಆರ್‌ಟಿಸಿ – 452.62 ಕೋಟಿ ರೂ.
ಬಿಎಂಟಿಸಿ – 205.43. ಕೋಟಿ ರೂ.
ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 283.91 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 238.66 ಕೋಟಿ ರೂ.
ಒಟ್ಟು ಬಾಕಿ- 1,180.62 ಕೋಟಿ ರೂ.
* 2024-2025
ಕೆಎಸ್‌ಆರ್‌ಟಿಸಿ -495.80 ಕೋಟಿ ರೂ.
ಬಿಎಂಟಿಸಿ- 194.78 ಕೋಟಿ ರೂ.
ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 275.55 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 204.32 ಕೋಟಿ ರೂ.
ಒಟ್ಟು – 1,170.45 ಕೋಟಿ ರೂ.
* 2025-26(ನವೆಂಬರ್ ಅಂತ್ಯಕ್ಕೆ)
ಕೆಎಸ್‌ಆರ್‌ಟಿಸಿ – 631.73 ಕೋಟಿ ರೂ.
ಬಿಎಂಟಿಸಿ – 310.6 ಕೋಟಿ ರೂ.
ವಾಯುವ್ಯ ಕರ್ನಾಟಕ ಸಾರಿಗೆ ನಿಗಮ -428.64 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 284.43 ಕೋಟಿ ರೂ.
ಒಟ್ಟು-1,655.40 ಕೋಟಿ ರೂ.
* 2.5 ವರ್ಷಗಳಲ್ಲಿ 4 ನಿಗಮಗಳಿಂದ ಸರ್ಕಾರ ಉಳಿಸಿಕೊಂಡ ಒಟ್ಟು ಬಾಕಿ ಹಣ
ಕೆಎಸ್‌ಆರ್‌ಟಿಸಿ – 1580.15 ಕೋಟಿ ರೂ.
ಬಿಎಂಟಿಸಿ – 710.81 ಕೋಟಿ ರೂ.
ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 988.1 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 727.41 ಕೋಟಿ ರೂ.
ಒಟ್ಟು ಬಾಕಿ- 4,006.47 ಕೋಟಿ ರೂ.

