ಬೆಂಗಳೂರು: ಕಾಂಗ್ರೆಸ್ ಸರ್ಕಾರ (Gongress Government) 5 ಗ್ಯಾರಂಟಿ ಘೋಷಣೆ ಮಾಡಿರುವುದನ್ನ ನಾನು ಸ್ವಾಗತ ಮಾಡುತ್ತೇನೆ. ಆದ್ರೆ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗದಿರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಜಾರಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ತಮ್ಮ ಪ್ರಣಾಳಿಕೆಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರೂ ಇತ್ತೀಚೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಮನೆಯಲ್ಲಿ 7 ಜನ ಇದ್ದರೆ, 70 ಕೆ.ಜಿ ಅಕ್ಕಿ ಸಿಗುತ್ತೆ ಅಂತಾ ಹೇಳಿದ್ದಾರೆ. ಆದ್ರೆ ಈಗ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ಅಂತಾ ಹೇಳ್ತಿದ್ದಾರೆ, ಇದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
Advertisement
Advertisement
ವೆನಿಜುವೆಲಾ ಎನ್ನುವ ರಾಷ್ಟ್ರದ ಇತಿಹಾಸ ನಮ್ಮ ಕಣ್ಣಮುಂದೆ ಇದೆ. ಅಲ್ಲಿಯೂ ಇದೇ ರೀತಿ ಕೊಡುತ್ತಾ ರಾಷ್ಟ್ರವೇ ದಿವಾಳಿ ಆಗಿಹೋಯ್ತು. ಅದೇ ರೀತಿ ನಮ್ಮ ರಾಜ್ಯ ದಿವಾಳಿಯಾಗಬಾರದು. ತಾವು ಬುದ್ಧಿವಂತರಿದ್ದೀರಿ, ಹಣ ಜೋಡಿಸುವ ಸಾಮರ್ಥ್ಯವಿದೆ, ಅನುಭವ ಇದೆ. ಮೊದಲು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಿ ಎಂದು ಮನವಿ ಮಾಡಿದ್ದಾರೆ.
Advertisement
Advertisement
ರಾಜ್ಯದ ಸಂಪನ್ಮೂಲ ಎಷ್ಟಿದೆ? ರಾಜ್ಯದ ಸಾಲ ಎಷ್ಟಿದೆ? ಮೂಲ ಸೌಕರ್ಯದ ಮೇಲೆ ಹೂಡಿಕೆ ಎಷ್ಟಾಗುತ್ತಿದೆ? ಎಂಬುದನ್ನ ತಿಳಿಸಿ. ಏಕೆಂದರೆ ಆದಾಯ ಇಲ್ಲದೇ ಯೋಜನೆ ಮುಂದುವರಿಸಲಾಗಲ್ಲ. ಮೂಲ ಸೌಕರ್ಯ ಹೂಡಿಕೆಯಿಂದಲೇ ಉದ್ಯೋಗ ಸೃಷ್ಟಿ ಎಲ್ಲವೂ ಸಾಧ್ಯ. ಮೂಲ ಸೌಕರ್ಯಗಳಿಗೆ ಹೂಡಿಕೆ ಎಷ್ಟು? ಸಾಲದ ಮೇಲಿನ ಬಡ್ಡಿ ಎಷ್ಟಿದೆ? ಸರ್ಕಾರಿ ನೌಕರರ ವೇತನ, ನಿವೃತ್ತಿ ವೇತನಕ್ಕೆ ಎಷ್ಟು ಹಣ ವಿನಿಯೋಗವಾಗ್ತಿದೆ? ಎಂಬುದನ್ನ ತಿಳಿಸಿ ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಹಲವು ಯೋಜನೆಗಳು ಚಾಲ್ತಿಯಲಿದೆ. ಉದಾಹರಣೆಗೆ ರೈತರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 6 ಸಾವಿರ ರೂ. ಸೇರಿಸಿ ಕೊಡ್ತಿದೆ. ಹಾಗಾಗಿ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯಿಸಿದ್ದಾರೆ.