ಕೋಲಾರ: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಜಾರಿಗೆ ತಂದಿದ್ದ 5 ಗ್ಯಾರಂಟಿಗಳ (Guarantee) ಫಲಾನುಭವಿಗಳಿಗೆ ಅದರ ಫಲ ಮೂರು ನಾಲ್ಕು ತಿಂಗಳಾದರೂ ತಲುಪದ್ದಕ್ಕೆ ಕೋಲಾರದಲ್ಲಿ (Kolar) ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಮೂಲಕ ಭರ್ಜರಿ ಬಹುಮತದ ಸರ್ಕಾರ ರಚನೆ ಮಾಡಿದೆ. ಆದರೆ ಅಧಿಕಾರಕ್ಕೆ ಬರಲು ಸಹಾಯ ಮಾಡಿದ ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರ ಹರಸಾಹಸ ಪಡುವಂತಾಗಿದೆ. ಐದು ಗ್ಯಾರಂಟಿಗಳ ಪೈಕಿ ಬಹಳ ಮಹತ್ವದ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಮೂರು ತಿಂಗಳಿಂದ ಕೋಲಾರದಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಹಣ ತಲುಪಿಲ್ಲ. ಜೂನ್ ತಿಂಗಳಲ್ಲಿ ಬಂದ ಹಣ ಈವರೆಗೂ ಡಿಬಿಟಿ ಹಣ ಬಂದಿಲ್ಲ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ
Advertisement
Advertisement
ಕೋಲಾರ ಜಿಲ್ಲೆಯಲ್ಲಿ ಕಳೆದ ವರ್ಷ ಭೀಕರ ಬರಗಾಲವಿತ್ತು, ದುರಾದೃಷ್ಟವಶಾತ್ ಈ ವರ್ಷವೂ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಮಳೆ ಬಂದು ಎರಡು ತಿಂಗಳೇ ಕಳೆದಿದೆ. ಸಾಲು ಸಾಲು ಹಬ್ಬಗಳು, ಹೀಗಿರುವಾಗ ಸಂಕಷ್ಟದಲ್ಲಿರುವ ಬಡವರಿಗೆ ಕೊನೆ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕವಾದರೂ ನೆರವಿಗೆ ನಿಲ್ಲಬೇಕಿತ್ತು. ಆದರೆ ಸರ್ಕಾರ ಯೋಜನೆಗೆ ಹಣ ಹೊಂದಿಸಲಾಗದೆ ಪರದಾಡುತ್ತಿದೆ ಎಂದು ಜನ ಆರೋಪಿಸಿದ್ದಾರೆ.
Advertisement
ಇನ್ನು ಕೋಲಾರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ 11,88,339 ಫಲಾನುಭವಿಗಳಿದ್ದಾರೆ. ಈ ಪೈಕಿ ಅಂತ್ಯೋದಯ ಕಾರ್ಡ್ಗಳು 29,845 ಜನರು ಹೊಂದಿದ್ದರೆ, ಬಿಪಿಎಲ್ ಕಾರ್ಡ್ಗಳ ಸಂಖ್ಯೆ 3,00,673 ಇವೆ. ಒಟ್ಟು 3,35,518 ಕಾರ್ಡ್ಗಳಿವೆ. ಇನ್ನು ಕಳೆದ ಜೂನ್‌ವರೆಗೆ ಫಲಾನುಭವಿಗಳಿಗೆ ಡಿಪಿಟಿ ಮೂಲಕ ಅನ್ನಭಾಗ್ಯ ಯೋಜನೆಯ ಐದು ಕೆಜಿ ಅಕ್ಕಿಯ ಹಣ ಸಂದಾಯವಾಗಿದೆ. ಆದರೆ ಜುಲೈ, ಆಗಸ್ಟ್, ಸೆಪ್ಟಂಬರ್ ಮೂರು ತಿಂಗಳ ಹಣ ಈವರೆಗೂ ಪಾವತಿಯಾಗಿಲ್ಲ. ಹಾಗಾಗಿ ಸರ್ಕಾರ ಆರಂಭದಲ್ಲಿ ಪ್ರತಿ ತಿಂಗಳು ಹಣ ಹಾಕುತ್ತಿತ್ತು. ಇದಾದ ನಂತರ ಸರ್ಕಾರ ತಮ್ಮ ಉಳಿವಿಗಾಗಿಯೇ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರಿಯಾಗಿ ಹಣ ಸಂದಾಯವಾಗುತ್ತಿಲ್ಲ.
Advertisement
ಕೇವಲ ಅನ್ನಭಾಗ್ಯ ಯೋಜನೆಯ ಹಣವಷ್ಟೇ ಅಲ್ಲ. ಯಾವುದೇ ಯೋಜನೆಯ ಹಣವೂ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಹಾಗೂ ಜನರ ಮಾತಾಗಿದೆ. ಇನ್ನು ಆಹಾರ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರವಾಗಿ ಜೂನ್ ತಿಂಗಳಲ್ಲಿ ಫಲಾನುಭವಿಗಳಿಗೆ ಹಣ ಸಂದಾಯ ಮಾಡಲಾಗಿದೆ. ಈಗ ಉಳಿದ ಮೂರು ತಿಂಗಳ ಹಣ ಪಾವತಿ ಮಾಡಬೇಕಿದೆ.ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬರಲು ಯತ್ನಿಸಿದ್ದ ಕಾಡಾನೆ ಕಂದಕಕ್ಕೆ ಬಿದ್ದು ಸಾವು
ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಒಂದಲ್ಲ ಒಂದು ಕಾರಣದಿಂದ ಸದ್ದು ಮಾಡುತ್ತಲೇ ಇದೆ. ಕೂಡಲೇ ಸರ್ಕಾರ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿದ್ದರೆ, ಬಡವರಿಗೆ ಅದನ್ನೇ ನಂಬಿರುವವರಿಗೆ ಅನುಕೂಲವಾಗುತ್ತದೆ ಎನ್ನುವುದು ಜನರ ಮಾತಾಗಿದೆ.